ಮಾನವ ಜೀವನದ ಮೂರು ಮಹತ್ವದ ಆಯುಷ್ಯ ಮೈಲಿಗಲ್ಲುಗಳ ಹಿಂದಿರುವ ಆಧ್ಯಾತ್ಮಿಕ ಅರ್ಥ

ಈ ವಾರಾಂತ್ಯ ಶನಿವಾರ ಮತ್ತು ಭಾನುವಾರ ನಮ್ಮ ಕುಟುಂಬಸ್ಥರ ಭೀಮರಥಿ ಮತ್ತು ಷಷ್ಠಿಪೂರ್ತಿ ಶಾಂತಿಯಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿದ್ದು, ಈ ಕಾಲದಲ್ಲಿ ಮೂವತ್ತು ನಲವತ್ತು ವರ್ಷಕ್ಕೆಲ್ಲಾ ಬಿಪಿ. ಶುಗರ್ ಎಂದು ನರಳುವವರ ಮಧ್ಯದಲ್ಲಿ 60, 70, 80, 100 ವರ್ಷಗಳಷ್ಟು ಜೀವಿಸುವವರೇ ಅಪರೂಪವಾಗಿರುವಾಗ ನಮ್ಮ ಹಿಂದಿನ ಕಾಲದಲ್ಲಿ ಇವೆಲ್ಲವೂ ಸರ್ವೇ ಸಾಮಾನ್ಯವಾಗಿದ್ದು, ಅವುಗಳೆಲ್ಲವನ್ನೂ ಬಹಳ ಸಡಗರ ಸಂಭ್ರಗಳಿಂದ ಆಚರಿಸಿಕೊಳ್ಳುತ್ತಿದ್ದ ಪರಿಯನ್ನು ಒಮ್ಮೆ ನೋಡೋಣ ಬನ್ನಿ

ಭಾರತೀಯ ಸಂಸ್ಕೃತಿಯಲ್ಲಿ ವಯಸ್ಸು ಎನ್ನುವುದು ಕೇವಲ ವರ್ಷಗಳ ಲೆಕ್ಕವಲ್ಲ. ಪ್ರತಿಯೊಂದು ವಯೋಮಾನದ ಜೊತೆಯೂ ಒಂದು ಜೀವನಾನುಭವ, ಒಂದು ಜವಾಬ್ದಾರಿ, ಒಂದು ಆಧ್ಯಾತ್ಮಿಕ ಹಂತ ಮತ್ತು ಒಂದು ಹೊಸ ಜೀವನದೃಷ್ಟಿ ಬೆಸೆದುಕೊಂಡಿದೆ. ಅದಕ್ಕಾಗಿಯೇ ನಮ್ಮ ಪರಂಪರೆಯಲ್ಲಿ ಮನುಷ್ಯನು ದೀರ್ಘಾಯುಷ್ಯವನ್ನು ಹೊಂದಿ 60, 70 ಮತ್ತು 80ಕ್ಕೂ ಮೀರಿದ ವಯಸ್ಸನ್ನು ತಲುಪಿದಾಗ, ಅದನ್ನು ಕೇವಲ ಹುಟ್ಟುಹಬ್ಬವಾಗಿ ಆಚರಿಸದೆ ‘ಶಾಂತಿ’ ಮತ್ತು ‘ಆಯುಷ್ಯ’ ಕೇಂದ್ರಿತ ಧಾರ್ಮಿಕ ಆಚರಣೆಗಳ ಮೂಲಕ ಗೌರವಿಸುವ ಪದ್ಧತಿ ಬೆಳೆದಿದೆ. ಅವುಗಳಲ್ಲಿ ಪ್ರಮುಖವಾದವು:

  • ಷಷ್ಠಿಪೂರ್ತಿ / ಷಷ್ಟ್ಯಬ್ದಪೂರ್ತಿ ಶಾಂತಿ — 60 ವರ್ಷ
  • ಭೀಮರಥಿ ಶಾಂತಿ — ಸಾಮಾನ್ಯವಾಗಿ 70 ವರ್ಷ; ಕೆಲವು ಸಂಪ್ರದಾಯಗಳಲ್ಲಿ 70ರ ನಂತರದ ನಿರ್ದಿಷ್ಟ ವಯೋಮಾನದ ಲೆಕ್ಕವೂ ಇದೆ
  • ಸಹಸ್ರಚಂದ್ರ ದರ್ಶನ / ಸಹಸ್ರಚಂದ್ರ ಪೂರ್ಣ ಶಾಂತಿ — 1,000 ಹುಣ್ಣಿಮೆಗಳನ್ನು ಕಂಡಿರುವ ಅಪೂರ್ವ ಮೈಲಿಗಲ್ಲು, ಸಾಮಾನ್ಯವಾಗಿ 80–81ರ ವಯಸ್ಸಿನ ಆಸುಪಾಸು

ಪ್ರಾದೇಶಿಕ ಸಂಪ್ರದಾಯ, ಕುಟುಂಬದ ಆಚರಣೆ ಮತ್ತು ಪಂಚಾಂಗದ ಲೆಕ್ಕಾಚಾರದ ಪ್ರಕಾರ ಮುಹೂರ್ತ, ವಯಸ್ಸಿನ ಲೆಕ್ಕ ಮತ್ತು ಆಚರಣೆಯ ವಿವರಗಳಲ್ಲಿ ವ್ಯತ್ಯಾಸಗಳಿರಬಹುದು.  ಇವುಗಳ ಹಿಂದಿರುವ ಸಂದೇಶ ಮಾತ್ರ ಒಂದೇ:

“ದೀರ್ಘಾಯುಷ್ಯ ದೊರೆತಿರುವುದು ಸ್ವತಃ ಒಂದು ವರ; ಆ ಬದುಕಿಗೆ ಕೃತಜ್ಞತೆ ಸಲ್ಲಿಸಿ, ಮುಂದಿನ ಪಯಣವನ್ನು ಶಾಂತಿ, ಆರೋಗ್ಯ ಮತ್ತು ಆಧ್ಯಾತ್ಮಿಕತೆಯಿಂದ ಸಾಗಿಸೋಣ.”

ಹಾಗಾಗಿಯೇ ಈ ಹಿಂದೆ ನಮ್ಮ ಹಿರಿಯರಿಗೆ ನಮಸ್ಕಾರ ಮಾಡಿದಾಗ ಅವರು ಹಾರೈಸುತ್ತಿದ್ದದ್ದೂ ಸಹಾ ನೂರು ವರ್ಷ ಬಾಳು ಎಂಬ ಶತಮಾನಂ ಭವತಿ ಶತಾಯು ಶ್ಲೋಕದಿಂದಲೇ.

ಶತಮಾನಂ ಭವತಿ ಶತಾಯುಃ ಪುರುಷಃ ।
ಶತೇಂದ್ರಿಯ ಆಯುಷ್ಯೇವೇಂದ್ರಿಯೇ ಪ್ರತಿತಿಷ್ಠತಿ ॥

ಪದಗಳ ಅರ್ಥ

  • ಶತಮಾನಂ ಭವತಿ — ನೂರು ವರ್ಷಗಳ ಪೂರ್ಣ ಆಯುಷ್ಯವನ್ನು ಹೊಂದಲಿ.
  • ಶತಾಯುಃ ಪುರುಷಃ — ಮನುಷ್ಯನು ಶತಾಯುಷಿಯಾಗಲಿ.
  • ಶತೇಂದ್ರಿಯಃ — ಅವನ ಇಂದ್ರಿಯಗಳು ದೀರ್ಘಕಾಲ ಆರೋಗ್ಯಕರವಾಗಿ, ಸಮರ್ಥವಾಗಿ ಕಾರ್ಯನಿರ್ವಹಿಸಲಿ.
  • ಆಯುಷಿ ಇಂದ್ರಿಯೇ ಪ್ರತಿತಿಷ್ಠತಿ — ಆಯುಷ್ಯ ಮತ್ತು ಇಂದ್ರಿಯಶಕ್ತಿ ಪರಸ್ಪರ ಸಮನ್ವಯದಿಂದ ಸ್ಥಿರವಾಗಿರಲಿ ಎಂಬ ಆಶಯ.

ಅಂದರೆ ಇದು ಕೇವಲ “100 ವರ್ಷ ಬದುಕು” ಎಂಬ ಹಾರೈಕೆಯಲ್ಲ. ದೀರ್ಘ ಜೀವನದ ಜೊತೆಗೆ ಆರೋಗ್ಯ, ಇಂದ್ರಿಯಗಳ ಸಾಮರ್ಥ್ಯ ಮತ್ತು ಸಾರ್ಥಕ ಬದುಕು ಇರಲಿ ಎಂಬ ಸಮಗ್ರ ಆಶೀರ್ವಾದ.

“ಶತ” ಎಂದರೆ ಕೇವಲ ಸಂಖ್ಯೆ ಅಲ್ಲ

ವೈದಿಕ ಸಾಹಿತ್ಯದಲ್ಲಿ 100 ವರ್ಷ ಎಂಬುದು ಮನುಷ್ಯನ ಆದರ್ಶ ಪೂರ್ಣ ಆಯುಷ್ಯದ ಸಂಕೇತವಾಗಿ ಹಲವು ಕಡೆ ಕಾಣಿಸುತ್ತದೆ. ಋಗ್ವೇದದಲ್ಲಿಯೂ:

ಪಶ್ಯೇಮ ಶರದಃ ಶತಂ
ಜೀವೇಮ ಶರದಃ ಶತಂ
ಶೃಣುಯಾಮ ಶರದಃ ಶತಂ…

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ