ಗೃಹಶೋಭಾ ಇನ್‌ ಸ್ಪೈರ್‌ ಅವಾರ್ಡ್ಸ್ ಗಾಗಿ ಸನ್ಮಾನಿಸಲಾದ ಮಹಿಳಾ ಸೆಲೆಬ್ಸ್ ಅಂದ್ರೆ ಅವರು ಸಮಾಜಕ್ಕೆ ಒಂದು ಹೊಸ ಮಾರ್ಗ ತೋರಿದ್ದರು, ಮಹಿಳಾ ಹಕ್ಕುಗಳಿಗಾಗಿ ಧ್ವನಿ ಎತ್ತಿದ್ದರು. ತಮ್ಮ ಕಾರ್ಯಕಲಾಪದಿಂದ ವಿಶ್ವ ಪರಿದೃಶ್ಯದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ್ದರು. ಈ ಪುರಸ್ಕಾರ ಎಂಥವರಿಗೆ ದೊರಕಿತೆಂದರೆ, ಅವರುಗಳು ತಮ್ಮ ಎದುರು ಬಂದಂಥ ಎಲ್ಲಾ ಕಷ್ಟಕೋಟಲೆ ನಿವಾರಿಸಿಕೊಂಡು ಒಂದು ಹೊಸದಾರಿ ಕಂಡುಕೊಂಡರು. ಕಳೆದ ಮಾರ್ಚ್‌ 25ರಂದು ದೆಹಲಿಯಲ್ಲಿ ಇದರ ಯಶಸ್ವಿ ಆಯೋಜನೆಯ ನಂತರ, ಬೆಂಗಳೂರಿನಲ್ಲಿ ಇದನ್ನು ಮತ್ತೊಮ್ಮೆ ಆಯೋಜಿಸಲಾಯಿತು.

ಬೆಂಗಳೂರಿನಲ್ಲಿ ಗೃಹಶೋಭಾ ಇನ್‌ ಸ್ಪೈರ್‌ ಅವಾರ್ಡ್‌ 2025ರ ಆಯೋಜನೆಯು, 3ನೇ ನವೆಂಬರ್‌, 2025ರಂದು, ಬೆಂಗಳೂರು ಇಂಟರ್‌ ನ್ಯಾಷನಲ್ ಸೆಂಟರಿನಲ್ಲಿ ಆಯೋಜಿಸಲಾಗಿತ್ತು. ಇದರಲ್ಲಿ ಅಸಾಧಾರಣ ಮಹಿಳೆಯರನ್ನು ಸನ್ಮಾನಿಸಲಾಯಿತು. ಇವರುಗಳು ತಮ್ಮ ಕ್ಷೇತ್ರಗಳಲ್ಲಿ ಮಹತ್ವಪೂರ್ಣ ಪಾತ್ರ ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಜಾನಪದ ಆಡಳಿತ, ಸಾರ್ವಜನಿಕ ನೀತಿ, ಸಾಮಾಜಿಕ ಕಾರ್ಯ, ವಾಣಿಜ್ಯೋದ್ಯಮ, ವಿಜ್ಞಾನ, ಆಟೋಮೋಟಿವ್‌, ಮನರಂಜನೆಯ ಕ್ಷೇತ್ರಗಳಲ್ಲಿ ಪ್ರಭಾವಶಾಲಿ ಸಾಧನೆ ಮಾಡಿದಂಥ ಮಹಿಳೆಯರನ್ನು ಸನ್ಮಾನಿಸಲಾಯಿತು.

04fb8e8d-0ca7-4e32-986b-667478bdc30b

ಪ್ರಸಿದ್ಧ ನಟಿ ಊರ್ವಶಿಯರನ್ನು ಮನರಂಜನೆಯ ಮಾಧ್ಯಮದಿಂದ ಸಶಕ್ತೀಕರಣ ಐಕಾನ್‌ ರೂಪದಲ್ಲಿ ಸನ್ಮಾನಿಸಲಾಯಿತು. ಈಕೆಯ 750ಕ್ಕೂ ಅಧಿಕ ಚಿತ್ರಗಳಲ್ಲಿನ ಜಟಿಲ, ಸಶಕ್ತ ಪಾತ್ರಗಳಿಗಾಗಿ, ಬಹುಮುಖಿ ಪ್ರದರ್ಶನಕ್ಕಾಗಿ ಸನ್ಮಾನಿಸಲಾಯಿತು. ಡಾ. ಕಾಮಿನಿ ರಾವ್ ‌ರನ್ನು ಎಡಿಟರ್ಸ್‌ ಚಾಯ್ಸ್ ಪ್ರಶಸ್ತಿಯಿಂದ ಸನ್ಮಾನಿಸಲಾಯಿತು. ಈಕೆ ಚಿಕಿತ್ಸಾ ಕ್ಷೇತ್ರದಲ್ಲಿ ಅಗ್ರಗಣ್ಯ ನೇತೃತ್ವ ವಹಿಸಿದ್ದರು ಹಾಗೂ ಸ್ತ್ರೀಸ್ವಾಸ್ಥ್ಯ ಸಂವರ್ಧನೆಗಾಗಿ ಕ್ರಿಯಾಶೀಲರಾಗಿದ್ದಾರೆ. ಡಾ. ಸುನೀತಾ ಕೃಷ್ಣನ್‌ ರನ್ನು ಸಾಮಾಜಿಕ ಪ್ರಭಾವ ಐಕಾನ್‌ ರೂಪದಲ್ಲಿ ಸನ್ಮಾನಿಸಲಾಯಿತು. ಈಕೆ ನ್ಯಾಯ, ಪುನರ್ವಾಸ ಹಾಗೂ ಗರಿಮೆಗಾಗಿ ತೀವ್ರವಾಗಿ ಸೆಣಸಿದ್ದರು. ಸಾವಿರಾರು ಹೆಣ್ಣುಮಕ್ಕಳನ್ನು ಹ್ಯೂಮನ್‌ ಟ್ರಾಫಿಕಿಂಗ್‌ ನಿಂದ, ಲೈಂಗಿಕ ಶೋಷಣೆಯಿಂದ ಕಾಪಾಡಿದ್ದಾರೆ.

ನಿಗಾರ್‌ ಶಾಜಿಯರಿಗೆ ಐಕಾನ್‌ ರೂಪದಲ್ಲಿ ಸನ್ಮಾನಿಸಲಾಯಿತು. ಆದಿತ್ಯ ಮಿಶನ್ನಿನ ಪರಿಯೋಜನಾ ನಿರ್ದೇಶಕಿಯ ರೂಪದಲ್ಲಿ ನಿಗಾರ್‌ ಅಂತರಿಕ್ಷ ವಿಜ್ಞಾನದಲ್ಲಿ ಭಾರತದಲ್ಲಿ ಹೆಚ್ಚುತ್ತಿರುವ ನೇತೃತ್ವ ಕ್ಷಮತೆಯ ಉದಾಹರಣೆ ನೀಡಿದ್ದಾರೆ. ಇತರ ಪ್ರತಿಷ್ಠಿತ ಪ್ರಶಸ್ತಿ ವಿಜೇತರಲ್ಲಿ ನಟಿ ಪಾರ್ವತಿ ತಿರುವೋತ್ತು, ತನ್ನ ನಿರ್ಭೀತ ಪಾತ್ರಗಳಿಂದ ಪ್ರಸಿದ್ಧರು. ಮನರಂಜನೆಯ ಮಾಧ್ಯಮದಿಂದ ಸಶಕ್ತೀಕರಣದ ರೂಪದಲ್ಲಿ ಸನ್ಮಾನಿಸಲಾಯಿತು. ಜಮ್ಮಾ ಮ್ಲಾವಿಯರಿಗೆ ಓಗ್ಗುವ ಕಥಾ ಹಾಗೂ ಅನ್ಯಮೂಲ ಕಲಾ ರೂಪಗಳನ್ನು ಸಂರಕ್ಷಿಸಿ, ಬೆಳೆಸಿದ್ದಕ್ಕೆ ಸನ್ಮಾನಿಸಲಾಯಿತು. ಇಡೀ ಜೀವಮಾನ ಇದಕ್ಕಾಗಿ ವಹಿಸಿದ ಇವರಿಗೆ ಜಾನಪದ ಐಕಾನ್‌ ರೂಪದಲ್ಲಿ ಸನ್ಮಾನಿಸಲಾಯಿತು. ಕ್ರೀಡಾ ಕ್ಷೇತ್ರದಲ್ಲಿ ಭಾರತದ ಮೊದಲ ಒಲಿಂಪಿಯನ್‌ ಫೇಸರ್‌ಸಿ.ಎ. ಭವಾನಿ ದೇವಿಗೆ, ಸೀಮಾತೀತ ಹೊಸ ಪೀಳಿಗೆಯನ್ನು ಪ್ರೇರಿತಗೊಳಿಸಿದ್ದಕ್ಕಾಗಿ ಸ್ಪೋರ್ಟ್ಸ್ ಅಚೀವರ್‌ ರೂಪದಲ್ಲಿ ಸನ್ಮಾನಿಸಲಾಯಿತು ಹಾಗೂ ಭಾರತದ ಮೊದಲ ಮೋಟರ್‌ ಸ್ಪೋರ್ಟ್ಸ್ ವಿಶ್ವ ಚಾಂಪಿಯನ್‌ ಐಶ್ವರ್ಯಾ ಪಿಸ್ಸೆಗೆ ಆಟೋಮೋಟೀವ್ ‌ಅಚೀವರ್‌ ರೂಪದಲ್ಲಿ ಸನ್ಮಾನಿಸಲಾಯಿತು.

4dcaddd2-ec8c-4751-a650-ec0e464c3f46

ವಾಣಿಜ್ಯ ವ್ಯವಹಾರದ ಜಗತ್ತಿನಲ್ಲಿ `ಹರಕಿ'ಯ ಸಂಸ್ಥಾಪಕಿ ಹಾಗೂ ಸಿಇಓ ಆದ ನೇಹಾ ಬಗಾರಿಯಾರನ್ನು ಮಹಿಳೆಯರ ಕಾರ್ಯಬಲ ಭಾಗವಹಿಸುವಿಕೆಯ ಪರಿದೃಶ್ಯವನ್ನು ಬದಲಾಯಿಸಿದ ನಿಟ್ಟಿನಲ್ಲಿ, ವಾಣಿಜ್ಯ ವ್ಯವಹಾರದ ಅಚೀವರ್‌ ರೂಪದಲ್ಲಿ ಸನ್ಮಾನಿಸಲಾಯಿತು ಹಾಗೂ ಅಪರ್ಣಾ ತ್ಯಾಗರಾಜನ್‌ ರನ್ನು ಭಾರತದ ಸಮೃದ್ಧ ಹ್ಯಾಂಡ್‌ ಲೂಮ್ ಲೆಗಸಿಯನ್ನು ಒಂದು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ಸಾಧನೆಗಾಗಿ ಎಡಿಟರ್ಸ್‌ ಚಾಯ್ಸ್ ರೂಪದಲ್ಲಿ ಸನ್ಮಾನಿಸಲಾಯಿತು. ಕೀರ್ತಿ ಜಯಕುಮಾರ್‌ರನ್ನು ಒಬ್ಬ ಸಾಮಾಜಿಕ ಪ್ರಭಾವಶಾಲಿ ಅಚೀವರ್‌ ರೂಪದಲ್ಲಿ ಸನ್ಮಾನಿಸಲಾಯಿತು. ದಿನಾಜ್‌ ಹಾಗೂ ದಿವ್ಯಾ ವಿಕ್ರಮರನ್ನು ಡಿಜಿಟಲ್ ಕಂಟೆಂಟ್‌ ಕ್ರಿಯೇಟರ್ಸ್‌ ರೂಪದಲ್ಲಿ ಸನ್ಮಾನಿಸಲಾಯಿತು. ಈ ಸಮಾರಂಭದಲ್ಲಿ ಯಶೋದಾ ಪ್ರಕಾಶ್‌ ಕೋಟ್ಟು ಕಥಿಯಾರನ್ನು ಮನರಂಜನೆಯ ಮಾಧ್ಯಮದ ಸಶಕ್ತೀಕರಣದ ರೂಪದಲ್ಲಿ ಸನ್ಮಾನಿಸಲಾಯಿತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ