ಕಳೆದ ಸಂಚಿಕೆಯಲ್ಲಿ ನಾಡಿನ ಖ್ಯಾತ ರಂಗಕರ್ಮಿ, ನಾಟಕಾರ, ನಿರ್ದೇಶಕ, ಸಂಗೀತ ನಿರ್ದೇಶಕ, ಹತ್ತು ಹಲವು ರಾಜ್ಯ ಮತ್ತು ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ಶ್ರೀ ಬಿ.ವಿ. ಕಾರಾಂತರ ಬಗ್ಗೆ ತಿಳಿದು ಕೊಂಡಿದ್ದೆವು. ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇದ್ದಾಳೆ ಎಂಬ ಪ್ರಸಿದ್ಧ ಆಂಗ್ಲ ನಾಣ್ಣುಡಿಯಿದ್ದು, ಆ ಮಹಿಳೆ, ತಾಯಿ, ಸಹೋದರಿ, ಪತ್ನಿ ಇಲ್ಲವೇ ಬೇರೆಯವರು ಸಹಾ ಆಗಿರಬಹುದು. ಈ ಮಾತಿಗೆ ಜ್ವಲಂತ ಉದಾಹರಣೆಯಂತೆ ಶ್ರೀ ಬಿ.ವಿ. ಕಾರಾಂತರ ಧರ್ಮಪತ್ನಿಯಾಗಿ, ಅವರ ಎಲ್ಲಾ ಕಾರ್ಯಗಳ ಹಿಂದೆ ಬಹುದೊಡ್ಡ ಶಕ್ತಿಯಾಗಿ ಸ್ವತಃ ನಟಿ, ರಂಗಕರ್ಮಿ, ವಸ್ತ್ರವಿನ್ಯಾಸಕಿಯಷ್ಟೇ ಅಲ್ಲದೇ, ಕನ್ನಡದ ಪ್ರಪ್ರಥಮ ಮಹಿಳಾ ನಿರ್ದೇಶಕಿ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಂತಹ ಶ್ರೀಮತಿ ಪ್ರೇಮಾ ಕಾರಂತರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯವನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.

ಕಬ್ಬಿಣದ ನಾಡು ಭದ್ರಾವತಿ ಮೂಲದ ಶ್ರೀ ದೇವೋಜಿ ರಾವ್ ಮತ್ತು ಕಮಲಮ್ಮ ದಂಪತಿಗಳ ಸುಪುತ್ರಿಯಾಗಿ 1936ರ ಆಗಸ್ಟ್ 15ರಂದು ಪ್ರೇಮ ಅವರ ಜನನವಾಗುತ್ತದೆ. ಮನೆಯಲ್ಲಿ ಕಿತ್ತು ತಿನ್ನುವ ಬಡತನವಿದ್ದು, ಜೀವನವನ್ನು ನಡೆಸುವುದೇ ಕಷ್ಟಕರ ಎನಿಸಿದ್ದಂತಹ ಸಮಯದಲ್ಲೇ ಅವರ ತಂದೆಯವರ ದೇಹಾಂತ್ಯವಾಗುತ್ತದೆ. ಇನ್ನು ಅವರ ತಾಯಿ ಕಮಲಮ್ಮನವರು ಕ್ಷಯರೋಗದಿಂದ ಬಳಲುತ್ತಿದ್ದು ಅದರ ಸೋಂಕು ಮತ್ತೊಬ್ಬರಿಗೆ ತಾಗಬಾರದೆಂದು ಆಕೆಯ ಬಳಿ ಯಾರನ್ನೂ ಹೋಗಲು ಬಿಡದೇ ಇದ್ದ ಕಾರಣ ಪ್ರೇಮಾರವರಿಗೆ ಬಾಲ್ಯದಿಂದಲೂ ತಂದೆ ತಾಯಿಯರ ಪ್ರೀತಿ ಪ್ರೇಮಗಳು ಲಭಿಸದೇ ಹೋದರೂ, ಅಂದಿನ ಅವಿಭಜಿತ ಕೋಲಾರದ ಶಿಡ್ಲಘಟ್ಟದಲ್ಲಿದ್ದ ತಮ್ಮ ಅಜ್ಜಿಯ ಮನೆಯಲ್ಲಿ ನೆಲಸಿ ಅಲ್ಲಿ ಅಜ್ಜಿಯ ಆಶ್ರಯದಲ್ಲಿ ಬೆಳೆದದ್ದಲ್ಲದೇ, ಅಲ್ಲಿಯೇ ತಮ್ಮ ವಿದ್ಯಾಭ್ಯಾಸವನ್ನು ಮುಗಿಸುತ್ತಾರೆ.

ಅಜ್ಜಿಯ ಮನೆಯಲ್ಲಿ ಅಜ್ಜಿಯಿಂದ ಕಲಿತ ಸಂಸ್ಕಾರ ಮತ್ತು ಸಂಪ್ರದಾಯಗಳ ಜೊತೆ ಸ್ವಾಭಿಮಾನಿಯಾಗಿ ಬದುಬೇಕೆಂಬ ಛಲವನ್ನು ಹೊತ್ತು ಬೆಂಗಳೂಗೆ ಬಂದು ಸೇಂಟ್ ತೆರೇಸಾ ಕಾನ್ವೆಂಟಿನಲ್ಲಿ ಶಿಕ್ಷಕಿಯಾಗಿ ಸೇರಿಕೊಳ್ಳುತ್ತಾರೆ. ಸಹಜವಾಗಿಯೇ ಶಾಲೆಯಲ್ಲಿ ನಡೆಯುತ್ತಿದ್ದ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಬಹಳ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದದ್ದಲ್ಲದೇ, ತಮ್
ಇದೇ ಸಮಯದಲ್ಲೇ ಬಿ.ವಿ. ಕಾರಾಂತರು ವಾರಣಾಸಿಯಲ್ಲಿದ್ದ ಕಾರಣ, ಪತಿಯವರೊಡನೆ ಪ್ರೇಮಾರವರೂ ಸಹಾ ವಾರಣಾಸಿಗೆ ತೆರಳಿ, ಅಲ್ಲಿ ತಮ್ಮ ಶಿಕ್ಷಣವನ್ನು ಮುಂದುವರಿಸಲು ಬನಾರಸ್ ಹಿಂದೂ ವಿಶ್ವವಿದ್ಯಾಲಯಕ್ಕೆ ಸೇರಿಕೊಳ್ಳುತ್ತಾರೆ, ಮುಂದೆ, ಬಿ.ವಿ.ಕಾರಂತರು ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾಗೆ ಸೇರಿದಾಗ, ಅಷ್ಟರಲ್ಲಾಗಲೇ ತಮ್ಮ ಶಿಕ್ಷಣವನ್ನು ಮುಗಿಸಿದ್ದ ಪ್ರೇಮಾ ಅವರು ದೆಹಲಿಗೆ ಹೋಗಿ ಅಲ್ಲಿನ ಅರಬಿಂದೋ ಆಶ್ರಮದಲ್ಲಿ ಶಿಕ್ಷಕಿಯಾಗಿ ಸೇರಿಕೊಂಡು ಮತ್ತೆ ಅಲ್ಲಿ ವಿವಿಧ ನಾಟಕ ಪ್ರಯೋಗವನ್ನು ಮುಂದುವರೆಸಿ, ನಾಟಕಗಳ ಮೂಲಕ ಮಕ್ಕಳಿಗೆ ಇತಿಹಾಸ ಮತ್ತು ಗಣಿತದಂತಹ ವಿಷಯಗಳನ್ನು ಬಹಲ ಸುಲಭವಾಗಿ ಅರ್ಥವಾಗುವಂತಹ ಕಲ್ಪನೆಯನ್ನು ಸಾಕಾರಗೊಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗುತ್ತಾರೆ. ಬಿ.ವಿ. ಕಾರಂತರ ಒತ್ತಾಸೆಯ ಮೇರೆಗೆ ಪ್ರೇಮಾ ಕಾರಂತರೂ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಸೇರಿದಾಗ ಖ್ಯಾತ ನಟರಾದ ಓಂ ಪುರಿ, ಸಾಯಿ ಪರಾಂಜಪೆ ಮುಂತಾದವರು ಅವರ ಸಹಪಾಠಿಗಳಾಗಿದ್ದರು. ಅಲ್ಲಿ ಪದವಿಯನ್ನು ಪಡೆದ ನಂತರ ಅಲ್ಲೇ ಎರಡು ವರ್ಷ ನಾಟಕದ ಶಿಕ್ಷಕಿಯಾಗಿ ದುಡಿದದ್ದಲ್ಲದೇ, ರಾಷ್ಟ್ರೀಯ ಪುಸ್ತಕ ಟ್ರಸ್ಟ್ ನ ಭಾಷಾಂತರಕರಾಗಿ, ಕನ್ನಡದಿಂದ ಹಿಂದಿ ಮತ್ತು ಹಿಂದಿಯಿಂದ ಕನ್ನಡಕ್ಕೆ ಸುಮಾರು ೮ ನಾಟಕಗಳನ್ನು ಅನುವಾದಿಸುತ್ತಾರೆ.





