ಟ್ರೋಲ್ ಆದ ಅನುಷ್ಕಾ

ಅನುಷ್ಕಾ ಇತ್ತೀಚೆಗೆ ಬಾಲಿವುಡ್ ನಲ್ಲಿ `ಚಕ್ದಾ ಎಕ್ಸ್ ಪ್ರೆಸ್‌' ಚಿತ್ರದ ಶೂಟಿಂಗ್‌ ನಲ್ಲಿ ಬಿಝಿ. ಸಿಕ್ಕಿದ ಅಲ್ಪಸ್ವಲ್ಪ ಕಾಲಾವಕಾಶದಲ್ಲೇ, ಆಕೆ ಬಿಸ್ಕತ್ತಿನ ರಿವ್ಯೂ ಆರಂಭಿಸಿದಳು. ಆಕೆಯ ಈ ಬಿಸ್ಕೆಟ್‌ ಪೋಸ್ಟ್ ಪ್ರಕರಣದಲ್ಲಿ ಟ್ರೋಲಿಗರು ಇವಳನ್ನು ಹಿಗ್ಗಾಮುಗ್ಗಾ ಜಗ್ಗಾಡಿದ್ದಾರೆ. ಅಸಲಿಗೆ ಈಕೆ ಆಯತಾಕಾರದ ಬಿಸ್ಕತ್ತಿನ ರಿವ್ಯೂ ಮಾಡುತ್ತಾ, ಬಿಸ್ಕತ್ತಿನ ಸ್ಪೆಲ್ಲಿಂಗ್‌ ತಪ್ಪು ಹಾಕಿದ್ದಳು. ಜನ ಬಿಟ್ಟಾರೆಯೇ? ಟ್ರೋಲಿಂಗ್‌ ಮಾಡಿದ್ದೂ ಮಾಡಿದ್ದೇ! ಸ್ಪೆಲ್ಲಿಂಗ್‌ ಮಿಸ್ಟೇಕ್‌ ಅಂತೂ ಆಗಿಹೋಗಿತ್ತು, ನಂತರ ಅವಳು ಕ್ಷಮೆ ಕೇಳಿದರೇನು ಬಂತು ಭಾಗ್ಯ?

Gill-kis-ke-lie

ಯಾರಿಗಾಗಿ ಗಿಲ್ ಬೆವರು ಹರಿಸಿದ್ದಾಳೆ?

ಶೆಹನಾಜ್‌ ಗಿಲ್ ‌ತನ್ನ ಅಭಿಮಾನಿಗಳ ಮನದಲ್ಲಿ ಭದ್ರವಾಗಿ ನೆಲೆಯೂರಿದ್ದಾಳೆ. ಆದರೆ ಇತ್ತೀಚೆಗೆ ಆಕೆ ಯಾರಿಗೋ ಮನಸ್ಸು ಕೊಟ್ಟುಬಿಟ್ಟಿದ್ದಾಳೆ. ಹೀಗಾಗಿ ಸ್ಲಿಂ ಟ್ರಿಂ ಕರ್ವಿ ಫಿಗರ್‌ ಗಾಗಿ, ಜಿಮ್ ಗೆ ದೌಡಾಯಿಸಿದ ಗಿಲ್ ‌ಬೆವರು ಹರಿಸಿದ್ದೂ ಹರಿಸಿದ್ದೇ! ಮೇಡಂ, ನೀವು ಇದನ್ನೆಲ್ಲ ಮಾಡ್ತಿರೋದು ನಿಮಗಾಗಿ ಅಲ್ಲ, ಬದಲಿಗೆ ಹೇಮ್ಸ್ ಬರ್ಥ್‌ ನ್ನು ಇಂಪ್ರೆಸ್‌ ಮಾಡಲು ಅಂತ ನಮಗೆ ಗೊತ್ತು, ಅಂತಾರೆ ಅಭಿಮಾನಿಗಳು. ಈಕೆ ಮುಕ್ತವಾಗಿ ಒಂದು ವಿಡಿಯೋದಲ್ಲಿ `ಥಾರ್‌ಣಿ ಲವ್ ಥಂಡರ್‌' ಚಿತ್ರದ ನತಾಲಿ ಪೋರ್ಟ್‌ ಮ್ಯಾನ್‌ ಳಂತೆ ತಾನೂ ಆಗಬೇಕೆಂದು ಹೇಳಿಕೊಂಡಿದ್ದಾಳೆ. ಗಿಲ್ ಳ ಈ ಹುಚ್ಚು ಸಾಹಸಕ್ಕೆ ಏನು ಹೇಳೋಣ?

Katrina-ka-bhai

ಕತ್ರಿನಾಳ ತಮ್ಮನ ಡೇಟಿಂಗ್

ಕತ್ರೀನಾ ಇತ್ತೀಚೆಗೆ `ಕಾಫಿ ವಿತ್‌ ಕರಣ್‌' ಶೋನಲ್ಲಿ  ಮಾತನಾಡಿ, ಸಾಕಷ್ಟು  ಲೈಮ್ ಲೈ‌ಟ್‌ ಗಿಟ್ಟಿಸಿದ್ದಾಳೆ. ಇದರಲ್ಲಿ ಈಕೆ ತನ್ನ ಜೀವನದ ಅನೇಕ ರಹಸ್ಯಗಳನ್ನು ಬಿಟ್ಟುಕೊಟ್ಟಿದ್ದಾಳೆ, ಇದರಿಂದ ಇವಳ ಫ್ಯಾನ್ಸ್ ಅಂತೂ ದಂಗಾಗಿದ್ದಾರೆ. ಖ್ಯಾತ ನಟಿ ಇಲಿಯಾನಾ ಇವಳ ತಮ್ಮ ಸೆಬಾಸ್ಟಿಯನ್‌ ಮೈಕೆಲ್ ‌ಜೊತೆ ಡೇಟಿಂಗ್‌ ನಡೆಸಿದ್ದಾಳೆ, ಎಂದು ಇದರಲ್ಲಿ ಹೇಳಿಕೊಂಡಿದ್ದಾಳೆ. ಪ್ರೀತಿ, ಕೆಮ್ಮು..... ಇತ್ಯಾದಿಗಳನ್ನು ಎಷ್ಟು ಪ್ರಯತ್ನಿಸಿದರೂ ಮುಚ್ಚಿಡಲಾಗದಂತೆ! ಅವರಿಬ್ಬರೂ ಪ್ರೇಮದಲ್ಲಿ ಮುಳುಗಿ ಹಾವಭಾವ ಪ್ರದರ್ಶಿಸುತ್ತಾ, ಕತ್ರೀನಾ ವಿಕ್ಕಿ ಕೌಶ್‌ ದಂಪತಿಗಳ ಜೊತೆ ಮಾಲ್ಡೀವ್ ಪ್ರವಾಸದ ಫೋಟೋಗಳಲ್ಲೂ ಕಂಡಬಂದರು. ಅಲ್ಲಿಗೆ ಇದು ಕೇವಲ ದೋಸ್ತಿ ಅಲ್ಲ.... ಇನ್ನೂ ಜಾಸ್ತಿ ಅಂತ ಖಾತ್ರಿಯಾಯ್ತು.

Queen-elizabeth

ಕ್ವೀನ್ಎಲಿಝಬೆಥ್ ನಿಧನಕ್ಕೆ ಶೋಕ

ಇಂಗ್ಲೆಂಡ್‌ ನ ಮಹಾರಾಣಿ, ಕ್ವೀನ್‌ ಎಲಿಝಬೆಥ್‌ ರ ನಿಧನದಿಂದ ಹಾಲಿವುಡ್‌, ಬಾಲಿವುಡ್‌ ನೆಲ್ಲೆಡೆ ಶೋಕದ ವಾತಾವರಣ ಹರಡಿದೆ. ಈಕೆ ಸತ್ತಾಗ 96 ವರ್ಷ, ಬಹಳ ದಿನಗಳಿಂದ ಕಾಯಿಲೆಗೆ ತುತ್ತಾಗಿದ್ದರು. ಬಹಳ ಬಹಳ ವರ್ಷ ಈಕೆ ಇಂಗ್ಲೆಂಡ್‌ ನ ಮಹಾರಾಣಿ ಆಗಿದ್ದರು. ಈಗ ಈಕೆಯ ನಿಧನದ ನಂತರ ಇವರ 73 ದಾಟಿರುವ ಮಗ ಚಾರ್ಲ್ಸ್ ಇದೀಗ ಪಟ್ಟ ಅಲಂಕರಿಸಿದ್ದಾರೆ. ಈ ಮಧ್ಯೆ FB ನಲ್ಲಿ ಇವರ ಮುಗುಳ್ನಗುವಿನ ಫೋಟೋ ಹಾಕಿದ ಸುಶ್ಮಿತಾ ಸೇನ್‌, `ಈಕೆ ತಮ್ಮ ಜೀವನವನ್ನು ಬಹಳ ಸುಂದರವಾಗಿ ಕಳೆದಿದ್ದಾರೆ. ಜೀವನದ ಪ್ರತಿ ಹಂತದಲ್ಲೂ ಮಹಾರಾಣಿಯಾಗಿ ಮೆರೆದಿದ್ದಾರೆ. ಇವರ ನಿಧನ ನಮ್ಮೆಲ್ಲರ ಪಾಲಿಗೆ ನಿಜಕ್ಕೂ ತುಂಬಲಾರದ ನಷ್ಟ!' ಎಂದಿದ್ದಾಳೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ