- ರಾಘವೇಂದ್ರ ಅಡಿಗ ಎಚ್ಚೆನ್.
ಕಿಚ್ಚ ಸುದೀಪ್ ಹಾಗೂ ಅನುಪ್ ಭಂಡಾರಿ ಅವರ ‘ಬಿಲ್ಲ ರಂಗ ಭಾಷ’ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಸಿನಿಮಾ ಕಾರಣಾಂತರಗಳಿಂದ ವಿಳಂಬ ಆಗುತ್ತಲೇ ಇತ್ತು. ಈಗ ಸೆಟ್ ಹಾಕುವ ಕೆಲಸ ಪೂರ್ಣಗೊಂಡಿದ್ದು, ಇಂದಿನಿಂದ (ಏಪ್ರಿಲ್ 16) ಸಿನಿಮಾದ ಶೂಟಿಂಗ್ ಆರಂಭ ಆಗಿದೆ. ಪೋಸ್ಟರ್ ರಿಲೀಸ್ ಮಾಡುವ ಮೂಲಕ ಸುದೀಪ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಸುದೀಪ್ ಅವರ ಲುಕ್ ಇಲ್ಲಿ ಗಮನ ಸೆಳೆದಿದೆ. ಕಿಚ್ಚ ಸುದೀಪ್ ನಿರ್ದೇಶಕ  ಅನುಪ್ ಭಂಡಾರಿ ಜೊತೆ ಸೇರಿ ‘ಬಿಲ್ಲ ರಂಗ ಬಾಷ’ ಸಿನಿಮಾ ಮಾಡುತ್ತೇನೆ ಎಂದು ಈ ಮೊದಲೇ ಘೋಷಿಸಿದ್ದರು. ಬಜೆಟ್​ನ ಕಾರಣಕ್ಕೆ ‘ವಿಕ್ರಾಂತ್ ರೋಣ’ ಚಿತ್ರವನ್ನು ಮೊದಲು ಕೈಗೆತ್ತಿಕೊಳ್ಳಲಾಯಿತು. ಈಗ ಸುದೀಪ್ ಹಾಗೂ ನಿರ್ದೇಶಕ ಅನುಪ್ ಭಂಡಾರಿ ಅವರು ಚಿತ್ರದ ಶೂಟಿಂಗ್ ಆರಂಭಿಸಿದ್ದಾರೆ.
ಸುದೀಪ್ ಅವರ ಫಸ್ಟ್ ಲುಕ್ ಗಮನ ಸೆಳೆದಿದೆ. ಹಿಮ ಬೀಳುವ ಪ್ರದೇಶದಲ್ಲಿ ಸುದೀಪ್ ನಿಂತಿದ್ದಾರೆ. ಅವರ ಮೈಮೇಲೆ ನೀರಿನ ಹನಿ ಇದೆ. ಅವರು ಕನ್ನಡಕದ ರೀತಿಯ ವಸ್ತುವನ್ನು ಹಣೆಮೇಲೆ ಇಟ್ಟುಕೊಂಡಿದ್ದಾರೆ. ಕನ್ನಡಕದ ಮೇಲಿನ ಪ್ರತಿಬಿಂಬದಲ್ಲಿ ಕಟ್ಟವೊಂದಕ್ಕೆ ಬೆಂಕಿ ಬಿದ್ದಿರುವುದು ಕಂಡಿದೆ. ಸುದೀಪ್ ಹಿಂಭಾಗದಲ್ಲಿ ಕಟ್ಟವೊಂದು ಇದೆ. ಈ ಪೋಸ್ಟರ್​ ಮೂಲಕ ಏನನ್ನು ತಂಡ ಹೇಳಲು ಹೊರಟಿದೆ ಎಂಬ ಕುತೂಹಲ ಮೂಡಿದೆ. ಈ ಮೊದಲು ‘ಬಿಆರ್​ಬಿ’ ಸಿನಿಮಾ ಬಗ್ಗೆ ಅಪ್​ಡೇಟ್ ಕೊಟ್ಟಿದ್ದ ಸುದೀಪ್ ಅವರು, ‘ಇದು ನನ್ನ ವೃತ್ತಿ ಜೀವನದ ಅತಿ ದೊಡ್ಡ ಸಿನಿಮಾ. ಬಜೆಟ್ ಹಾಗೂ ಸಿನಿಮಾ ಮೇಕಿಂಗ್ ಎರಡೂ ವಿಚಾರದಲ್ಲೂ ಇದು ದೊಡ್ಡದೇ’ ಎಂದಿದ್ದರು. ಈ ಮೂಲಕ ಚಿತ್ರದ ಬಜೆಟ್ ಎಷ್ಟಿರಬಹುದು ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.
ಸುದೀಪ್ ಅವರ ‘ಮ್ಯಾಕ್ಸ್’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರ ಗೆದ್ದ ಖುಷಿಯಲ್ಲಿ ಅವರು ‘ಬಿಆರ್​ಬಿ’ ಆರಂಭಿಸಿದ್ದಾರೆ. ಈ ಚಿತ್ರಕ್ಕೆ ಕೆ. ನಿರಂಜನ್ ರೆಡ್ಡಿ ಹಾಗೂ ಚೈತನ್ಯ ರೆಡ್ಡಿ ಬಂಡವಾಳ ಹೂಡುತ್ತಿದ್ದಾರೆ. ಸಿನಿಮಾ ನಿರ್ಮಾಣದ ವಿಚಾರದಲ್ಲಿ ಇವರು ರಾಜಿ ಮಾಡಿಕೊಳ್ಳದಿರಲು ನಿರ್ಧರಿಸಿದ್ದಾರೆ. ಈ ಸಿನಿಮಾ ಕನ್ನಡದ ಜೊತೆಗೆ, ತೆಲುಗು, ಹಿಂದಿ ಮೊದಲಾದ ಭಾಷೆಗಳಲ್ಲೂ ರಿಲೀಸ್ ಆಗುತ್ತಿದೆ.

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ