ಡ್ಯಾಡಿಯ ಮಗಳು

ತಾರಾ ಮಕ್ಕಳು ಸಿನಿಮಾರಂಗದಲ್ಲಿ ಮೆರೆದಾಡುತ್ತಿರುವಾಗ ನಿರ್ದೇಶಕರ ಮಕ್ಕಳು ಸಹ ತಾವೇನು ಕಡಿಮೆ ಇಲ್ಲ ಅಂತ ಬೆಳ್ಳಿತೆರೆಗೆ ಲಗ್ಗೆ ಹಾಕುತ್ತಿದ್ದಾರೆ. ಖ್ಯಾತ ನಿರ್ದೇಶಕ ಓಂ ಪ್ರಕಾಶ್‌ ಹಾಗೂ ರೇಖಾದಾಸ್‌ ಅವರ ಪುತ್ರಿ ಶ್ರಾವ್ಯಾ ತನ್ನ ಸ್ವಂತ ಸಾಮರ್ಥ್ಯದಿಂದ ನಟಿಯಾಗಿ ಮಿಂಚಿದ್ದು ಗೊತ್ತಿರುವ ಸಂಗತಿ. ಶ್ರಾವ್ಯಾ ತಾನೊಬ್ಬ ಪ್ರತಿಭೆಯುಳ್ಳ ಕಲಾವಿದೆ ಎಂದು ಕಿರುತೆರೆ ಮೂಲಕವೇ ಸಾಬೀತುಪಡಿಸಿದ್ದಳು. ಶ್ರಾವ್ಯಾ ಸಿನಿಮಾರಂಗಕ್ಕೂ ಕಾಲಿಟ್ಟಾಗ ಆಕೆಗೆ ಯಾರೂ ಗಾಡ್ ‌ಫಾದರ್‌ ಇರಲಿಲ್ಲ. ಓಂಪ್ರಕಾಶ್‌ ಕೂಡಾ ಶ್ರಾವ್ಯಾಳನ್ನು ದೊಡ್ಡದಾಗಿ ಲಾಂಚ್‌ ಮಾಡಿರಲಿಲ್ಲ. ತನ್ನ ಶ್ರಮದ ಫಲದಿಂದ ಅವಕಾಶವನ್ನು ಪಡೆದ ಶ್ರಾವ್ಯಾ ಇತ್ತೀಚೆಗೆ `ರೋಸ್' ಚಿತ್ರದ ಮೂಲಕ ಎಲ್ಲರ ಮನಸ್ಸು ಗೆದ್ದಿದ್ದಾಳೆ.

`ರೋಸ್‌' ಚಿತ್ರ ಶ್ರಾವ್ಯಾಳಿಗೆ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿತು. ತಂದೆ ಮಗಳನ್ನು ಡೈರೆಕ್ಟ್ ಮಾಡೋದು ಯಾವಾಗ ಎನ್ನುವ ಪ್ರಶ್ನೆಗೆ ಉತ್ತರ ಬಹಳ ಬೇಗ ಸಿಕ್ಕಿತು. ತಮಿಳು ಚಿತ್ರವೊಂದರ ರೀಮೇಕಾಗಿರುವ `ಕಟ್ಟೆ' ಚಿತ್ರದಲ್ಲಿ ಓಂಪ್ರಕಾಶ್‌ನಿರ್ದೇಶಕರಾಗಿದ್ದು, ನಾಯಕಿ ಪಾತ್ರವನ್ನು ಶ್ರಾವ್ಯಾ ನಿರ್ವಹಿಸಿದ್ದಾಳೆ.

`ಚಿಕ್ಕ ಮಗುವಾಗಿದ್ದಾಗಲೇ ಇವಳು ತುಂಬಾನೇ ಚೂಟಿ, ಸಖತ್‌ ಟ್ಯಾಲೆಂಟೆಡ್‌. ಕ್ಯಾಮೆರಾ ಮುಂದೆ ಅವಳು ಒಬ್ಬ ನಟಿ ಮಾತ್ರ. ತಂದೆ ಮಗಳು ಅಂತ ಸೆಟ್‌ನಲ್ಲಿ ಸಲುಗೆ ತೋರಿಸುವುದಿಲ್ಲ,' ಎಂದು ಓಂಪ್ರಕಾಶ್‌ ಹೇಳಿದ್ದಾರೆ. ನಾನು ಅಪ್ಪನಿಂದ ಒಮ್ಮೆಯೂ ಬೈಸಿಕೊಂಡಿಲ್ಲ. ಚೆನ್ನಾಗಿ ನಟಿಸದೇ ಹೋದರೆ ಮಾತ್ರ ಬಯ್ಯುತ್ತಾರೆ. ಅವರಿಂದ ಹೊಗಳಿಸಿಕೊಳ್ಳುವುದು ಅಷ್ಟು ಸುಲಭವಲ್ಲ,' ಎಂದು ಶ್ರಾವ್ಯಾ ಹೇಳುತ್ತಾಳೆ.

ಉಪ್ಪಿ-2 ರುಚಿ

_MG_0754

ಉಪೇಂದ್ರ ಏನೇ ಮಾಡಲಿ ಅದು ಟ್ರೆಂಡ್‌ ಸೆಟ್‌ ಮಾಡುತ್ತೆ. ಇದೀಗ ಅವರ `ಉಪ್ಪಿ-2' ಚಿತ್ರದ ಟ್ರೇಲರ್‌ ನೋಡಿರೋರಿಗೆ ಅದರ  ಅನುಭವ ಆಗಿರುತ್ತೆ. ಇತ್ತೀಚೆಗೆ ಬಿಡುಗಡೆಯಾದಂಥ `ಸೂಪರ್ರೊ ರಂಗ' ಚಿತ್ರದಲ್ಲೂ ಸಹ ಉಪೇಂದ್ರ ತಮ್ಮ ವಿಭಿನ್ನವಾದ ಗೆಟಪ್‌ಗಳಿಂದ ಅಭಿಮಾನಿಗಳ ಹೃದಯ ಗೆದ್ದರು. ಇಪ್ಪತ್ನಾಲ್ಕು ತಾಸು ಸಿನಿಮಾ ಬಗ್ಗೆ ಕನಸು ಕಾಣುವ ಉಪೇಂದ್ರ ಇದೀಗ `ಬಸವಣ್ಣ' ಚಿತ್ರ ಮುಗಿಸಿ ಬಂದಿದ್ದಾರೆ. ಒಂದು ಚಿತ್ರ ಕೈಗೆತ್ತಿಕೊಂಡರೆ ಅವರು ಬೇರೆ ವಿಷಯದ ಬಗ್ಗೆ ಚರ್ಚಿಸುವುದಿಲ್ಲ. `ಉಪ್ಪಿ-2' ಚಿತ್ರವನ್ನು ನಿರ್ದೇಶಿಸುವುದರಲ್ಲಿ ನಿರತರಾಗಿರುವ ಉಪ್ಪಿ `ಸೂಪರ್‌' ಚಿತ್ರದ ನಂತರ ತಮ್ಮದೇ ಬ್ಯಾನರ್‌ನಲ್ಲಿ `ಉಪ್ಪಿ-2' ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. `ಸೂಪರ್‌' ಚಿತ್ರದಲ್ಲಿ ನಯನತಾರಾಳನ್ನು ಕರೆತಂದಿದ್ದ ಉಪ್ಪಿ ಈ ಬಾರಿ ರಷ್ಯನ್‌ ಸುಂದರಿಯನ್ನು ಆರಿಸಿದ್ದಾರೆ. ಅರಿವಾ ರಷ್ಯನ್‌ ಬಾಲೆಯಾದರೂ ಮುಂಬೈನ ಬಾಲಿವುಡ್‌ನಲ್ಲಿ ತನ್ನ ಅದೃಷ್ಟ ಪರೀಕ್ಷಿಸಿಕೊಂಡಂಥ ಬೆಡಗಿ. `ಪಾರ್ಟಿ 2' ಚಿತ್ರದಲ್ಲಿ ನಟಿಸಿದ್ದ ಅರಿವಾ ಅತ್ಯುತ್ತಮ ಮಾಡೆಲ್ ‌ಕೂಡಾ ಆಗಿದ್ದಾಳೆ. ಅರಿವಾಳಿಗೆ ಉಪ್ಪಿ ಎಂಥ ಪಾತ್ರ ಸೃಷ್ಟಿ ಮಾಡಿದ್ದಾರೋ ಎಂಬುದೇ ಕುತೂಹಲ ಹುಟ್ಟಿಸುವಂಥ ಸಂಗತಿ. ಉಪೇಂದ್ರ ಇದ್ದ ಕಡೆ ಏನಾದರೂ ಸ್ಪೆಷಾಲಿಟಿ ಇರಲೇಬೇಕು. `ಉಪ್ಪಿ-2' ರುಚಿಯಾಗಿರುತ್ತಾ... ನೋಡೋಣ.

ಡಾ. ರವಿಚಂದ್ರನ್‌

Brahma-(8)

ಇದೇನಿದು ಕ್ರೇಜಿ ಸ್ಟಾರ್‌ಗೆ ಡಾಕ್ಟರೇಟ್‌ ಪದವಿ ಸಿಕ್ಕಿಬಿಡ್ತಾ? ಹಾಗೇನಿಲ್ಲ ಬಿಡಿ. ಅವರೀಗ ಡಾಕ್ಟರ್‌ ಪಾತ್ರವನ್ನು ನಿರ್ವಹಿಸಲಿದ್ದಾರೆ ಎನ್ನುವ ಸುದ್ದಿ ಅಷ್ಟೆ. ಇವರಿಗೆ ಡಾಕ್ಟರ್‌ ಪಾತ್ರ ಸೃಷ್ಟಿಸಿರೋದು ಮತ್ಯಾರಲ್ಲ ನಿರ್ಮಾಪಕ, ನಿರ್ದೇಶಕ, ಪತ್ರಕರ್ತರಾಗಿರುವ ಇಂದ್ರಜಿತ್‌ ಲಂಕೇಶ್‌. ರವಿಚಂದ್ರನ್‌ ಅವರ ಸೆಕೆಂಡ್‌ ಇನ್ನಿಂಗ್ಸ್ `ಮಾಣಿಕ್ಯ' ಚಿತ್ರದ ಮೂಲಕ ಶುರುವಾದಾಗಿನಿಂದ ಒಳ್ಳೆ ಪಾತ್ರಗಳು ಅವರ ಬುಟ್ಟಿಗೆ ಬೀಳುತ್ತಲೇ ಇವೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ