- ರಾಘವೇಂದ್ರ ಅಡಿಗ ಎಚ್ಚೆನ್.
ಸಾನ್ವಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶಿಲ್ಪ ಪ್ರಸನ್ನ ಅವರು ನಿರ್ಮಿಸಿರುವ, ಖ್ಯಾತ ನಿರ್ದೇಶಕ ರಾಜಕಿಶೋರ್ ಅವರ ಪುತ್ರಿ ಸಿಂಧುಗೌಡ ನಿರ್ದೇಶನದ “ಆಪಲ್ ಕಟ್ ” ಚಿತ್ರ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಾ ಮುನ್ನುಗ್ಗಿದೆ. ನಟ ಸೂರ್ಯ.ಈ ಚಿತ್ರದ ಮೂಲಕ ಮೊದಲ ಬಾರಿಗೆ ಪರಿಪೂರ್ಣ ನಾಯಕನಾಗಿ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಇಅವರಿಗೆ ನಾಯಕಿಯಾಗಿ ಅಶ್ವಿನಿ ಪೋಲೆಪಲ್ಲಿ ಕಾಣಿಸಿಕೊಂಡಿದ್ದಾರೆ. ವೀರ ಸಮರ್ಥ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
ಇದೊಂದು ಕ್ರೈಂ ಥ್ರಿಲ್ಲರ್ ಕಥಾನಕವಾಗಿದ್ದು ಸರಣಿ ಕೊಲೆಗಳ ನಿಗೂಢವನ್ನು ಬೆಧಿಸುವುದೇ ಈ ಚಿತ್ರದ ಮೈನ್ ಹೈಲೈಟ್. ಆನ್ತ್ರೋಪಾಲಜಿ ಎಂಬ ವೈಧ್ಯಕೀಯ ಟೀಂ ಈ ಕೊಲೆಗಳ ರಹಸ್ಯ ಬೇಧಿಸುವುತ್ತದೆ. ಇಂತಹಾ ಕ್ರೈಂ ಥ್ರಿಲ್ಲರ್ ಕಥಾನಕವೊಂದನ್ನು ಬಹುತೇಕ ಹೊಸ ಕಲಾವಿದರನ್ನೇ ಬಳಸಿಕೊಂಡು ಮಹಿಳಾ ನಿರ್ದೇಶಕಿಯೊಬ್ಬರು ತೆರೆಗೆ ತಂದಿರುವುದು ಒಂದು ಸಾಹಸ ಎನ್ನಲೇಬೇಕು.
ಹಿರಿಯ ನಿರ್ದೇಶಕ ರಾಜ್ ಕಿಶೋರ್ ರವರ ಎರಡನೇ ಮಗಳಾದ ಸಿಂಧೂ ಈಗಾಗಲೇ ಕಿರುತೆರೆಯಲ್ಲಿ ಬಹಳಷ್ಟು ಧಾರವಾಹಿಗಳಲ್ಲಿ ಅಭಿನಯಿಸಿದ್ದಾರೆ ಎನ್ನುವುದು ವಿಶೇಷ. ಇನ್ನು "ಆಪಲ್ ಕಟ್" ಚಿತ್ರದ ನಿರ್ಮಾಪಕರೂ ಸಹ ಓರ್ವ ಹೆಣ್ಣು ಮಗಳೆನ್ನುವುದು ಸಹ ಮಹತ್ವದ ಸಂಗತಿ. ಶಿಲ್ಪಾ ಪ್ರಸನ್ನ ಈ ಚಿತ್ರ ನಿರ್ಮಾಣ ಮಾಡಿ ಕನ್ನಡ ಚಿತ್ರರಂಗಕ್ಕೆ ಹೊಸ ನಿರ್ದೇಶಕಿ ಹಾಗೂ ಹೊಸ ನಾಯಕ ನಾಯಕಿಯರನ್ನು ನೀಡಿದ್ದಾರೆ ಎನ್ನಬೇಕು.
ಏನೇ ಇದ್ದರೂ ಪ್ರೇಕ್ಷಕರು ಸಹ ಇಂತಹಾ ಹೊಸಬರ ಪ್ರಯತ್ನಕ್ಕೆ ಮೆಚ್ಚಿ ಬೆನ್ನು ತಟ್ಟಿರುವುದು ಆಪಲ್ ಕಟ್ ಈ ವರ್ಷದ ಒಂದು ಯಶಸ್ವಿ ಚಿತ್ರವಾಗಲು ಕಾರಣವಾಗಿದೆ.