ಆ್ಯಂಡಿ ಇನ್‌ ಸಂ

ಫ್ಯಾಷನ್‌ ಲೋಕದಲ್ಲಿ ತನ್ನದೇ ಆದ ಛಾಪನ್ನು ಒತ್ತಿರುವ ಐಂದ್ರಿತಾ ರೈ ಗ್ಲಾಮರ್‌ ಪತ್ರಿಕೆಗಳಲ್ಲಿ ಆಗಾಗ ಮಿಂಚುತ್ತಲೇ ಇರುತ್ತಾಳೆ. ಐಂದ್ರಿತಾ ತನ್ನ ಅಭಿಮಾನಿಗಳನ್ನು ತುಂಬಾ ಇಷ್ಟಪಡೋದ್ರಿಂದ ಟ್ವಿಟರ್‌ ಮೂಲಕ ಎಲ್ಲವನ್ನೂ ಹಂಚಿಕೊಳ್ಳುತ್ತಾಳೆ. ಇತ್ತೀಚೆಗೆ ಐಂದ್ರಿತಾ ಮನೆಯ ಕೆಲಸದ ಹುಡುಗ ನಾಯಿಗಳನ್ನು ಹೊರಗಡೆ ಸುತ್ತಾಡಿಸಿ ಬರುವಾಗ ಮನೆಯ ಬಳಿಯಿದ್ದ ನೇರಳೆ ಮರ ಹತ್ತಿ ಹಣ್ಣು ಕೀಳಲು ಹೋಗಿ ಮೇಲಿಂದ ಧೊಪ್ಪೆಂದು ಕೆಳಗೆ ಬಿದ್ದು ತಲೆ ಒಡೆದುಕೊಂಡು, ಪಾಪ ಸತ್ತೇ ಹೋದ. ನೇರಳೆ ಹಣ್ಣು ಬಯಸಿದ್ದು ಯಾರು? ಆ ಹುಡುಗ (ನಂದ)ನನ್ನು ಹಣ್ಣು ಕೀಳುವುದಕ್ಕೆ ಪ್ರೇರೇಪಿಸಿದ್ದು ಯಾರು ಎಂಬುದಕ್ಕೆ, ಐಂದ್ರಿತಾಳಿಗೆ ಹಣ್ಣು ತಿನ್ನುವ ಆಸೆಯಾಯ್ತು. ನಂದಂಗೆ ಹೇಳಿ ಹಣ್ಣು ಕಿತ್ತುಕೊಡು ಅಂದಳಂತೆ.... ಎಂದೆಲ್ಲ ಅಂತೆ ಕಂತೆ ಸುದ್ದಿ ಹರಿದಾಡಿಸಿತು. ಆದರೆ ಆಕೆಯ ಆಪ್ತ ಸ್ನೇಹಿತೆಯರು ಇದನ್ನೆಲ್ಲ ಕೇಳುವಾಗ ಐಂದ್ರಿತಾ ಇಲ್ಲೆಲ್ಲಿದ್ದಳು? ಯೂರೋಪ್‌ ಟೂರ್‌ಗೆ ಹೋಗಿದ್ದಾಳಲ್ಲ ಅಂತ ಹೇಳಿದಾಗಲೇ ಸತ್ಯ ಗೊತ್ತಾಗಿದ್ದು. ಒಟ್ಟಿನಲ್ಲಿ ನೇರಳೆ ಹಣ್ಣು ಕೀಳಲು ಹೋದ ನಂದ ತೀರಿಹೋದ. ಐಂದ್ರಿತಾಳಿಗೂ ಈ ಸುದ್ದಿ ಆಘಾತ ತಂದಿತು.

ಕನ್ನಡದ ಹೆಣ್ಣು ನಮ್ಮ ರಮ್ಯಾ

Ramya

ಕನ್ನಡ ಸಿಕ್ಕಾಪಟ್ಟೆ ಫೇಮಸ್‌. ಕನ್ನಡದ ಬಗ್ಗೆ ಪ್ರೀತಿ ಇದ್ದು ಮಾತನಾಡುವಾಗ ಇಂಗ್ಲೀಷ್‌ ಓವರ್‌ ಟೇಕ್‌ ತಗೊಂಡು ಬರುತ್ತೆ. ರಮ್ಯಾ ಆಗಾಗ್ಗೆ ಉತ್ತರ ಭಾರತದವರು ಕನ್ನಡವನ್ನು ಸರಿಯಾಗಿ ಸ್ಪಷ್ಟವಾಗಿ ಉಚ್ಚರಿಸುವುದಿಲ್ಲ ಎಂದು ಟ್ವೀಟ್‌ ಮಾಡುತ್ತಾಳೆ. ಕನ್ನಡ್‌ ಅಲ್ಲ ಕನ್ನಡ ಎಂದು ಹೇಳಿ ಎನ್ನುತ್ತಾ ಅವರನ್ನು ಎಚ್ಚರಿಸುವ ರಮ್ಯಾ, ಮಂಡ್ಯವನ್ನು ಒಂದೊಂದ್ಸಲ ಮಾಂಡ್ಯ ಎಂದು ಕರೆಯುತ್ತಾಳೆ ಎಂಬ ಕಂಪ್ಲೇಂಟ್‌ ಇದೆ. ಆದರೆ ರಮ್ಯಾ ಮಾತ್ರ ಮಂಡ್ಯವನ್ನು ತಾನೆಂದೂ ಮಾಂಡ್ಯ ಎಂದು ಹೆಸರಿಸಿಲ್ಲ, ಬೇಕಾದರೆ ಮಂಡ್ಯದ ಜನರನ್ನೇ ಕೇಳಿ ನೋಡಿ ಎನ್ನುತ್ತಾಳೆ. ಇತ್ತೀಚೆಗೆ ರಮ್ಯಾ ಕನ್ನಡವನ್ನು ಬಹಳ ಗಂಭೀರವಾಗಿ ತೆಗೆದುಕೊಂಡಂತಿದೆ. ತನ್ನ ಪಾತ್ರಗಳಿಗೆ ಸ್ವತಃ ತಾನೇ ಡಬ್‌ ಮಾಡುತ್ತಾಳೆ. `ಪ್ರಾರಂಭದಲ್ಲಿ ನನ್ನ ವಾಯ್ಸ್ ಸೂಟ್‌ ಆಗೋದಿಲ್ಲ ಅಂತ ಬೇರೆಯವರಿಂದ ಡಬ್‌ ಮಾಡಿಸ್ತಿದ್ರು. ಆದರೆ ಅದ್ಯಾಕೋ ನನಗೆ ಸರಿಹೋಗಲಿಲ್ಲ. ನನ್ನ ಅಭಿನಯಕ್ಕೆ ನನ್ನ ಧ್ವನಿಯೇ ಹೆಚ್ಚು ಸೂಟ್‌ ಆಗುತ್ತೆ. ರಿಯಲ್ಲಾಗಿ ಕಾಣುತ್ತೆ,' ಎಂದು ಡಬ್ಬಿಂಗ್‌ ಮಾಡುವುದರಲ್ಲಿ ಈಗ ಪ್ರವೀಣೆಯಾಗುತ್ತಿದ್ದಾಳೆ ರಮ್ಯಾ.

ಹಾರರ್‌ ಥ್ರಿಲ್ಲರ್‌ನಲ್ಲಿ ಪ್ರಿಯಾಂಕಾ

Priyanka

ಪ್ರಿಯಾಂಕಾ ಉಪೇಂದ್ರ ಯಾವತ್ತೂ ಸುಮ್ಮನೆ ಕುಳಿತರಲ್ಲ. ಏನಾದರೊಂದು ಮಾಡುತ್ತಲೇ ಇರುತ್ತಾರೆ. ಬಂಗಾಳಿ ಚಿತ್ರದಲ್ಲಿ ನಟಿಸುತ್ತಾರೆ. ಕನ್ನಡದಲ್ಲೂ ತಮಗಿಷ್ಟವಾದ ಪಾತ್ರವಿದ್ದರೆ  ನಿರ್ವಹಿಸುತ್ತಾರೆ. ಇದೆಲ್ಲದರ ಜೊತೆಗೆ ಪತಿ ಉಪೇಂದ್ರರ ಸಿನಿಮಾ ನಿರ್ಮಾಣ ಮಾಡುವುದರತ್ತ ಉತ್ಸಾಹ ತೋರುತ್ತಾರೆ. `ಉಪ್ಪಿ-2' ಚಿತ್ರದ ನಿರ್ಮಾಣದ ಜವಾಬ್ದಾರಿ ಹೊತ್ತಿರುವ ಪ್ರಿಯಾಂಕಾ ಉಪೇಂದ್ರರಿಗಷ್ಟೇ ಅಲ್ಲ, ನಾಯಕಿಯರಿಗೂ ಕಾಸ್ಟ್ಯೂಮ್ ಡಿಸೈನ್‌ ಮಾಡಿದ್ದಾರೆ. ಉಪ್ಪಿ ಚಿತ್ರವೊಂದ ಮೇಲೆ ಅದೊಂದು ದುಬಾರಿ ಅಫೇರ್‌ ಎನ್ನುತ್ತಾರೆ ಪ್ರಿಯಾಂಕಾ. ನೂರು ದಿನಗಳ ಚಿತ್ರೀಕರಣ `ಉಪ್ಪಿ-2' ಚಿತ್ರಕ್ಕಿದೆ. ಪಾರೂಲ್ ‌ಯಾದವ್ ಜೊತೆ ಮತ್ತೊಬ್ಬ ರಷ್ಯನ್‌ ನಾಯಕಿ ಈ ಚಿತ್ರದಲ್ಲಿದ್ದಾಳೆ. ಪ್ರಿಯಾಂಕಾ ನಿರ್ಮಾಪಕಿಯಾಗುವುದರ ಜೊತೆಗೆ ಇತ್ತೀಚೆಗಷ್ಟೇ ನಾಯಕಿ ಪ್ರಧಾನ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ. ಹಾರರ್‌ ಥ್ರಿಲ್ಲರ್‌ ಸಬ್ಜೆಕ್ಟ್ ಇವರು ಹೆಸರಿಡದ ಈ ಹೊಸ ಚಿತ್ರದಲ್ಲಿ ಪ್ರಿಯಾಂಕಾ ಪ್ರಮುಖ ಭೂಮಿಕೆ ವಹಿಸಲಿದ್ದಾರೆ. ಸಾಮಾನ್ಯವಾಗಿ ಯಂಗ್‌ ಹೀರೋಯಿನ್‌ಗಳಿಗೆ ಇಂಥ ಅವಕಾಶ ಸಿಗುತ್ತಿರುವಾಗ ಪ್ರಿಯಾಂಕಾ ತಮಗೆ ಇಂಥ ಚಾನ್ಸ್ ಸಿಕ್ಕಿರೋದು ನಿಜಕ್ಕೂ ಚಾಲೆಂಜಿಂಗ್‌ ಎನ್ನುತ್ತಾರೆ. ನಾಯಕಿ ಪ್ರಧಾನ ಚಿತ್ರವೊಂದರಲ್ಲಿ ನಟಿಸುತ್ತಿರುವುದು ಇದೇ ಮೊದಲ ಬಾರಿ ಅನಿಸುತ್ತೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ