ಕಳೆದ ಜನವರಿಯಲ್ಲಿ ಕಲರ್ಸ್ ಕನ್ನಡದ ಬಹುನಿರೀಕ್ಷಿತ ಬಿಗ್ ಬಾಸ್ ಶೋನ 11ನೇ ಸೀಸನ್ ಫಿನಾಲೆ ಆಯ್ತು. ಈ ಬಾರಿಯ ಬಿಗ್ ಬಾಸ್ ಅನ್ನು ಜನ ತುಂಬಾನೇ ಕುತೂಹಲದಿಂದ ನೋಡಿದ್ರು, ಕಾರಣ ಈ ಬಾರಿ ಈ ಹಿಂದಿನ ಎಲ್ಲಾ ಬಿಗ್ ಬಾಸ್ ಗಿಂತಲೂ ಹೆಚ್ಚಿನ ಅಬ್ಬರವಿತ್ತು. ಕೊನೆ ದಿನದವರೆಗೂ ಪ್ರೇಕ್ಷಕರು ಸರ್ಪ್ರೈಸ್ ಆಗೋ ಥರಾ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡ್ತಾ ಇದ್ರು. ಇದೆಲ್ಲಕ್ಕಿಂತ ಹೆಚ್ಚಾಗಿ ಸುದೀಪ್ ಇದು ತಮ್ಮ ಬಿಗ್ ಬಾಸ್ ಜರ್ನಿಯ ಕೊನೆಯ ಸೀಸನ್ ಅಂತ ಆರಂಭದಲ್ಲೂ ಹೇಳಿದ್ರು, ಶೋ ಉದ್ದಕ್ಕೂ ಹೇಳ್ತಾನೇ ಬಂದ್ರು.

ಈ ಬಿಗ್ ಬಾಸ್ ಸೀಸನ್ ನಡುವಿನಲ್ಲೇ ಕಿಚ್ಚ ಸುದೀಪ್ ತಮ್ಮ ತಾಯಿಯನ್ನ ಕಳೆದುಕೊಂಡ ಕಾರಣ, ಅವರ ತಾಯಿ ತುಂಬಾನೇ ಇಷ್ಟ ಪಡ್ತಿದ್ದ ಶೋವನ್ನ ಮತ್ತೆ ಮುಂದುವರೆಸಲ್ಲ ಅನ್ನೋ ನಿರ್ಧಾರಕ್ಕೆ ಸುದೀಪ್ ಬಂದಂತೆ ಕಾಣ್ತಿತ್ತು. ಜೊತೆಗೆ ಸುದೀಪ್ ಈ ಬಾರಿಯ ಬಿಗ್ ಬಾಸ್ ತುಸು ಹೆಚ್ಚೆ ತಾಳ್ಮೆ ಕಳೆದುಕೊಂಡಂತೆ ಕಾಣ್ತಾ ಇದ್ದರು. ಕಾರಣ ಈ ಬಾರಿ ಬಿಗ್ ಬಾಸ್ ಸ್ಪರ್ಧಿಗಳು. ಮುಂದಿನ ಸೀಸನ್ ನಲ್ಲಿ ಸುದೀಪ್ ಇರಲ್ಲ ಅನ್ನೋ ಕಾರಣಕ್ಕೆ ಜನರು ಈ ಶೋ ನೋಡ್ತಾ ಇದ್ದರು. ಈಗ ಕಲರ್ಸ್ ಕನ್ನಡ ಬಿಗ್ ಬಾಸ್ ನ ಹೊಸ ಸೀಸನ್ ನ ಪ್ಲಾನ್ ಮಾಡಿಕೊಂಡಿದೆ.

ಮಾರ್ಚ್ 22ರಿಂದ ಇಂಡಿಯನ್ ಟಿವಿ ಲೋಕದ ಮಹಾ ಎಂಟರ್ಟೈನರ್ ಐಪಿಎಲ್ ಶುರುವಾಗ್ತಾ ಇರೋದ್ರಿಂದ, ಎಲ್ಲ ಟಿವಿ ಚಾನೆಲ್ ಗಳು ಈ ಟೈಮ್ ನಲ್ಲಿ ತಮ್ಮ ಶೋಗಳ ಪ್ರೇಕ್ಷಕರನ್ನ ಉಳಿಸಿಕೊಳ್ಳೋ ಸಖತ್ ಪ್ಲಾನ್ ಗಳನ್ನ ಮಾಡ್ತಾ ಇದೆ. ಜೊತೆಗೆ ಈ ಐಪಿಎಲ್ ಸೀಸನ್ ನಲ್ಲಿ ಯಾವುದೇ ರಿಸ್ಕ್ ತೆಗೆದುಕೊಳ್ಳೋದು ಬೇಡ ಯಾವುದೇ ಹೊಸ ಶೋ ಲಾಂಚ್ ಮಾಡುವುದು ಬೇಡ ಅನ್ನೋ ಪ್ಲಾನ್ ಕೂಡ ಮಾಡಿಕೊಂಡಿವೆ.

ಸದ್ಯ ಬಿಗ್ ಬಾಸ್ ಮುಗಿದ ಬಳಿಕ ಕಲರ್ಸ್ ಕನ್ನಡ ವಾಹಿನಿಯಲ್ಲಿ 2 ಹೊಸ ಧಾರಾವಾಹಿಗಳು ಲಾಂಚ್ ಆಗಿದ್ವು, ಈ 2 ಸೀರಿಯಲ್​​ಗಳ ಲಾಂಚ್​​​ಗೆ ಒಂದು ತಿಂಗಳ ಮುಂಚೆಯಷ್ಟೆ ಒಂದು ಹೊಸ ಸೀರಿಯಲ್ ಲಾಂಚ್ ಆಗಿದ್ವು, ಈ 3 ಸೀರಿಯಲ್​​ಗಳು ಜನರ ಮನ ಗೆಲ್ಲೋದ್ರಲ್ಲಿ ಸೋತಂತಿವೆ. ಇದೇ ಕಾರಣಕ್ಕೆ ಈಗಾಗ್ಲೆ ಡಿಸೆಂಬರ್ ನಲ್ಲಿ ಲಾಂಚ್ ಆದ ನೂರು ಜನ್ಮಕೂ ಸೀರಿಯಲ್ ರೇಟಿಂಗ್ ಇಲ್ಲದ ಕಾರಣ ಬರೀ ವೀಕೆಂಡ್ ನಲ್ಲಿ ಪ್ರಸಾರ ಮಾಡಲಾಗ್ತಾ ಇದೆ. ಇನ್ನೂ ಬಿಗ್ ಬಾಸ್ ನಂತ್ರ ಲಾಂಚ್ ಆದ ಯಜಮಾನ ಸೀರಿಯಲ್ ಅನ್ನೂ ರಾತ್ರಿ 10ರ ಬದಲು, 9ಕ್ಕೆ ಪ್ರಸಾರ ಮಾಡಲಾಗ್ತಾ ಇದೆ. 9.30ಕ್ಕೆ ಪ್ರಸಾರವಾಗ್ತಾ ಇದ್ದ ಬಹುನಿರೀಕ್ಷಿತ ವಧು ಸೀರಿಯಲ್ ಅನ್ನು ರಾತ್ರಿ 10.30ಕ್ಕೆ ಟೆಲಿಕಾಸ್ಟ್ ಮಾಡಲಾಗ್ತಾ ಇದೆ. ಈ ಟೈಮ್ ನಲ್ಲೂ ಸೀರಿಯಲ್​​ಗಳು ಜನರ ಮನ ಗೆಲ್ಲದೇ ಹೋದ್ರೆ ಈ ಎರಡೂ ಸೀರಿಯಲ್​ಗಳು ಮುಕ್ತಾಯವಾಗಲಿವೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ