“ಮದುವೆಯಾದ ದಿನದಿಂದ ಇಬ್ಬರು ಒಂದಾಗುವುದಿಲ್ಲ…

ಒಬ್ಬರ ನೋವನ್ನು ಮತ್ತೊಬ್ಬರು ಅರ್ಥಮಾಡಿಕೊಳ್ಳಲು ಆರಂಭಿಸಿದ ದಿನದಿಂದ ನಿಜವಾದ ದಾಂಪತ್ಯ ಆರಂಭವಾಗುತ್ತದೆ.”

ದಾಂಪತ್ಯ ಎಂದರೆ ಇತ್ತೀಚಿನ ದಿನಗಳಲ್ಲಿ ಫೇಸ್ ಬುಕ್ ನಲ್ಲಿ ನೋಡುವುವುದು ವಾಟ್ಸಾಪ್ ನಲ್ಲಿ ಪ್ರೀತಿಸುವುದು, ಇನ್ಸ್ಟಾಗ್ರಾಮ್ ನಲ್ಲಿ ವಿಚ್ಚೆದನ ನೀಡುವುದು ಎಂಬಂಗಾಗಿರುವ ಕಾಲದಲ್ಲಿ ನಿಜವಾದ ದಾಂಪತ್ಯ ಎಂದರೇನು? ಅದು ಹೇಗಿರಬೇಕು? ಎಂಬುದರ ಕುರಿತಾದ ವಿಶೇಷವಾದ ಮಾಹಿತಿಗಳು ರಾಷ್ಟ್ರೀಯ ದಂಪತಿಗಳ ದಿನದಂದು ಇದೋ ನಿಮಗಾಗಿ

ಆಗಸ್ಟ್‌ 18ರಂದು ಆಚರಿಸಲಾಗುವ National Couples Day ಪ್ರೇಮ, ದಾಂಪತ್ಯ, ಸ್ನೇಹ, ಪರಸ್ಪರ ಗೌರವ ಮತ್ತು ಜೀವನದ ಏರುಪೇರುಗಳಲ್ಲಿ ಒಬ್ಬರಿಗೊಬ್ಬರು ನೀಡುವ ಬೆಂಬಲವನ್ನು ನೆನಪಿಸಿಕೊಳ್ಳುವ ದಿನವಾಗಿದೆ. ಇದು ಅಮೆರಿಕದಲ್ಲಿ ಪ್ರಚಲಿತಕ್ಕೆ ಬಂದ ಸಂಬಂಧಕೇಂದ್ರಿತ ಆಚರಣೆಯಾಗಿದ್ದು, ಇದರ ನಿಖರ ಸ್ಥಾಪಕ ಅಥವಾ ಅಧಿಕೃತ ಆರಂಭದ ದಾಖಲೆ ಸ್ಪಷ್ಟವಾಗಿಲ್ಲ. ಸುಮಾರು 2010ರ ವೇಳೆಗೆ ಆನ್‌ಲೈನ್‌ನಲ್ಲಿ ಇದರ ಆಚರಣೆ ಪ್ರಸಾರವಾಗತೊಡಗಿತು. ಆದರೆ ಈ ದಿನದ ಭಾವನೆ ಮಾತ್ರ ಯಾವುದೇ ದೇಶಕ್ಕೆ ಸೀಮಿತವಲ್ಲ. ಏಕೆಂದರೆ ಜಗತ್ತಿನ ಎಲ್ಲೆಡೆ ದಾಂಪತ್ಯವೆಂದರೆ ಕೇವಲ ಇಬ್ಬರು ವ್ಯಕ್ತಿಗಳ ಸಂಬಂಧವಲ್ಲ; ಅದು ಎರಡು ಮನಸ್ಸುಗಳು, ಎರಡು ಕುಟುಂಬಗಳು ಮತ್ತು ಎರಡು ಜೀವನಗಳ ಒಟ್ಟುಗೂಡಿದ ಪಯಣ.

🌹 ಪ್ರೀತಿ ಎಂದರೆ ಪ್ರತಿದಿನ ಹೂವು ಕೊಡುವುದಲ್ಲ…

ಮದುವೆಯ ಆರಂಭದ ದಿನಗಳಲ್ಲಿ ಒಬ್ಬರಿಗಾಗಿ ಮತ್ತೊಬ್ಬರು ಸಮಯ ಮೀಸಲಿಡುತ್ತಾರೆ. ಸಣ್ಣ ಉಡುಗೊರೆ, ಪ್ರವಾಸ, ಸಿನಿಮಾ, ರೆಸ್ಟೋರೆಂಟ್—ಎಲ್ಲವೂ ವಿಶೇಷವಾಗಿರುತ್ತದೆ. ಆದರೆ ವರ್ಷಗಳು ಕಳೆದಂತೆ ಜೀವನದ ಆದ್ಯತೆಗಳು ಬದಲಾಗುತ್ತವೆ. ಮಕ್ಕಳ ವಿದ್ಯಾಭ್ಯಾಸ, ಮನೆ ಸಾಲ, ಉದ್ಯೋಗದ ಒತ್ತಡ, ಆರೋಗ್ಯದ ಸಮಸ್ಯೆ, ಹಿರಿಯರ ಜವಾಬ್ದಾರಿ, ಆರ್ಥಿಕ ಸಂಕಷ್ಟ… ಇವೆಲ್ಲದರ ನಡುವೆ ಕೆಲವೊಮ್ಮೆ “ನಾವು ಇಬ್ಬರೂ ಏಕೆ ಮದುವೆಯಾದೆವು?” ಎಂಬ ಪ್ರಶ್ನೆಯೇ ಮರೆತುಹೋಗುತ್ತದೆ. ಅಂತಹ ಸಂದರ್ಭದಲ್ಲಿ ದಂಪತಿಗಳ ದಿನ ನಮಗೆ ಒಂದು ಸಣ್ಣ ನೆನಪು ಮಾಡಿಕೊಡುತ್ತದೆ— “ನೀನು ಮತ್ತು ನಾನು… ಸಮಸ್ಯೆಗಳ ವಿರುದ್ಧ ಒಂದಾಗಿ ನಿಲ್ಲಬೇಕಾದವರು; ಒಬ್ಬರ ವಿರುದ್ಧ ಮತ್ತೊಬ್ಬರು ಅಲ್ಲ.”

💕 ಒಂದು ಹೃದಯಸ್ಪರ್ಶಿ ಕಥೆ

ಒಂದು ಊರಿನಲ್ಲಿ ಸುಮಾರು 40 ವರ್ಷಗಳಿಂದ ದಾಂಪತ್ಯ ಜೀವನ ನಡೆಸುತ್ತಿದ್ದ ಶಂಕರ ಮತ್ತು ಸರೋಜಮ್ಮ ಎಂಬ ದಂಪತಿ ಇದ್ದರು. ಮದುವೆಯಾದಾಗ ಅವರ ಬಳಿ ದೊಡ್ಡ ಆಸ್ತಿ ಇರಲಿಲ್ಲ. ಸಣ್ಣ ಮನೆ, ಕಡಿಮೆ ಆದಾಯ, ಇಬ್ಬರು ಮಕ್ಕಳ ಜವಾಬ್ದಾರಿ. ಶಂಕರ ಪ್ರತಿದಿನ ಬೆಳಗ್ಗೆ ಕೆಲಸಕ್ಕೆ ಹೊರಡುತ್ತಿದ್ದರು. ಸರೋಜಮ್ಮ ಮನೆ, ಮಕ್ಕಳು, ಅತ್ತೆ-ಮಾವಂದಿರ ಜವಾಬ್ದಾರಿ ನೋಡಿಕೊಳ್ಳುತ್ತಿದ್ದರು. ಅವರ ಜೀವನದಲ್ಲೂ ಜಗಳಗಳಿದ್ದವು. ಕೆಲವೊಮ್ಮೆ ಹಣದ ವಿಚಾರಕ್ಕೆ,  ಕೆಲವೊಮ್ಮೆ ಮಕ್ಕಳ ವಿಚಾರಕ್ಕೆ, ಕೆಲವೊಮ್ಮೆ “ನನ್ನ ಮಾತನ್ನು ನೀನು ಕೇಳುವುದಿಲ್ಲ” ಎಂಬ ಕಾರಣಕ್ಕೆ. ಆದರೆ ಒಂದು ವಿಷಯ ಮಾತ್ರ ಬದಲಾಗಲಿಲ್ಲ. ಅವರು ಜಗಳವಾಡಿದರೂ, ಒಬ್ಬರನ್ನೊಬ್ಬರು ಬಿಟ್ಟು ಹೋಗಲಿಲ್ಲ.

ಒಂದು ದಿನ…

ಶಂಕರರಿಗೆ ಹೃದಯ ಸಂಬಂಧಿ ತೊಂದರೆ ಕಾಣಿಸಿಕೊಂಡಿತು. ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು ಕೆಲವು ದಿನಗಳ ಚಿಕಿತ್ಸೆ ಅಗತ್ಯವೆಂದು ಹೇಳಿದರು. ಆ ರಾತ್ರಿ ಆಸ್ಪತ್ರೆಯ ಹಾಸಿಗೆಯ ಪಕ್ಕದಲ್ಲಿ ಕುಳಿತಿದ್ದ ಸರೋಜಮ್ಮನ ಕೈಯನ್ನು ಶಂಕರ ನಿಧಾನವಾಗಿ ಹಿಡಿದರು. “ಸರೋಜಾ…” “ಏನು?” “ನಾನು ನಿನಗೆ ಜೀವನದಲ್ಲಿ ತುಂಬಾ ಕಷ್ಟ ಕೊಟ್ಟಿದ್ದೇನೆ ಅಲ್ಲವೇ?” ಸರೋಜಮ್ಮ ನಕ್ಕರು. “ನೀನು ಮಾತ್ರ ಕೊಟ್ಟೆಯಾ? ನಾನೂ ಕೊಟ್ಟಿದ್ದೇನೆ!” ಇಬ್ಬರೂ ನಕ್ಕರು. ಸ್ವಲ್ಪ ಸಮಯದ ನಂತರ ಶಂಕರ ಹೇಳಿದರು— “ಆದರೆ ನೀನು ನನ್ನ ಜೊತೆ ಇದ್ದೆ.” ಸರೋಜಮ್ಮನ ಕಣ್ಣಲ್ಲಿ ನೀರು ತುಂಬಿತು. “ನೀನು ಕೂಡ ನನ್ನ ಜೊತೆ ಇದ್ದೆ. ಅದಕ್ಕೇ ಇಷ್ಟು ವರ್ಷ ಕಳೆದುಹೋಯಿತು… ನಮಗೆ ಗೊತ್ತಾಗಲಿಲ್ಲ.” ಆ ಕ್ಷಣದಲ್ಲಿ ಶಂಕರ ಅವರ ಕೈಯನ್ನು ಬಿಗಿಯಾಗಿ ಹಿಡಿದು ಹೇಳಿದರು— “ನಾವು ದೊಡ್ಡ ಮನೆ ಕಟ್ಟಲಿಲ್ಲ. ದೊಡ್ಡ ಕಾರು ಖರೀದಿಸಲಿಲ್ಲ. ಆದರೆ ನಾವು ಒಟ್ಟಿಗೆ ಒಂದು ಜೀವನ ಕಟ್ಟಿದ್ದೇವೆ.” ಅಷ್ಟೇ. ಸರೋಜಮ್ಮನ ಕಣ್ಣಿನಿಂದ ಎರಡು ಹನಿ ಕಣ್ಣೀರು ಜಾರಿತು. ಆ ಎರಡು ಹನಿಗಳಲ್ಲಿ ನಲವತ್ತು ವರ್ಷಗಳ ದಾಂಪತ್ಯ ಇತ್ತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ