ಪೂಜಾಳ ಪಂಚ್

ಮಿಸ್‌ ಇಂಡಿಯಾ ಆದ ನಂತರ ಬಾಲಿವುಡ್‌ಗೆ ಎಂಟ್ರಿ ಪಡೆದ ಪೂಜಾ ಚೋಪ್ರಾಗೆ ಅಪಘಾತವಾದ್ದರಿಂದ, ಅವಳ 2 ಚಿತ್ರಗಳ ಶೂಟಿಂಗ್‌ ಮುಂದೆ ಹೋಯ್ತು. ಈ ಆ್ಯಕ್ಸಿಡೆಂಟ್‌ನಲ್ಲಿ ನನ್ನ ಕಾಲು ಉಳಿದದ್ದೇ ಪುಣ್ಯ ಎನ್ನುತ್ತಾಳೆ. ಸರ್ಜರಿ ನಂತರ ನಾನೀಗ ಹಿಂದಿನಂತೆಯೇ ಓಡಾಡುತ್ತಿದ್ದೇನೆ. ನಾನು ಇಷ್ಟರಲ್ಲೇ ವಿಪುಲ್ ‌ಶಾಹ್‌ರ `ಕಮಾಂಡೋ-2' ಮತ್ತು `ರೂಪ್‌ ನಗರ್‌ ಕೇ ಚೀತ' ಚಿತ್ರಗಳಲ್ಲಿ ನಟಿಸಲಿದ್ದೇನೆ,' ಎನ್ನುತ್ತಾಳೆ. 2008ರಲ್ಲಿ `ಫ್ಯಾಷನ್‌' ಚಿತ್ರದಿಂದ ಎಂಟ್ರಿ ಪಡೆದ ಪೂಜಾ 4 ವರ್ಷಗಳ ಗ್ಯಾಪ್‌ ನಂತರ ಭಾರಿ ಚಿತ್ರ `ಕಮಾಂಡೋ'ದಲ್ಲಿ ಎಂಥ ಮೋಡಿ ಮಾಡಲಿದ್ದಾಳೋ ಕಾದು ನೋಡೋಣ.

ಲೀರಾಳ ಹಿಂದಿ ಪ್ರೀತಿ

parineeti-chopra-and-adityaroy-kapurtrailerofmovieda-4

ಆಸ್ಟ್ರೇಲಿಯಾ ಮೂಲದ ಲೀರಾ ಹೇಡೆನ್‌ ಇತ್ತೀಚೆಗೆ ಅಕ್ಷಯ್‌ ಕುಮಾರನೊಂದಿಗೆ 1982ರ ಹಿಟ್‌ `ಶೌಕೀನ್‌' ಚಿತ್ರದ ರಿಮೇಕ್‌ನಲ್ಲಿದ್ದಾಳೆ. ಲೀರಾಳ ಹಿಂದಿ ಸಹಜವಾಗಿರಲಿಕ್ಕಿಲ್ಲ ಎಂಬುದು ಗೊತ್ತಿರೋ ವಿಷಯ. ಅವಳೀಗ ಕಷ್ಟಪಟ್ಟು ಹಿಂದಿ ಕಲಿತು ಈ ಚಿತ್ರಕ್ಕಾಗಿ ತಾನೇ ಡಬ್‌ ಮಾಡುತ್ತಾಳಂತೆ. ಹಿಂದೆ ರತಿ ಅಗ್ನಿಹೋತ್ರಿ ನಿರ್ಹಿಸಿದ್ದ ಪಾತ್ರವನ್ನು ಈಗ ಈಕೆ ಮಾಡುತ್ತಿದ್ದಾಳೆ. ಅನುಪಮ್ ಖೇರ್‌, ಪರೇಶ್‌ ರಾವ್‌, ಅನ್ನುವ ಕಪೂರ್‌ರಂಥ ಮಹಾರಥಿಗಳ ದಂಡೇ ಇಲ್ಲಿದೆ.

ಶ್ರೇಯಾಳ ಭಾನಗಡಿ

Sonam-Kapoor-Sizzling-walk-of-IIJW-2013-Grand-Finale-in-Saree-(9)

ಉತ್ತರಾಖಂಡದ ಈ ಹುಡುಗಿ 2001ರಲ್ಲಿ ಬಾಲಿವುಡ್‌ಗೆ ಎಂಟ್ರಿ ಪಡೆದಳು. 2003ರ `ತುಝೆ ಮೇರಿ ಕಸಂ'ನಿಂದ ಒಳ್ಳೆಯ ಬ್ರೇಕ್‌ ಪಡೆದಳು. ಇತ್ತೀಚೆಗಂತೂ ಎಲ್ಲೆಲ್ಲೂ ಶ್ರೇಯಾಳ ಡೇಟಿಂಗ್‌ನದೇ ಸುದ್ದಿ. ನಂಬಲರ್ಹ ಮೂಲಗಳ ಪ್ರಕಾರ, ಈಗ ಈಕೆ ಅಕ್ಷಯ್‌ ಖನ್ನಾ ಜೊತೆ ಡೇಟಿಂಗ್ ನಡೆಸಿದ್ದಾಳಂತೆ. ಅಂದಹಾಗೆ ಈ ಜೋಡಿ ಈಗ ಖಾಲಿ ಕುಳಿತಿದ್ದಾರೆ. ಅಕ್ಷಯ್‌ನ `ಗಲೀಗಲೀ ಚೋರ್‌ ಹೈ' ಫ್ಲಾಪ್‌ ಆದನಂತರ ಸುಮ್ಮನಿದ್ದಾನೆ. ಈಕೆ `ಜಿಲಾ ಗಾಝಿಯಾಬಾದ್‌' ನಂತರ `ವಾಲ್ಮೀಕಿ ಕೀ ಬಂದೂಕ್‌'ನಲ್ಲಿ ಕಾಣಿಸಿದ್ದಳು. ಈಗಂತೂ ಇಬ್ಬರಿಗೂ ಪುರಸತ್ತೋ ಪುರಸತ್ತು!

ಇವಳಿನ್ನೂ ಎಲ್ಲರ ಪಾಲಿನ ಪುಟ್ಟಿ

kareena

ಅನಿಲ್ ಕಪೂರ್‌ ಮಗಳು ಸೋನಂ ಕಪೂರ್‌ಳ ಮಾತನ್ನು ಬಾಲಿವುಡ್‌ನಲ್ಲಿ ಯಾರೂ ಸೀರಿಯಸ್‌ ಆಗಿ ತೆಗೆದುಕೊಳ್ಳದೇ ಅದಿನ್ನೂ ಪಾಪಚ್ಚಿ ಎಂಬಂತೆ ನೋಡುತ್ತಾರಂತೆ. ಬಹುಶಃ ತನ್ನ ಡ್ರೆಸ್‌ ಸೆನ್ಸ್ ಮತ್ತು ಸ್ವಭಾವವೇ ಇದಕ್ಕೆ ಕಾರಣ ಎನ್ನುತಾಳೆ. ಎಂದೂ ಸೀರಿಯಸ್‌ ಮೂಡಿನಲ್ಲಿರದೆ ಮನಸ್ಸಿಗೆ ತೋಚಿದ್ದನ್ನೇ ಮಾತನಾಡಿ ಬಿಡುತ್ತೇನೆ. ಮನಸ್ಸಿನಲ್ಲಿ ಒಂದು ಮಾತಿನಲ್ಲಿ ಒಂದು ಎಂದು ನನಗೆ ನಡೆದುಕೊಳ್ಳಲು ಬರುವುದಿಲ್ಲ. ಚಿತ್ರರಂಗದಲ್ಲಿ ಇದು ಸರ್ವೇ ಸಾಮಾನ್ಯ ಇರಬಹುದು, ಆದರೆ ನನಗದು ಸಾಧ್ಯವಿಲ್ಲ. ನನ್ನ ಪ್ರತಿಭೆಗೆ ತಕ್ಕಂತೆ ಇಂಡಸ್ಟ್ರಿ ನನ್ನನ್ನು ಗುರುತಿಸಿಲ್ಲ ಎಂದೇ ನನ್ನ ಎಲ್ಲಾ ನಿರ್ದೇಶಕರೂ ಹೇಳುತ್ತಾರೆ, ಆದರೆ ಅದಕ್ಕೆ ಏನು ಮಾಡಬೇಕೋ ನನಗಂತೂ ತಿಳಿಯುದಿಲ್ಲ, ಎನ್ನುತ್ತಾಳೆ ಪುಟ್ಟಿ... ಅಲ್ಲಲ್ಲ ಸೋನಂ.

ರಾಣಿ ಆಗಲಿದ್ದಾಳೆ ಸೂಪರ್‌ ಮಾಮ್

karan-kundra-chetna-pande-okay-a-kiss-after-retakes-p-httptco-xjghkj

ಕರೀನಾ ಕಪೂರ್‌ ಸದ್ಯಕ್ಕಂತೂ ಮಗು ಹೆತ್ತು ಅದರ ಡೈಪರ್‌ ಬದಲಿಸುವ ಜಂಜಾಟಕ್ಕೆ ಬೀಳುವವಳಲ್ಲವಂತೆ. ಆದರೆ ಆಕೆಗೆ ಬೇರೆಯವರ ಮಕ್ಕಳನ್ನು ಬೇಗ ಕಾಣುವ ಆಸೆ. ಹಾಗಾಗಿಯೇ ರಾಣಿ ಮುಖರ್ಜಿ ಚೋಪ್ರಾಗೆ ಈಕೆ, ರಾಣಿ ಖಂಡಿತಾ ಒಬ್ಬ ಸೂಪರ್ ಮಾವ್‌ ಆಗಲಿದ್ದಾಳೆ ಎನ್ನುತ್ತಾಳೆ. ಇತ್ತೀಚೆಗೆ ಒಂದು ಈವೆಂಟ್‌ನಲ್ಲಿ ಗೆಳತಿಯರ ಬಗ್ಗೆ ಮಾತನಾಡುವಾಗ ಕರೀನಾ ರಾಣಿ ಬಗ್ಗೆ ಹೇಳುತ್ತಾ, ಮೇಲಿನ ಮಾತು ಹೇಳಿದಳು, ಏಕೆಂದರೆ ಇಬ್ಬರೂ ಅಷ್ಟು ಆಪ್ತರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ