- ರಾಘವೇಂದ್ರ ಅಡಿಗ ಎಚ್ಚೆನ್.

ಅನಿರೀಕ್ಷಿತ ಅತಿಥಿಗಳು ಎನ್ನುವುದು ಸಿನಿಮಾದ ಹೆಸರು.‌ ಚಿತ್ರದ ಹೆಸರಿಗೂ ಕ್ರೈಮ್ ಜಾನ್ರಾಗೂ ಸಂಬಂಧವೇ ಇಲ್ಲ ಎಂದುಕೊಂಡಿರುವಾಗಲೇ ಹಾಡುಗಳು ಇನ್ನಷ್ಟು ಕುತೂಹಲ ಸೃಷ್ಟಿಸುವ ರೀತಿಯಲ್ಲಿ ಮೂಡಿ ಬಂದಿವೆ. ಹಾಡುಗಳ ಬಿಡುಗಡೆಯ ಸುದ್ದಿಗೋಷ್ಠಿಯಲ್ಲಿ ಚಿತ್ರ ಮುಂದಿನ ತಿಂಗಳು ಅಂದರೆ ಸಪ್ಟೆಂಬರ್ 18ಕ್ಕೆ ರಿಲೀಸ್ ಆಗಲಿರುವುದಾಗಿಯೂ ಮಾಹಿತಿ ಹಂಚಿಕೊಂಡರು.

1001744104

ಆರು ಪ್ರಮುಖ ಪಾತ್ರಗಳನ್ನು ಕೇಂದ್ರವಾಗಿಸಿರುವ

ಈ ಚಿತ್ರವನ್ನು ನವ ನಿರ್ದೇಶಕ ಮನೋಜ್ ಅಣ್ಣಯ್ಯ ನಿರ್ದೇಶಿಸಿದ್ದಾರೆ. ಬಿ ವಿನೋದ್ ಕುಮಾರ್ ನಿರ್ಮಾಣದ ಈ ಚಿತ್ರದಲ್ಲಿ 4 ಪ್ರಮುಖ ಹಾಡುಗಳಿವೆ.

ಸ್ವಾಮಿನಾಥನ್ ಆರ್.ಕೆ ಸಂಗೀತದಲ್ಲಿ ಒಂದು ಲಿರಿಕಲ್ ಹಾಡು ಬಿಡುಗಡೆಯಾಗಿ ಈಗಾಗಲೇ ಸದ್ದು ಮಾಡುತ್ತಿದೆ. ಅದರ ವಿಡಿಯೋವನ್ನು ಪರದೆ ಮೇಲೆ ಪ್ರದರ್ಶಿಸಲಾಯಿತು. ಇನ್ನೊಂದು ಪಾಪ್ ಗೀತೆಯನ್ನು ಗಾಯಕಿ ಸಿರಿಕಟ್ಟೆಯವರು ಅದ್ಭುತವಾಗಿ ಹಾಡಿದ್ದಾರೆ.‌ ಹಾಡು ಪೂರ್ತಿಯಾಗಿ ಆಂಗ್ಲದಲ್ಲಿದೆ. ಆದರೆ ಇದು ಸಂದರ್ಭಕ್ಕೆ ಹೊಂದುವಂತೆ ಗೀತೆ ಎಂದು ನಿರ್ದೇಶಕ ಮನೋಜ್ ಅಣ್ಣಯ್ಯ ಹೇಳಿದ್ದಾರೆ.‌

1001744096

ಒಂದು ದಿನದಲ್ಲಿ ಗೆಸ್ಟ್ ಹೌಸ್ ನಲ್ಲಿ ನಡೆಯುವ ಕಥೆ. ಇದೊಂದು ಕ್ರೈಮ್ ಥ್ರಿಲ್ಲರ್. ಗಾಯಕಿ  ಸಿರಿಕಟ್ಟೆ ಮಾತನಾಡಿ, ಈ ಚಿತ್ರದಲ್ಲಿ ನಾನು  ಎರಡು ಹಾಡುಗಳನ್ನು ಹಾಡಿದ್ದೇನೆ. ಈ ಹಿಂದೆ ಹೆಜ್ಜಾರು, ಮಾಂಗ್ ದ ಯಂಗ್ ಎನ್ನುವ ಚಿತ್ರಗಳಲ್ಲಿ ಹಾಡಿದ್ದೇನೆ ಎಂದರು. ಮತ್ತೊಂದು ಹಾಡಿಗೆ ಧ್ವನಿಯಾದ ಹರ್ಷಿತಾ ದೇವನಾಥ್ ಮತ್ತು ರಜತ್ ಹೆಗ್ಡೆ ಗೀತೆಯ ಪಲ್ಲವಿಯನ್ನು ವೇದಿಕೆ ಮೇಲೆ ಆಲಾಪಿಸಿದರು.

1001744100

ನಿರ್ಮಾಪಕ ಬಿ.ವಿನೋದ್ ಕುಮಾರ್ ಮಾತನಾಡಿ, ನಾನು ಸಹಾಯಕ ಛಾಯಾಗ್ರಾಹಕನಾಗಿ ತುಂಬ ಕೆಲಸ ಮಾಡಿ ಎಂಟ್ರಿ ಕೊಟ್ಟಿದ್ದೆ. ಜಗ್ಗಿಯವರ ಮೂಲಕ ನಿರ್ದೇಶಕ‌ ಪರಿಚಯವಾದರು. ಒಂದೊಳ್ಳೆಯ ಎನರ್ಜಿ ಸಿಕ್ಕಿತು ಎಂದರು. ಯುವನಟ ವಿವೇಕ್ ಸಿಂಹ ಮಾತನಾಡಿ, ನಿರ್ದೇಶಕರೊಂದಿಗೆ ಹದಿನೈದು ವರ್ಷಗಳ ಸ್ನೇಹ. ನಾವೆಲ್ಲ ರಂಗಭೂಮಿಯಿಂದ ಬಂದವರು. ಇದು

ಅನಿರೀಕ್ಷಿತವಾಗಿ ಆಗಿರುವ ಚಿತ್ರ ಎಂದರು.

1001744101

ಚಿತ್ರದಲ್ಲಿ ನಾಯಕನ ಸ್ಥಾನದಲ್ಲಿರುವ

ಮೈತ್ರಿ ಖ್ಯಾತಿಯ ನಟ ಜಗ್ಗಿ ಮಾತನಾಡಿ, ನಾನು 'ರಾಜರು ಚಿತ್ರದಲ್ಲಿ ನಟಿಸುವಾಗ ಅಸೋಸಿಯೇಟ್ ಕ್ಯಾಮರಾಮ್ಯಾನ್ ಆಗಿದ್ದವರೇ ಈ ಚಿತ್ರವನ್ನು ನಿರ್ಮಿಸಿದ್ದಾರೆ. ನಿರ್ದೇಶಕರು ಪ್ರತಿ ಪಾತ್ರವನ್ನು ಕೆತ್ತಿದ್ದಾರೆ ಎಂದರು.

1001744097

ಚಿತ್ರದ ನಾಯಕಿ ಸಂಪ್ರತಿ ಆಳ್ವ ತಮ್ಮ ಹಾಡಿಗೆ ಕಂಠ ನೀಡಿರುವ ಗಾಯಕಿ ಸಿರಿಕಟ್ಟೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಈ ಹಿಂದೆ ಇದೇ ಗಾಯಕಿಯ ತಾಯಿಯ ಸಂಗೀತದಲ್ಲೂ ನಟಿಸಿದ್ದೆ. ಇದೀಗ  ಸಿರಿಕಟ್ಟೆಯವರೇ ನನಗಾಗಿ ಹಾಡಿದ್ದಾರೆ ಎಂದು ಸಂಭ್ರಮಿಸಿದರು. ನಟ ಶ್ರೀದತ್ತ ಈ ಹಿಂದೆ ತಾವು ಮ್ಯಾನ್ ಆಫ್ ದಿ ಮ್ಯಾಚ್ ಸಿನಿಮಾ, ಹಾಗೂ ಒಂದು ಧಾರಾವಾಹಿಯಲ್ಲಿಯೂ ನಟಿಸಿದ್ದೆ ಎಂದರು.

ದೈವೀಕ್ ನಾಗ್ ತಾವು ರಾಬಿ ಎನ್ನುವ ಪಾತ್ರ ಮಾಡಿದ್ದಾಗಿ ತಿಳಿಸಿದರು. ಚಿತ್ರದ ಯಾಗ್ರಾಹಕ

ಎರಿಕ್ ತುಂಬಾ ಶ್ರಮಜೀವಿ. ಅವರೇ ಡಿ.ಐ  ಕೂಡ ಮಾಡಿದ್ದಾರೆ ಎಂದು ತಂಡದ ಮಂದಿ‌ ನೆನಪಿಸಿಕೊಂಡರು.

1001744099

ನವ ನಟಿ ಹರಿತಾ ಷಾ ಮಾತನಾಡಿ, ‌ಪ್ರತಿ ಕಲಾವಿದರೂ ಸಿನಿಮಾದಲ್ಲಿ ಏನಾದರೂ ಕಲಿಯಬೇಕುಎಂದು  ಳಳ ಎಂದುಕೊಳ್ಳುತ್ತಾರೆ. ನಾನು ಈ ಚಿತ್ರದ ಮೂಲಕ ತುಂಬ ಒಳ್ಳೆಯದನ್ನು ಕಲಿತಿದ್ದೇನೆ ಎಂದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ