ಕಥೆ - ಶುಭಾ ಶ್ರೀನಾಥ್

ಕಾಲೇಜಿನಲ್ಲಿ ಲೆಕ್ಚರರ್ಆಗಿದ್ದ ನಿಮಿಷಾ ಶಿಸ್ತಿನ ಸಿಪಾಯಿಯಂಥ ಸ್ವಭಾವ ಹೊಂದಿದ್ದಳು. ಜೀವನದ ವಾಸ್ತವತೆ ಅವಳನ್ನು ಕಟುವಾಗಿ ವರ್ತಿಸುವಂತೆ ಮಾಡಿತ್ತು. ಇವಳ ಸ್ವಭಾವಕ್ಕೆ ತೀರಾ ವಿರುದ್ಧ ಸ್ವಭಾವದವನಾದ ಸಹೋದ್ಯೋಗಿ, ಸದಾ ಲವಲವಿಕೆಯ ಹಸನ್ಮುಖಿ ಅದ್ವಿತೀಯ ಆದರ್ಶ ಗುಣವುಳ್ಳವನು. ಇವಳ ಬದುಕಲ್ಲಿ ಬದಲಾವಣೆ ತರಲು ಬಯಸಿದ ಅವನಿಗೆ ಇವಳ ಉತ್ತರವೇನು......?

ಬಾದಾಮಿ ಬಣ್ಣದ ಕಾಟನ್‌ ಸೀರೆ ಉಟ್ಟು, ಉದ್ದ ಕೂದಲನ್ನು ಹೆಣೆದು, ಮುಖಕ್ಕೆ ತೆಳುವಾಗಿ ಪೌಡರ್‌ ಲೇಪಿಸಿಕೊಂಡು ಹಣೆಗೆ ದುಂಡನೆಯ ಕೆಂಪು ಕುಂಕುಮ ಇಟ್ಟಿದ್ದ ನಿಮಿಷಾ ಕೋಣೆಯಿಂದ ಹೊರಗೆ ಬಂದಳು. ಡೈನಿಂಗ್‌ ಟೇಬಲ್ ಮೇಲೆ ಅವಳಿಗಾಗಿ ಇಡ್ಲಿ, ಚಟ್ನಿ ಕಾಯುತ್ತಿತ್ತು. ಯಾಂತ್ರಿಕವಾಗಿ ಬೇಗನೇ ಮೂರು ಇಡ್ಲಿ ತಿಂದು ಮುಗಿಸಿದಾಗ, ತಾಯಿ ಕಾವೇರಮ್ಮ ಇನ್ನೊಂದು ಇಡ್ಲಿ ಎಂದರು. ಬೇಡ ಎನ್ನುವಂತೆ ಸನ್ನೆ ಮಾಡಿದ ಅವಳು, ವ್ಯಾನಿಟಿ ಬ್ಯಾಗಿಗೆ ಮಧ್ಯಾಹ್ನದ ಊಟದ ಡಬ್ಬಿಯನ್ನು ಸೇರಿಸಿದಳು.

``ಇನ್ನೊಂದು ಇಡ್ಲಿ ಹಾಕಿಸಿಕೊಳ್ಳೆ, ಅಲ್ಲಿ ಪಾಠ ಮಾಡೋಕೆ ಶಕ್ತಿ ಬೇಡವೇ.....?'' ತಾಯಿ ಪ್ರೀತಿ ತುಂಬಿದ ಅಸಮಾಧಾನದಿಂದ ಹೇಳಿದಾಗ ಮರು ಮಾತನಾಡದೇ ನಡೆದಳು.

ಕಾವೇರಮ್ಮನ ಮೊಗದ ತುಂಬಾ ದುಃಖವೇ ತುಂಬಿತ್ತು. ನಿಮಿಷಾಗೆ ತಾಯಿಯ ದುಃಖಕ್ಕೆ ಸಮಾಧಾನವಾಗಿ ಕುಳಿತು ನಾಲ್ಕು ಮಾತನಾಡುವಷ್ಟು ಸಮಯ ಇರಲಿಲ್ಲ, ಸೈರಣೆಯೂ ಇರಲಿಲ್ಲ. ಇನ್ನು ಏನಾದರೂ ಮಾತಾಡಿದರೆ ತಾಯಿ ಅತ್ತೇ ಬಿಡುತ್ತಾರೆ ಎಂದು ಅವಳಿಗೆ ಗೊತ್ತಿತ್ತು. ಹಾಗಾಗಿ ಮಾತಿಗಿಂತ ಮೌನವೇ ಲೇಸು ಅಂತ ಅಂದುಕೊಂಡಳು.

ದ್ವಿಚಕ್ರ ವಾಹನ ಏರಿ ಕಾಲೇಜಿನ ದಾರಿಯನ್ನು ಹಿಡಿದಳು. ಅವಳಿಗೆ ತಾಯಿಯ ದುಃಖಕ್ಕೆ ಕಾರಣ ಏನೆಂದು ಗೊತ್ತಿತ್ತು. ತಾಯಿಯ ಮೇಲೆ ಕನಿಕರ ಇತ್ತು. ಕಳೆದ ವಾರ ನೋಡಿಕೊಂಡು ಹೋಗಿದ್ದ ವರನ ಕಡೆಯವರು ಏನೋ ಸಬೂಬು ಹೇಳಿ ನಿಮ್ಮ ಹುಡುಗಿ ಇಷ್ಟವಿಲ್ಲವೆಂದು ಹೇಳಿದ್ದರು. ಅಮ್ಮನಿಗೆ ತನ್ನ ಮದುವೆ ಆಗಿಲ್ಲವೆಂದು ಆತಂಕ, ದುಃಖ. ಅದು ಸಹಜವೇ ಆಗಿತ್ತು. ತನಗೀಗ 32, ತನ್ನ ಓರಗೆಯ ಗೆಳತಿಯರಿಗೆ ಮದುವೆಯಾಗಿ ಮಕ್ಕಳಾಗಿವೆ. ಆದರೆ ತನ್ನ ಮದುವೆ ಇನ್ನೂ ಆಗಿಲ್ಲ. ಏನು ಮಾಡುವುದು ನನ್ನ ಹಣೆಬರಹವೇ ಹಾಗಿದೆ.

ನಿಮಿಷಾ ಎಂ.ಎಸ್ಸಿ ಫಿಸಿಕ್ಸ್ ಮುಗಿಸಿ, ಪ್ರಸಿದ್ಧ ಕಾಲೇಜಿನಲ್ಲಿ ಲೆಕ್ಚರರ್‌ ಆಗಿದ್ದಳು. ಕೈತುಂಬಾ ಸಂಬಳ, ಎತ್ತರದ ನಿಲುವು, ಗೋಧಿ ಮೈಬಣ್ಣ, ದೊಡ್ಡ ಕಂಗಳು ಕೂಡ ಯಾವ ವರನನ್ನೂ ಕೂಡ ಆಕರ್ಷಿಸುವಲ್ಲಿ ಯಶಸ್ವಿಯಾಗಿರಲಿಲ್ಲ. ಆದರೆ ಪ್ರತಿಯೊಬ್ಬ ಗಂಡು ಕೂಡ ಅವಳನ್ನು ನಿರಾಕರಿಸಲು ಕಾರಣ ಅವಳಿಗೆ ಗೊತ್ತಿತ್ತು. ಅವಳು ಸದಾ ಗಂಭೀರ ವದನೆ, ಗಂಟಿಕ್ಕಿದ ಹುಬ್ಬುಗಳು, ಮುಗುಳ್ನಗೆಯ ಲೋಪ ಮೊಗದಲ್ಲಿ ಎದ್ದು ಕಾಣಿಸುತ್ತಿತ್ತು. ಚಿಕ್ಕಂದಿನಿಂದಲೂ ಶಾಲೆ, ಕಾಲೇಜಿನಲ್ಲಿ ಕೂಡ ಅವಳು ಯಾವಾಗಲೂ ಹೀಗೆಯೇ ಗಂಭೀರವಾಗಿರುತ್ತಿದ್ದಳು. ಅವಳು ಮಾತು ಕಡಿಮೆ, ಕೆಲಸ ಜಾಸ್ತಿ ಮಾಡುತ್ತಿದ್ದಳು.

ಹೆಣ್ಣುಮಕ್ಕಳು ಗಂಭೀರವಾಗಿರಬೇಕು ಎಂದು ಚಿಕ್ಕಂದಿನಿಂದಲೇ ತಾಯಿ ತಂದೆ ಹೇಳಿದ್ದರ ಪರಿಣಾಮವೋ ಏನೋ ಅವಳು ನಗುವುದು ಬಲು ಅಪರೂಪ. ಆದರೆ ನಕ್ಕರೆ ಅವಳೂ ಚೆಲುವೆಯೇ! ನಗುವಿನ ಲೇಪನವಿಲ್ಲದ ಸೌಂದರ್ಯ ಯಾವ ವರನಿಗೂ ಆಕರ್ಷಕ ಎನಿಸಿರಲಿಲ್ಲ. ಯಾರಿಗಾಗಿಯೋ ಅವಳಿಗೆ ಬದಲಾಗುವುದು ಇಷ್ಟವಿರಲಿಲ್ಲ. ಅವಳು ಹೇಗಿದ್ದಳೋ ಹಾಗೇ ಒಪ್ಪಿಕೊಳ್ಳುವ ಗಂಡು ಬೇಕೆನ್ನುವುದು ಅವಳ ಮನಸ್ಥಿತಿಯಾಗಿತ್ತು. ಅವಳ ತಂದೆ ಅದೇ ಯೋಚನೆಯಲ್ಲಿ ತೀರಿಕೊಂಡ ಮೇಲೆ, ಅವಳ ತಮ್ಮ ಒಂದೆರಡು ವರ್ಷಗಳ ಹಿಂದೆ ಅವನ ಆಫೀಸಿನಲ್ಲಿಯೇ ಕೆಲಸ ಮಾಡುವ ಹುಡುಗಿಯನ್ನು ಪ್ರೀತಿಸಿ ಮದುವೆಯಾದ, ಮನೆಯಿಂದ ಆಫೀಸಿಗೆ ದೂರವಾಗುತ್ತದೆ. ಆದ್ದರಿಂದ ಆಫೀಸ್‌ ಗೆ ಹತ್ತಿರದಲ್ಲಿ ಮನೆ ಮಾಡಿಕೊಂಡು ಹೋಗುತ್ತೇವೆ ಎಂದು ಹೊರಟುಹೋದ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ