ಜಾಗೀರ್ದಾರ್*

ಚೇತನ್ ಸೂರ್ಯ ಅವರ STELLER STUDIO & EVENT MANAGEMENT ಸಂಸ್ಥೆ, PRK Audio ಸಂಸ್ಥೆಯ ಸಹಯೋಗದೊಂದಿಗೆ

"ಅಪ್ಪು ಕಪ್"(ಶಟಲ್ ಬ್ಯಾಡ್ಮಿಂಟನ್ ಟೂರ್ನಿ) ಎರಡು ಸೀಸನ್ ಅದ್ದೂರಿಯಾಗಿ ನಡೆದಿದೆ. ಜುಲೈನಲ್ಲಿ " ಅಪ್ಪು ಕಪ್ ಸೀಸನ್ 3" ಲೀಗ್ ಪಂದ್ಯಗಳು ಆರಂಭವಾಗಲಿದೆ. ಇತ್ತೀಚೆಗೆ "ಅಪ್ಪು ಕಪ್ ಸೀಸನ್ 3" ಉದ್ಘಾಟನೆ ಹಾಗೂ ಟೀಮ್ ಆಕ್ಷನ್ ಸಮಾರಂಭ ಅದ್ದೂರಿಯಾಗಿ ನೆರವೇರಿತು. ಅಶ್ವಿನಿ ಪುನೀತ್ ರಾಜಕುಮಾರ್, ವಿಧಾನ ಪರಿಷತ್ ಸದಸ್ಯರಾದ ಸರವಣ, ಕನ್ನಡಪರ ಹೋರಾಟಗಾರರಾದ ಸಾ.ರಾ.ಗೋವಿಂದು ಹಾಗೂ ಶಾಸಕರಾದ ರಾಜು ಗೌಡ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸ್ಟಾರ್ ರಾಯಭಾರಿಗಳಾದ ಪ್ರಿಯಾಂಕ ಉಪೇಂದ್ರ, ಅನಿರುದ್ಧ ಜಟ್ಕರ್, ಸೃಜನ್ ಲೋಕೇಶ್ , ರಾಜವರ್ಧನ್ ಹಾಗೂ ಗುಡ್ ವಿಲ್ ಸ್ಟಾರ್ ರಾಯಭಾರಿ ರಾಗಿಣಿ ದ್ವಿವೇದಿ ಸೇರಿದಂತೆ ಅನೇಕ ಕಲಾವಿದರು ಉಪಸ್ಥಿತರಿದ್ದರು.
appu1

STELLER STUDIO & EVENT MANAGEMENT ಸಂಸ್ಥೆ, PRK Audio ಸಂಸ್ಥೆಯ ಸಹಯೋಗದೊಂದಿಗೆ "ಅಪ್ಪು ಕಪ್ ಸೀಸನ್ 3" ಅದ್ದೂರಿಯಾಗಿ ಆಯೋಜಿಸಲು ನಿರ್ಧರಿಸಲಾಗಿದೆ. ಅದಕ್ಕೆ ಪೂರ್ವಭಾವಿಯಾಗಿ ಉದ್ಘಾಟನಾ ಸಮಾರಂಭ ನಡೆದಿದೆ.

ಕಳೆದೆರೆಡು ಸೀಸನ್ ಗಳಿಂದ ಅಶ್ವಿನಿ ಪುನೀತ್ ರಾಜಕುಮಾರ್ ಅವರು ನಮ್ಮ ಜೊತೆಗೆ ಇದ್ದಾರೆ. ಅವರಿಗೆ ಹಾಗೂ ಸರವಣ ಅವರು ಸೇರಿದಂತೆ ಎಲ್ಲಾ ಗಣ್ಯರಿಗೆ ಧನ್ಯವಾದ. ಈ ಬಾರಿಯ "ಅಪ್ಪು ಕಪ್" ನ ವಿಶೇಷವೆಂದರೆ ಜುಲೈ 25,26,27 ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಆಗಸ್ಟ್ 16, 17 ರಂದು ಗೋವಾದಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಒಟ್ಟು ಹತ್ತು ತಂಡಗಳಿರುತ್ತದೆ. ಅದರಲ್ಲಿ ನಾಲ್ಕು ತಂಡಗಳು ಫೈನಲ್ ಪ್ರವೇಶಿಸಲಿದೆ ಎಂದು ಆಯೋಜಕರಾದ ಚೇತನ್ ಸೂರ್ಯ ಹೇಳಿದರು‌.

appu2

ಅಶ್ವಿನಿ ಪುನೀತ್ ರಾಜಕುಮರ್ "ಅಪ್ಪು ಕಪ್" ಯಶಸ್ವಿಯಾಗಲೆಂದು ಹಾರೈಸಿದರು. ಸದಾ ನಾನು ಚೇತನ್ ಅವರ ಜೊತೆಗೆ ಇರುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯರು ಹಾಗೂ ಸಾಯಿ ಗೋಲ್ಡ್ ಪ್ಯಾಲೆಸ್ ನ ಮಾಲೀಕರಾದ ಸರವಣ ತಿಳಿಸಿದರು.

appu3

ಅಪ್ಪು ಕಪ್ ಸೀಸನ್ 3 ರಲ್ಲಿ ಭಾಗವಹಿಸುತ್ತಿರುವ ತಂಡಗಳ ವಿವರ

೧) "ವೀರ ಕನ್ನಡಿಗ ಬುಲ್ಸ್" ಮಾಲೀಕರು ಮೊನೀಶ್ ಸಿ, ನಾಯಕ ದಿಲೀಪ್ ರಾಜ್ ಹಾಗೂ ಸ್ಟಾರ್ ರಾಯಭಾರಿ ಸೃಜನ್ ಲೋಕೇಶ್.

೨) ಬಿಂದಾಸ್ ರಾಯಲ್ ಚಾಲೆಂಜರ್ಸ್ ಮಾಲೀಕರು ಪರಿತೋಷ್ ಮೂರ್ತಿ, ನಾಯಕ ದಿಗಂತ್, ಸ್ಟಾರ್ ರಾಯಭಾರಿ ಅವಿನಾಶ್ ದಿವಾಕರ್ .

೩) "ಜಾಕಿ ರೈಡರ್ಸ್" ಮಾಲೀಕರು ಶ್ರೀಹರ್ಷ, ‌ನಾಯಕ ಮನೋರಂಜನ್ ರವಿಚಂದ್ರನ್, ಸ್ಟಾರ್ ರಾಯಭಾರಿ ಪ್ರಿಯಾಂಕ ಉಪೇಂದ್ರ.

೪) "ಮೌರ್ಯ ಸ್ಟ್ರೈಕರ್ಸ್" ಮಾಲೀಕರು ವಿಜೇತ್, ನಾಯಕ ಪ್ರಮೋದ್ ಶೆಟ್ಟಿ, ಸ್ಟಾರ್ ರಾಯಭಾರಿ ರಾಜವರ್ಧನ್.

೫)"ಯುವರತ್ನ ಚಾಂಪಿಯನ್ಸ್ " ಮಾಲೀಕರು ದಿವ್ಯ ರಂಗೇನಹಳ್ಳಿ, ನಾಯಕ ಇಂದ್ರಜಿತ್ ಲಂಕೇಶ್, ಸ್ಟಾರ್ ರಾಯಭಾರಿ ಧನ್ಯ ರಾಮಕುಮಾರ್.

೬) ಪವರ್ ಪೈತಾನ್ಸ್, ಮಾಲೀಕರು ರೂಪ, ನಾಯಕ ಸದಾಶಿವ ಶೆಣೈ, ಸ್ಟಾರ್ ರಾಯಭಾರಿ ಸಿಂಧೂ ಲೋಕನಾಥ್.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ