`ಸ್ಟೂಡೆಂಟ್‌ ಆಫ್‌ ದಿ ಇಯರ್‌' ಚಿತ್ರದಿಂದ ಬಾಲಿವುಡ್‌ನಲ್ಲಿ ತನ್ನ ಕೆರಿಯರ್‌ ಶುರು ಹಚ್ಚಿಕೊಂಡ 21 ವರ್ಷದ ನಟಿ ಆಲಿಯಾ ಭಟ್ `ಹೈ ವೇ, ಟೂ ಸ್ಟೇಟ್ಸ್, ಹಂಪ್ಟಿ ಶರ್ಮ ಕೀ ದುಲ್ಹನಿಯಾ' ಮುಂತಾದ ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳನ್ನು ವಹಿಸಿ, ತನ್ನ ಹೆಸರನ್ನು ನಂ.1 ನಟಿಯರ ಸಾಲಿನಲ್ಲಿ ಗುರುತಿಸಿಕೊಂಡಿದ್ದಾಳೆ. ಈ ಕಾರಣದಿಂದಲೇ ಕತ್ರೀನಾ, ಕರೀನಾರ ಭಾರಿ ಸಂಭಾವನೆ ತೆರಲಾಗದ ನಿರ್ಮಾಪಕರು ಇಂದು ಆಲಿಯಾ ಎಂಬ ಗೆದ್ದೆತ್ತಿನ ಬಾಲ ಹಿಡಿದಿದ್ದಾರೆ. ಆಲಿಯಾ ಇದನ್ನು ಯೋಗಾಯೋಗ ಎನ್ನುತ್ತಾಳೆ, ಏಕೆಂದರೆ ಒಬ್ಬ ನಿರ್ಮಾಪಕ ಅಥವಾ ನಿರ್ದೇಶಕನಾಗಲಿ, ತಮ್ಮ ಕಥೆ ಮತ್ತು ಪಾತ್ರದ ಆಧಾರದಿಂದಲೇ ಸೂಕ್ತ ಕಲಾವಿದರನ್ನು ಆರಿಸುತ್ತಾರೆ ಎಂಬುದವಳ ಅಭಿಪ್ರಾಯ.

ಕೇವಲ ಹಿಂದಿ ಸಿನಿಮಾಗಳು ಮಾತ್ರವಲ್ಲದೆ, ಈಕೆ ಈಗ ಕಮರ್ಷಿಯಲ್ ಜಾಹೀರಾತುಗಳಲ್ಲೂ ಬೇಕಾದಷ್ಟು ಮಿಂಚುತ್ತಿದ್ದಾಳೆ. ಕೆಲವು ವರ್ಷಗಳ ಹಿಂದೆ ಗಾರ್ನಿಯರ್‌ ಫುಟ್‌ವೇರ್‌ ಕಂಪನಿಯ ಬ್ರ್ಯಾಂಡ್‌ ಅಂಬಾಸಿಡರ್‌ ಆಗಿದ್ದ ಆಲಿಯಾ ಜೊತೆ ನಡೆಸಿದ ಮಾತುಕಥೆಯ ಮುಖ್ಯಾಂಶಗಳು :

ಯಾವುದೇ ದೊಡ್ಡ ಬ್ರ್ಯಾಂಡ್‌ ಜೊತೆ ಐಡೆಂಟಿಟಿ ಇರುವುದು ನಿಮ್ಮ ಯಶಸ್ಸನ್ನು ಸೂಚಿಸುತ್ತದೆ. ಏನಂತೀರಿ?

ಗಾರ್ನಿಯರ್‌ ಜೊತೆ ಗುರುತಿಸಿಕೊಳ್ಳುವುದು ನನಗೆ ಹೆಮ್ಮೆಯ ಸಂಗತಿ! ಇದರೊಂದಿಗೆ ಅಟ್ಯಾಚ್‌ ಆದನಂತರ ನಾನು ನಟನೆಯ ಕ್ಷೇತ್ರದಲ್ಲಿ ಹೆಚ್ಚು ಯಶಸ್ವಿ ಆಗುತ್ತಿದ್ದೇನೆ ಅನಿಸುತ್ತಿದೆ. ಒಂದು ಕಾಲದಲ್ಲಿ ಜನ ನನ್ನ ನಟನೆ ಬಗ್ಗೆ ಟೀಕೆ ಮಾಡಿದ್ದೂ ಇದೆ, ಕುಚೋದ್ಯದ ಮಾತುಗಳಾಡಿದ್ದಾರೆ. ಆದರೆ `ಹೈ ವೇ' ಚಿತ್ರದ ನಂತರ ಅಂಥವರ ಬಾಯಿಗೆ ಬೀಗ ಬಿತ್ತು. ಮುಂದಿನ ಚಿತ್ರಗಳಲ್ಲಿ ನನ್ನ ಕಡೆಯಿಂದ 200% ಉತ್ತಮ ಅಭಿನಯ ನೀಡಲು ಪ್ರಯತ್ನಿಸಿದ್ದೇನೆ. ಒಂದು ಮಾತಂತೂ ನಿಜ, ಯಶಸ್ಸೇ ಕಲಾವಿದರ ಶತ್ರು. ಕೆಲವರಂತೂ ಯಾವಾಗ ನಾವು ಏನಾದರೂ ತಪ್ಪು ಮಾಡುತ್ತೇವೋ, ಯಾವಾಗ ಹಿಡಿದುಹಾಕೋಣವೋ ಎಂದು ತುದಿಗಾಲಲ್ಲಿ ಕಾಯುತ್ತಿರುತ್ತಾರೆ.

ನೀವು ನಿಮ್ಮ ಸೌಂದರ್ಯದ ಕುರಿತು ಎಷ್ಟು ಎಚ್ಚರಿಕೆ ವಹಿಸುತ್ತೀರಿ?

ನಾನು ನನ್ನ ಸೌಂದರ್ಯದ ಕುರಿತು ಸದಾ ಎಚ್ಚರಿಕೆ ವಹಿಸುತ್ತೇನೆ. ಸುಂದರವಾಗಿ ಕಾಣಿಸುವುದೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ....? ಆದರೆ ಎಷ್ಟೋ ಜನ ಸುಂದರವಾಗಿದ್ದರೂ ಹಾಗೆ ಕಂಡುಬರುವುದಿಲ್ಲ. ಆದ್ದರಿಂದಲೇ ನಿಮ್ಮನ್ನು ನೀವು ಸುಂದರವಾಗಿದ್ದೀವಿ ಅಂದುಕೊಳ್ಳುವುದು ಬಲು ಮುಖ್ಯ. ನಾನೆಂದೂ ಚಪಲಕ್ಕಾಗಿ ಸಿಕ್ಕಾಪಟ್ಟೆ ತಿನ್ನಲು ಹೋಗುವುದಿಲ್ಲ. ನಾನು ಯಾವಾಗಲೂ ಪೌಷ್ಟಿಕ ಆಹಾರವನ್ನೇ ಸೇವಿಸುತ್ತೇನೆ. ನಿಯಮಿತವಾಗಿ, ಸಮಯಕ್ಕೆ  ತಕ್ಕಂತೆ  ವರ್ಕ್‌ ಔಟ್‌ ಮಾಡುತ್ತೇನೆ. ಚೆನ್ನಾಗಿ ನಿದ್ದೆ ಮಾಡುತ್ತೀನಿ. ನಾನು ಯಾವುದೇ ಉಡುಗೆ ಧರಿಸಲಿ, ಅದು ನನಗೆ ಒಪ್ಪುತ್ತಿದೆಯೋ ಇಲ್ಲವೋ ಎಂದು ಖಾತ್ರಿ ಪಡಿಸಿಕೊಳ್ಳುತ್ತೇನೆ. ಏಕೆಂದರೆ ಸೂಟೆಬಲ್ ಡ್ರೆಸ್‌ ಮಾತ್ರವೇ ನಿಮ್ಮ ಸೌಂದರ್ಯಕ್ಕೆ ಪೂರಕ. ನಾನು ಕೂದಲಿಗೆ ಸದಾ ಬ್ರ್ಯಾಂಡೆಡ್‌ಶ್ಯಾಂಪೂ, ಹೇರ್‌ ಆಯಿಲ್ಸ್ ನ್ನೇ ಬಳುಸುತ್ತೇನೆ. ಎಷ್ಟೋ ಸಲ ಪಾತ್ರಕ್ಕೆ ತಕ್ಕಂತೆ ಕೂದಲಿಗೆ ಕಲರಿಂಗ್‌ ಅಥವಾ ಸೆಟ್ಟಿಂಗ್ಸ್ ಮಾಡಿಸಬೇಕಾಗುತ್ತದೆ. ಆಗ ಅಸ್ತವ್ಯಸ್ತಗೊಳ್ಳುವ ಕೂದಲನ್ನು ನಾನು ಉತ್ತಮ ಶ್ಯಾಂಪೂ, ಕಂಡೀಶನರ್‌ ಬಳಸಿ ಸರಿಪಡಿಸಿಕೊಳ್ಳುತ್ತೇನೆ, ಆಗ ಮಾತ್ರವೇ ಅದು ಆರೋಗ್ಯಕರವಾಗಿರುತ್ತದೆ. ಇಷ್ಟಲ್ಲದೆ ಬೇಸಿಗೆ, ಮಳೆಗಾಲ ಅಂತ ತಲೆಗೂದಲಿನ ಮೇಲೆ ಬೇರೆ ಬೇರೆ ಪ್ರಭಾವಗಳಾಗುತ್ತಿರುತ್ತದೆ. ಆಗಲೂ ಅದರ ವಿಶೇಷ ಆರೈಕೆ ಮಾಡುತ್ತೇನೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ