- ಎನ್‌. ಜಯಂತಿ

ವ್ಯಾಲೆಂಟೈನ್‌ ಡೇ ಪ್ರೀತಿಸುವ ಹೃದಯಗಳ ವಿಶೇಷ ದಿನ. ಈ ವಿಶೇಷ ದಿನದಂದು ನೀವು ಕೂಡ ನಿಮ್ಮ ಪ್ರೀತಿಪಾತ್ರರಿಗೆ ಅಂದರೆ ಸಂಗಾತಿಗೆ ವಿಶಿಷ್ಟ ರೀತಿಯಲ್ಲಿ ಸರ್‌ಪ್ರೈಸ್‌ ಕೊಡಲು ಇಚ್ಛಿಸುವಿರಾದರೆ, ನಿಮ್ಮ ಮನೆಯಲ್ಲಿ ಪ್ರೀತಿಯ ಪರಿಮಳ ಸೂಸಲು ಅಪೇಕ್ಷಿಸುವಿರಾದರೆ ನಿಮ್ಮ ಮನೆಯನ್ನು ರೊಮ್ಯಾನ್ಸ್ ಹಾಗೂ ಪ್ರೀತಿಯ ಅಲಂಕಾರದಿಂದ ಸಜ್ಜುಗೊಳಿಸಿ. ನಿಮ್ಮ ಡೆಕೊರೇಶನ್‌ ಈ ಕೆಳಕಂಡಂತೆ ಇದ್ದರೆ ಅದರ ರೋಮಾಂಚನವೇ ಬೇರೆ ಆಗಿರುತ್ತದೆ.

ಸಿಂಬಲ್ ಆಫ್‌ ಲವ್

ಹೃದಯಾಕಾರದ ಬಲೂನುಗಳು, ಗುಲಾಬಿ ಎಲೆಗಳು, ಹೃದಯದ ಆಕಾರದ ದಿಂಬುಗಳು, ಗುಲಾಬಿ ಹೂಗಳ ಗುಚ್ಛ, ಹೃದಯಾಕಾರದ ಫೋಟೋಫ್ರೇಮ್ ಗಳು, ಸುಂದರವಾದ ಚಿತ್ರಗಳನ್ನು ಮನೆಯ ಮೂಲೆ ಮೂಲೆಯಲ್ಲಿ ಇಟ್ಟು ಅಲಂಕರಿಸಿ. ಬೆಡ್‌ರೂಮಿನಲ್ಲಿ ಕೆಂಪು ಬಣ್ಣದ ಹೊದಿಕೆ ಹೊದಿಸಿ. ಅದರ ಮೇಲೆ ಹೃದಯಾಕಾರದ ಕುಶನ್ಸ್ ಮತ್ತು ಪಿಲ್ಲೋ ಹಾಕಿ ಬೆಡ್‌ರೂಮಿನ ಗೋಡೆಯ ಮೇಲೆ ಕೆಂಪು ರಿಬ್ಬನ್‌ನಿಂದ ನಿಮ್ಮ ವ್ಯಾಲೆಂಟೈನ್‌ಗೆ ಒಂದು ಸುಂದರವಾದ ಲವ್ ಮೆಸೇಜ್‌ ಬರೆಯಿರಿ.

Ghar

ಮನೆಯಲ್ಲಿ ಕ್ಯಾಂಡಲ್ ಲೈಟ್‌ ಡಿನ್ನರ್‌

ಮನೆಯಿಂದ ಹೊರಗೆ ಜನನಿಬಿಡ ಪ್ರದೇಶದಲ್ಲಿ ಕ್ಯಾಂಡಲ್ ಲೈಟ್‌ ಡಿನ್ನರ್‌ ಮಾಡುವುದಕ್ಕಿಂತ ನಿಮ್ಮದೇ ಡೈನಿಂಗ್‌ ಟೇಬಲ್ ಮೇಲೆ ಕ್ಯಾಂಡಲ್ ಲೈಟ್‌ ಡಿನ್ನರ್‌ ಮಾಡುತ್ತ ಪರಸ್ಪರರ ಅಂತರಂಗದ ಕ್ಷಣಗಳ ಆನಂದ ಪಡೆಯಬಹುದು.

ಕ್ಯಾಂಡಲ್ ಲೈಟ್‌ ಡಿನ್ನರ್‌ಗಾಗಿ ಟೇಬಲನ್ನು ವಿಶಿಷ್ಟ ರೀತಿಯಲ್ಲಿ ಸಜ್ಜುಗೊಳಿಸಬೇಕಾಗುತ್ತದೆ. ಟೇಬಲ್ ಮೇಲೆ ಕೆಂಪು ಹಾಗೂ ಬಿಳಿ ವರ್ಣದ ಟೇಬಲ್ ಕ್ಲಾಥ್‌ನ್ನು ಹಾಸಿ. ಆ ಟೇಬಲ್ಗೆ ರೊಮ್ಯಾಂಟಿಕ್‌ ಟಚ್‌ ಕೊಡಲು ಅದರ ಮೇಲೆ ಬಿಳಿ ಹಾಗೂ ಕೆಂಪು ವರ್ಣದ ಮೇಣದ ಬತ್ತಿಗಳನ್ನು ಉರಿಸಿ. ಸುಂದರವಾದ ಹೂದಾನಿಯೊಳಗೆ  ಕೆಂಪು ಗುಲಾಬಿಗಳ ಬೊಕೆ ಹಾಕಿ. ನಿಮಗೆ ಇಷ್ಟವಾದರೆ ಸುಂದರವಾದ ಪಾರದರ್ಶಕ ಗ್ಲಾಸಿನ ಬೌಲ್‌ನಲ್ಲಿ ಗುಲಾಬಿಯ ಎಸಳುಗಳನ್ನು ಹಾಕಿ ಅದರಲ್ಲಿ ತೇಲುವ ಮೇಣದ ಬತ್ತಿಗಳನ್ನು ಉರಿಸಿ.

ನಿಮ್ಮ ಡಿನ್ನರ್‌ನ ಕ್ರಾಕರಿ ಕೂಡ ಕೆಂಪು ಹಾಗೂ ಬಿಳಿ ಬಣ್ಣದ್ದಾಗಿರಲಿ. ಒಂದು ಗಾಜಿನ ಗ್ಲಾಸಿನಲ್ಲಿ ಬಿಳಿ ಹಾಗೂ ಕೆಂಪು ವರ್ಣದ ನ್ಯಾಪ್‌ಕಿನ್‌ನ್ನು ಸುಂದರವಾದ ಸ್ಟೈಲ್‌ನಲ್ಲಿ ಮಡಿಚಿ ಟೇಬಲ್ ಮೇಲೆ ಇಡಿ. ನಿಜ ಹೇಳಬೇಕೆಂದರೆ, ಈ ಎಲ್ಲ ವ್ಯವಸ್ಥೆಗಳನ್ನು ನೋಡಿ ಸಂಗಾತಿ ನಿಮ್ಮ ನಿಕಟ ಬರದೇ ಇರುವಂತೆ ತಡೆಯಲು ಸಾಧ್ಯವೇ ಇಲ್ಲ.

ನೀವು ಮಾರುಕಟ್ಟೆಯಲ್ಲಿ ಒಂದು ಕಾಫಿ ಮಗ್‌ ಖರೀದಿಸಿ, ನಿಮ್ಮಿಬ್ಬರ ಫೋಟೋವನ್ನು ಅದರ ಮೇಲೆ ಫ್ರಿಂಟ್‌ ಮಾಡಿ ಅದನ್ನು ಡೈನಿಂಗ್‌ ಟೇಬಲ್ ಮೇಲೆ ಇಡಬಹುದು. ಟೇಬಲ್ ಡೆಕೋರೇಶನ್‌ನ ಈ ಪರಿ ಸಂಗಾತಿಗೆ ಸಾಕಷ್ಟು ಖುಷಿಯ ಸಿಂಚನ ಮೂಡಿಸಬಹುದು.

Ghar

ಡ್ರಾಯಿಂಗ್‌ ರೂಮಿನ ಅಲಂಕಾರ

ಒಂದು ಫೋಟೋ ಫ್ರೇಮ್ ಸಿದ್ಧಪಡಿಸಿಕೊಳ್ಳಿ. ಅದರಲ್ಲಿ ಬೇರೆ ಬೇರೆ ರೀತಿಯ ರೆಡ್‌ ಹಾರ್ಟ್‌ ಶೇಪ್‌ ಪೇಪರಿನ ಮೇಲೆ ನಿಮ್ಮ ಸಂಗಾತಿಯ ವಿಶೇಷತೆಗಳನ್ನು ನಮೂದಿಸಿ. ಈ ಫೋಟೋ ಫ್ರೇಮನ್ನು ನೀವು ಡ್ರಾಯಿಂಗ್‌ ರೂಮಿನಲ್ಲಿ ಅಂದವಾಗಿ ಪೇರಿಸಿ ಇಡಬಹುದು.

ಡ್ರಾಯಿಂಗ್‌ ರೂಮಿನಲ್ಲಿ ನೀವು ಪ್ಲೇಟಿಂಗ್‌ ಹಾರ್ಟ್‌ ಬ್ಯಾಕ್‌ ಡ್ರಾಪ್‌ನ್ನು ತೂಗುಹಾಕಬಹುದು. ಗಾಳಿಯ ಅಲೆಯೊಂದಿಗೆ ಈ ಪ್ರೀತಿಯ ಸೊಗಡು ಎಲ್ಲೆಲ್ಲೂ ಪಸರಿಸುವುದು. ಬಣ್ಣಬಣ್ಣದ ಕವರ್‌ಗಳ ಮೇಲೆ ಪ್ರೀತಿಯ ಸಾಲುಗಳನ್ನು ಬರೆದು ತೂಗು ಹಾಕಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ