ಹೈದರಾಬಾದ್ ನಿಂದ ಹೊಸಪೇಟೆಗೆ ರೈಲಿನಲ್ಲಿ ರಾಯಚೂರು  ಮಾರ್ಗವಾಗಿ ಹೊರಟಿದ್ದೆ. ನನಗೆ ಕೆಳಗಿನ ಬರ್ತ್ ಸಿಕ್ಕಿತ್ತು. ರಾತ್ರಿ 9 ಆಗುತ್ತಿತ್ತು. ತಂದಿದ್ದ ಊಟ ಮುಗಿಸಿ ಹಾಗೇ ಕೂತಿದ್ದೆ.

ಯಾವುದೋ ಸ್ಟೇಷನ್ ನಲ್ಲಿ ವಯಸ್ಸಾದ ದಂಪತಿಗಳು ಹತ್ತಿದರು.  ನಾನು ಕುಳಿತಿದ್ದ ಬರ್ತ್ ಗಳ  ಹತ್ತಿರವೇ ಬಂದು ತಮ್ಮ ಬರ್ತ್ ಗಾಗಿ ಹುಡುಕಾಡಿದರು. ಆಗ ತಿಳಿಯಿತು, ಅವರಲ್ಲಿ ಒಬ್ಬರಿಗೆ ಮೇಲಿನ ಬರ್ತ್, ಒಬ್ಬರಿಗೆ ಕೆಳಗಿನ ಬರ್ತ್ ಸಿಕ್ಕಿದೆ ಎಂದು. ಆತನಿಗೆ ಮೇಲಿನ ಬರ್ತ್ ಬದಲಾಗಿ ಕೆಳಗಿನ ಬರ್ತ್ ಬೇಕಾಗಿತ್ತು. ನನ್ನನ್ನು ತೆಲುಗಿನಲ್ಲಿ ಕೇಳಿದರು

"ಏಮಿ ಸಾರ್, ಮೀದಿ ಲೋಯರ್  ಬರ್ತೇನಾ?" (ಏನ್ ಸರ್, ನಿಮ್ಮದು ಕೆಳಗಿನ ಬರ್ತೇನಾ?)

ನಾನೂ ತೆಲುಗುನಲ್ಲೇ

" ಔನು (ಹೌದು)" ಅಂದೆ.

ಆತ ನನಗೆ ತೆಲುಗಿನಲ್ಲಿ ರಿಕ್ವೆಸ್ಟ್ ಮಾಡಿಕೊಂಡ

"ನೀವೊಬ್ಬರೇ ಅಲ್ಲವಾ, ಇನ್ನೂ ಯುವಕರು. ನನಗೆ ಮೇಲೆ ಹತ್ತಲಾಗುವುದಿಲ್ಲ... ಮೇಲಿನ ಬರ್ತೇ ಸಿಕ್ಕಿರುವುದು... ನಿಮಗೆ ತೊಂದರೆ ಯಾಗದಿದ್ದರೆ ದಯಮಾಡಿ ನನ್ನ ಅಪ್ಪರ್ ಬರ್ತ್ ತಗೊಂಡು ನನಗೆ ಈ ಕೆಳಗಿನ ಬರ್ತ್ ಬಿಟ್ಟುಕೊಡಲು ಸಾಧ್ಯವೇ?"

ನಾನು ಮರು ಮಾತಾಡದೆ ನನ್ನ ಕಿಟ್ ಬ್ಯಾಗನ್ನು ಅವರ ಅಪ್ಪರ್ ಬರ್ತ್ ನಲ್ಲಿಟ್ಟು ಮೇಲೆ ಹತ್ತಿ ಹೋಗಿ ಅಲ್ಲಿ ಮಲಗಿದೆ.

ಕೆಳಗೆ ತಮ್ಮ ಲಗ್ಗೇಜನ್ನು ಸೀಟ್ ಕೆಳಗೆ ಸರಿಸಿ ತಾವೂ ಹಾಸಿಕೊಂಡು ಮಲಗಿದರು.

compassion2

ಹೆಂಡತಿ ಗಂಡನ ಜೊತೆಗೆ ಏನೋ ಮಣ-ಮಣ ಮಾತಾಡುತ್ತಿದ್ದಳು. ಆದರೆ ಗಂಡ ಏನೂ ಉತ್ತರ ಕೊಡುತ್ತಿರಲಿಲ್ಲ. ತನ್ನ ಪಾಡಿಗೆ ತಾನು ಮಲಗಿದ. ಆಕೆಯೂ ಮಲಗಿದರು.

ಬೆಳಗಿನ ಜಾವ 5 ಗಂಟೆಗೆ ನನಗೆ ವಾಡಿಕೆಯಂತೆ ಎಚ್ಚರವಾಯಿತು. ಖಾಲಿ ಇರುತ್ತದೆ ಈಗ ಎಂದು ಟಾಯ್ಲೆಟ್, ಮುಖಮಾರ್ಜನೆ ಎಲ್ಲ ಮುಗಿಸಿ ಬಂದು ಮತ್ತೆ ಮೇಲೆ ಹತ್ತಿ ಸುಮ್ಮನೆ ಮಲಗಿಕೊಂಡೆ. ನಾನು ಇಳಿದು ರೈಲು ಬದಲಾಯಿಸಬೇಕಾದ ಗುಂತಕಲ್ ಸ್ಟೇಷನ್ ಇನ್ನು ಬಹಳ ದೂರವಿತ್ತು, ಸಾಕಷ್ಟು ಸಮಯವಿತ್ತು. ಟ್ರೈನ್ ಅವತ್ತು ಲೇಟ್ ಬೇರೆ.

ಸ್ವಲ್ಪ ಹೊತ್ತಿನಲ್ಲಿ ಹೆಂಡತಿ ಎದ್ದು ತನ್ನ ಬಹಿರ್ದೆಸೆ, ಮುಖಮಾರ್ಜನೆ ಎಲ್ಲ ಮುಗಿಸಿಕೊಂಡು ಬಂದು ಗಂಡನನ್ನು ಎಬ್ಬಿಸುವ ಪ್ರಯತ್ನ ಮಾಡಿದರು.

"ಏಳ್ರಿ... ರಾಯಚೂರು ಬರ್ಲಿಕ್ಕ ಹತ್ತದ

ಕಾಣತದ...ಎದ್ದು ಮಾರಿ ತೊಳ್ದು ಟಾಯ್ಲೆಟ್ ಗೇನರ ಹೋಗಂಗಿದ್ದರ  ಮುಗಿಸಿ ಬಂದು ತಯಾರಾಗ್ರಿ...ಇಳಿಬೇಕಲ್ಲ"

"ನಾನೆಲ್ಲಿ ಇಳೀತೀನಿಲ್ಲೆ?... ನಾ ಹೇಳೇ  ಬಿಟ್ಟೀನಲ್ಲ... ನೀನೊಬ್ಬಾಕಿ ಇಳ್ಕೊಂಡು ಹೋಗು... ನಿನ್ನ ಮಗಳು ಬಂದಿರ್ತಾಳ... ಆಕಿ ಕೂಡ ಹೋಗು... ನಾ ಮುಂದೆ ಹೋಗೋಂವ"

"ಹಂಗ್ಯಾಕೆ ಮಾಡ್ತೀರೀ...ನಾ  ಏನಂದೀನಂತ ಹಿಂಗ  ಮಾತಾಡಲಿಕ್ಕ ಹತ್ತೀರಿ?... ಸುಮ್ಮನ ಇಳಕೊಳ್ರೀ... ಸುಮಿ ದಾರಿ ನೋಡ್ತಿರ್ತಾಳ ಅಪ್ಪ ಬರ್ತಾರ ಅಂತ... ಅವಳಿಗ್ಯಾಕ ನೀರು ಉಗ್ಗುತೀರಿ ಮಾರಿ ಮ್ಯಾಲೆ?"

"ನೀ ನನಗೇನು ಲೆಕ್ಚರ್ ಕೊಡಬ್ಯಾಡ. ಸುಮ್ಮನ ಇಳಕೊಂಡು ಹೋಗು...ಅಪ್ಪ ಬರಂಗಿಲ್ಲ ಅಂತಾರಂತ ಹೇಳು ಬೇಕಂದ್ರ. ಯಾರೇನ್ ಹೇಳವಲ್ಲರ್ಯಾಕ... ನಾ ಏನು  ಇಳಕೊಳ್ಳೋಂವ ಅಲ್ಲ... ಏನು"

compassion1

(ಓಹೋ, ಗಂಡ ಹೆಂಡತಿ  ಮಧ್ಯೆ ಏನೋ ವಿರಸ ನಡೆದಿದೆ ಊರಲ್ಲಿ... ಗಂಡ ಹೆಂಡತಿಗೆ ಬುದ್ಧಿ ಕಲಿಸುವ ಪ್ರಯತ್ನ ಮಾಡುತ್ತಿದ್ದಾನೆ... ಅಂತ ಅನಿಸಿತು ನನಗೆ)

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ