ಸೆಕ್ಸ್ ಇಲ್ಲಿ ಕಾಮನ್‌ ಬಿಡಿ

ನೀವು ಮೇಲಿನ ಶೀರ್ಷಿಕೆ ನೋಡಿ ಏನೇನೋ ಚಿಂತಿಸಲು ಹೋಗಬೇಡಿ. ಹೀಗೊಂದು ಮಹಾನ್‌ ಸ್ಟೇಟ್‌ಮೆಂಟ್‌ನ್ನು ಕೊಟ್ಟವಳು ರಾಧಿಕಾ ಆಪ್ಟೆ. ಈಕೆಯ ಹೊಸ ಚಿತ್ರದ ಹಾಟ್‌ ದೃಶ್ಯವೊಂದು ವೈರಲ್ ಆದಾಗ ಈ ರೀತಿ ತಿಪ್ಪೆ ಸಾರಿಸಿದ್ದಾಳೆ. ಈಕೆಯ ಮುಂದಿನ ಹೊಸ ಚಿತ್ರ `ದಿ ವೆಡ್ಡಿಂಗ್‌ ಗೆಸ್ಟ್'ನ ಹಾಟ್‌ ದೃಶ್ಯ ಲೀಕ್‌ ಆದದ್ದೇ ತಡ, ಇಂಥ ಅಣಿಮುತ್ತು ಉದುರಿಸಿದ್ದಾಳೆ. ರಾಧಿಕಾ ಹೇಳುವುದೆಂದರೆ, ಜನ ಇಲ್ಲಿ ಸೆಕ್ಸ್ ಕುರಿತು ಮಾತನಾಡಲು ಬಯಸುವುದಿಲ್ಲ ಎಂಬುದೊಂದು ವಿಡಂಬನೆ. ಆದರೆ ಜನರ ಮಧ್ಯೆ ಸೆಕ್ಸ್ ಸಂಬಂಧ ಕಾಮನ್‌. ಜನ ಮಾಡುವುದೂ ಅದನ್ನೇ.... ಆದರೆ ಬಾಯಲ್ಲಿ ಹೇಳುವುದಿಲ್ಲ ಅಷ್ಟೆ. ಆಲ್ ದಿ ಬೆಸ್ಟ್ ರಾಧಿಕಾ, ಇಂಥ ನಿನ್ನ ಹುರುಳಿಲ್ಲದ ಮಾತುಗಳಿಂದ ಎಲ್ಲರ ಬಾಯಿಗೆ ಬೀಗ ಹಾಕುತ್ತಿರುವೆ!

ಮೊದಲ ವಿವಾಹ ವಾರ್ಷಿಕೋತ್ಸವ

ದೀಪಿಕಾ ರಣವೀರ್‌ರ ಮದುವೆ ಆದಾಗಿನಿಂದ ಈ ಜೋಡಿ ಚರ್ಚೆಯಲ್ಲಿದೆ. ಇವರ ಬೊಂಬಾಟ್‌ ಬಾಂಧವ್ಯದ ಬಗ್ಗೆ ಎಲ್ಲೆಲ್ಲೂ ಹೊಗಳಿಕೆ ಮಾತುಗಳೇ! ಈ ಜೋಡಿ `ಬಿ' ಟೌನ್‌ನಲ್ಲಿ ಬಲು ಚರ್ಚಿತರು. ಫ್ಯಾನ್ಸ್ ಸಹ ಇವರ ಎಲ್ಲಾ ವಿಷಯ ತಿಳಿಯ ಬಯಸುತ್ತಾರೆ. ಕಳೆದ ವರ್ಷ ನವೆಂಬರ್‌ 15ರಂದು ಇವರು ಶಾಸ್ತ್ರೋಕವಾಗಿ ವಿವಾಹವಾಗಿದ್ದರು. ಕಳೆದ ತಿಂಗಳು ಇವರು ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಮೊದಲು ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ನಂತರ ಪಂಜಾಬಿನ ಅಮೃತಸರ್‌ ನಗರದ ಸ್ವರ್ಣ ಮಂದಿರಕ್ಕೆ ಪರಿವಾರ ಸಮೇತ ಭೇಟಿ ಕೊಟ್ಟು, ಮುಂಬೈನಲ್ಲಿ ಗ್ರಾಂಡ್‌ ಪಾರ್ಟಿ ನಡೆಸಿದರು. ಮೆನಿ ಮೆನಿ ಹ್ಯಾಪಿ ರಿಟರ್ಸ್ ಆಫ್‌ ದಿ ಡೇ ದೀಪ್‌ವೀರ್‌!

ಗಾಯಗೊಂಡ ಅಕ್ಷಯ್

ಖತರೋಂಕೀ ಕಿಲಾಡಿ ಎಂದೇ ಖ್ಯಾತಗೊಂಡ ಮೇರು ಸ್ಟಂಟ್‌ ನಟ ಅಕ್ಷಯ್‌ ಕುಮಾರ್‌ `ಸೂರ್ಯವಂಶಿ' ಚಿತ್ರದ ಶೂಟಿಂಗ್‌ನಲ್ಲಿ ಗಾಯಗೊಂಡ. ಆದರೆ ಆತ ಚಿತ್ರೀಕರಣ ನಿಲ್ಲಿಸಲಿಲ್ಲ. ಅಸಲಿಗೆ ಶೂಟಿಂಗ್‌ನಲ್ಲಿ ಆತನ ಕೈಗಳಿಗೆ ಅಪಾರ ಪೆಟ್ಟು ಬಿದ್ದು ದೊಡ್ಡ ಗಾಯವಾಗಿತ್ತು. ಇದಾಗಿ ಬೇಸಿಕ್‌ ಟ್ರೀಟ್‌ಮೆಂಟ್‌ ನೀಡಲಾಯಿತು. ಅಲ್ಲಿಂದ ಸತತ ಶೂಟಿಂಗ್‌ ಮುಂದುವರಿಯಿತು. ಈ ಚಿತ್ರದಲ್ಲಿ ಈತ ಜಬರ್ದಸ್ತ್ ಪೊಲೀಸ್‌ ಇನ್‌ಸ್ಪೆಕ್ಟರ್‌. ನಾಯಕಿಯಾಗಿ ಕತ್ರೀನಾ ಮಿಂಚಲಿದ್ದಾಳೆ. ಈ ಚಿತ್ರದಲ್ಲಿ ರಣವೀರ್‌ ಸಿಂಗ್‌ ಮತ್ತು ಅಜಯ್‌ ದೇವ್‌ಗನ್‌ ಅತಿಥಿ ನಟರಾಗಿ ಕಾಣಿಸಲಿದ್ದಾರೆ. ಹೀಗಾದರೆ ಹೇಗಪ್ಪ ಅಜಯ್‌, ನಿಮ್ಮ ಅಭಿಮಾನಿಗಳಿಗಾದರೂ ನೀವು ಅನಿವಾರ್ಯಾದಾಗ ಡೂಪ್‌ ಬಳಸಲೇಬೇಕು.

ನಟನೆ ನಿಲ್ಲಿಸಲಿರುವ ಬಿಗ್‌ ಬೀ

ಬಿಗ್‌ ಬೀ ಅಂದ್ರೆ ಅಮಿತಾಭಾ‌ ಕಡೆಯಿಂದ ಲಕ್ಷಾಂತರ ಅಭಿಮಾನಿಗಳಿಗೆ ಕೆಟ್ಟ ಸುದ್ದಿ ಇದೆ. ತಮ್ಮ ಸತತ ಅನಾರೋಗ್ಯದ ಕಾರಣ ಅಮಿತಾಭ್ ಚಿತ್ರೀಕರಣದಿಂದ ಲಾಂಗ್‌ ಬ್ರೇಕ್‌ ಪಡೆಯಲಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಇವರು ಆನ್‌ಲೈನ್‌ನಲ್ಲಿ ಒಂದು ಫೋಟೋ ಶೇರ್‌ ಮಾಡಿದ್ದರು, ಅದರಲ್ಲಿ ಇವರು ಬೆಡ್‌ ಮೇಲೆ ಸುಸ್ತಾಗಿ ಒರಗಿದ್ದರು. ಇದಾದ ಮೇಲೆ ಅಭಿಮಾನಿಗಳೆಲ್ಲ ದೊಡ್ಡ ಟೆನ್ಶನ್‌ಗೆ ಒಳಗಾಗಿದ್ದರು. ಅವರು ಬೇಗ ಗುಣಮುಖರಾಗಲೆಂದು ಪ್ರಾರ್ಥಿಸತೊಡಗಿದರು. ಅವರು ಫೇಸ್‌ಬುಕ್‌ನಲ್ಲಿ, ಶೂಟಿಂಗ್‌ನಿಂದಾದ ಗಾಯಗಳು ತಮ್ಮನ್ನು ಘಾಸಿಗೊಳಿಸಿವೆ ಎಂದು ಹೇಳಿಕೊಂಡಿದ್ದರು. ಅವರು ಆದಷ್ಟು ಬೇಗ ಸಂಪೂರ್ಣ ಗುಣಮುಖರಾಗಿ ಮತ್ತೆ ನಟನೆಗೆ ಮರಳಲಿ ಎಂದು ಕಾತುರದಿಂದ ಇಡೀ ಬಾಲಿವುಡ್‌ ಅಭಿಮಾನಿಗಳು ಕಾಯುತ್ತಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ