`ಸೈಕೊ' ಚಿತ್ರದಿಂದ ಕೆರಿಯರ್‌ ಆರಂಭಿಸಿದ ಅನಿತಾ ಭಟ್‌, ವೈವಿಧ್ಯಮಯ ಪಾತ್ರಗಳಿಂದ ಕ್ರಮೇಣ ಪರಿಪಕ್ವ ಅಭಿನೇತ್ರಿಯಾಗಿ ಬೆಳೆದಳು. ಜೊತೆಗೆ ಯೋಗ ಶಾಲೆ ನಡೆಸುವ ನುರಿತೆ ಕೂಡ. ಅಭಿನಯವೇ ನನ್ನ ಮೊದಲ ಆಯ್ಕೆ ಎನ್ನುವ ಅನಿತಾಳ ಮಾತುಗಳಲ್ಲಿ ಉಳಿದ ವಿವರಗಳನ್ನು ತಿಳಿಯೋಣವೇ ?

`ಸೈಕೊ' ಚಿತ್ರ ನೋಡಿದವರಿಗೆಲ್ಲ ಈ ಮಲೆನಾಡ ಚೆಲುವೆ ಅನಿತಾ ಭಟ್‌ ನೆನಪಿರದೇ ಇರುವಂತಿಲ್ಲ. ಅಭಿನಯದಲ್ಲಿ ಪಕ್ವತೆ, ಪಾತ್ರದಲ್ಲಿ ಆಯ್ಕೆ ಬಗ್ಗೆ ಸದಾ ಪ್ರಾಮುಖ್ಯತೆ ನೀಡುವ ಈ ನಟಿ ಈಗ ನಾಲ್ಕಾರು ಚಿತ್ರಗಳಲ್ಲಿ ನಟಿಸುತ್ತಿರುವ ಬಿಝಿ ತಾರೆ.

ರವಿಶಂಕರ್‌ ಮುಖ್ಯ ಭೂಮಿಕೆಯಲ್ಲಿರುವ `ಸದ್ಗುಣ ಸಂಪನ್ನ ಮಾಧವ 100%' ಎಂಬ ಚಿತ್ರದಲ್ಲಿ ಕಾಟನ್‌ ಸ್ಮಿತಾ ಎಂಬ ಪಾತ್ರ ವಹಿಸಿದ್ದಾಳೆ. ಇದೊಂದು ಪೂರ್ಣ ಪ್ರಮಾಣದ ಕಾಮಿಡಿ ಪಾತ್ರವಾಗಿದೆ. ಇದೊಂಥರ ಸೀರಿಯಸ್‌ ಕಾಮಿಡಿಯಂತೆ. ಈ ಹಿಂದೆ `ನಗೆ ಬಾಂಬ್‌' ಸಿನಿಮಾದಲ್ಲೂ ಅನಿತಾ ಕಾಮಿಡಿ ಪಾತ್ರ ವಹಿಸಿದ್ದಳು. ಮಂಜು ನೀನಾಸಂ ನಿರ್ದೇಶನದ `ಕನ್ನೇರಿ' ಸಿನಿಮಾದ  ಚಿತ್ರೀಕರಣ ಕೂಡ ಮುಗಿದಿದೆ. ಈ ಚಿತ್ರದಲ್ಲಿ ಅನಿತಾಳದು ನೆಗೆಟಿವ್ ಶೇಡ್‌ ಇರುವ ಪಾತ್ರ. ಆಫ್‌ ಬೀಟ್‌ ಸಿನಿಮಾ ಆದರೂ ಕಮರ್ಷಿಯಲ್ ಫಾರ್ಮುಲಾ ಇದೆ ಎನ್ನುತ್ತಾಳೆ ಅನಿತಾ. ನಾಲ್ಕು ಸಿನಿಮಾದ ನಾಲ್ಕು ವಿಭಿನ್ನ ರೀತಿಯ ಪಾತ್ರಗಳ ಬಗ್ಗೆ ಅನಿತಾಗೆ ಖುಷಿಯಿದೆ.

`ಬೆಂಗಳೂರು 69' ಥ್ರಿಲ್ಲರ್‌ ಸಿನಿಮಾ ಕೂಡ ಲಿಸ್ಟ್ ನಲ್ಲಿದೆ. `ಕಲಿವೀರ' ಸಿನಿಮಾದಲ್ಲಿ ಲೇಡಿ ಡಾನ್‌ ಪಾತ್ರದಲ್ಲಿ ಕಾಣಿಸಿಕೊಳ್ಳುವ ಅನಿತಾ, ದೀಪಾವಳಿ ಹಬ್ಬದಲ್ಲಿ ಒಂದು ಪಟಾಕಿ ಕೂಡ ಹೊಡೆದವಳಲ್ಲ. ಆದರೆ ಈ ಚಿತ್ರದಲ್ಲಿ ಗನ್‌ ಹಿಡಿದು ಲೇಡಿ ಡಾನ್‌ ಆದೆ ಎಂದು ನಗುತ್ತಾಳೆ.

ಇಂತಹ ಪಾತ್ರ ಸಿಕ್ಕಿದ್ದು ನನ್ನ ಅದೃಷ್ಟ ಎನ್ನುವ ಅನಿತಾ, ತನ್ನ ವೃತ್ತಿ ಜೊತೆಗೆ ಪ್ರವೃತ್ತಿ ಎನ್ನುವ ಹಾಗೆ ಉತ್ತಮ ಯೋಗಪಟುವಾಗಿ ಯೋಗ ಶಾಲೆ ತೆರೆದಿದ್ದಾಳೆ. ಯೋಗಾಭ್ಯಾಸ ಜೊತೆಗಿನ ನಂಟಿನ ಬಗ್ಗೆ ಅನಿತಾ ಹೇಳುವುದೆಂದರೆ, ಚಿಕ್ಕ ವಯಸ್ಸಿನಿಂದಲೇ ಯೋಗ ಮಾಡುವುದು ಅಭ್ಯಾಸವಂತೆ. ಬಹಳ ಮಂದಿ ಪ್ರಾಣಾಯಾಮ ಮಾತ್ರ ಯೋಗ ಎಂಬ ತಪ್ಪು ಕಲ್ಪನೆಯಲ್ಲಿದ್ದಾರೆ. ನಾವು ಪ್ರತಿನಿತ್ಯ ಮಾಡುವ ವ್ಯಾಯಾಮ, ಜಿಮ್ ವರ್ಕೌಟ್‌ನಲ್ಲೂ ಯೋಗ ಅಡಗಿದೆ. ಹಾಗಾಗಿ ಯೋಗ ನನ್ನ ಜೀವನದ ಒಂದು ಅಂಗವಾಗಿ ಬೆಳೆದಿದೆ. ಕಡೆಯ ತನಕ ಮುಂದುವರಿಸಿಕೊಂಡು ಹೋಗುತ್ತೇನೆ ಎನ್ನುತ್ತಾಳೆ ಅನಿತಾ.

`ನಾನೊಬ್ಬ ಕಲಾವಿದೆಯಾಗಿ ಯೋಗ ಎಷ್ಟು ಅಗತ್ಯ ಎಂಬುದರ ಅರಿವಿದೆ. ಅದೇ ರೀತಿ ಪ್ರತಿಯೊಬ್ಬ ಕಲಾವಿದರಿಗೂ ಯೋಗಾಭ್ಯಾಸ ತುಂಬಾ ಮುಖ್ಯ. ಹಾಗಾಗಿ ನಾನು ಸೋಹಂ ಅರ್ಪಣಾ ಎನ್ನುವ ಯೋಗ ತರಬೇತಿ ಕೇಂದ್ರ ಶುರು ಮಾಡಿದೆ. ``ಆರೋಗ್ಯ ಸೇವೆ ಎಂದು ಭಾವಿಸಿದೆ. ಲಾಭಕ್ಕಾಗಿ ಮಾಡುವ ಉದ್ದೇಶದಿಂದಲ್ಲದಿದ್ದರೂ ಉಚಿತವಾಗಿ ಯೋಗ ಹೇಳಿಕೊಡುವುದಿಲ್ಲ. ಸಮಾಜದಲ್ಲಿ ಮಹಿಳೆಯರಿಗೆ, ಯುವಕರಿಗೆ, ಯುವತಿಯರಿಗೆ ಎಲ್ಲರಿಗೂ ಆರೋಗ್ಯಕ್ಕೆ ಯೋಗದ ಅರಿವು ಮೂಡಿಸುವ ನಿಟ್ಟಿನಲ್ಲಿ ಇದೊಂದು ಸೇವೆ ಎಂದು ನಂಬಿದ್ದೇನೆ. ಮುಖ್ಯವಾಗಿ ಮಹಿಳೆಯರಿಗೆ ಈ ಯೋಗ ಕೇಂದ್ರ ಅರ್ಪಿಸುತ್ತೇನೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ