– ರಾಘವೇಂದ್ರ ಅಡಿಗ ಎಚ್ಚೆನ್.
ಬಿಗ್‌ಬಾಸ್ ಕನ್ನಡ ಸೀಸನ್ 13 ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಕಿಚ್ಚ ಸುದೀಪ್ ನಡೆಸಿಕೊಡುವ ಗ್ರ್ಯಾಂಡ್ ಓಪನಿಂಗ್‌ಗೆ ಭರ್ಜರಿ ಸಿದ್ಧತೆ ನಡೆಯುತ್ತಿದ್ದು, ಈ ಬಾರಿ ವೀಕೆಂಡ್ ಎಪಿಸೋಡ್ ಅನ್ನು ಲೈವ್‌ನಲ್ಲಿ ವೀಕ್ಷಿಸುವ ಅಪರೂಪದ ಅವಕಾಶವನ್ನು ಅಭಿಮಾನಿಗಳಿಗೆ ಕಲರ್ಸ್ ಕನ್ನಡ ನೀಡಿದೆ.
ಈ ಬಾರಿ ಸಾಮಾನ್ಯ ಸ್ಪರ್ಧಿಗಳಿಗೂ ಬಿಗ್‌ಬಾಸ್ ಮನೆಯೊಳಗೆ ಪ್ರವೇಶಿಸುವ ಅವಕಾಶ ಸಿಕ್ಕಿದ್ದು, ಈಗಾಗಲೇ ಸ್ಪರ್ಧಿಗಳ ಅಂತಿಮ ಪಟ್ಟಿಯೂ ಸಿದ್ಧವಾಗಿದೆ ಎನ್ನಲಾಗಿದೆ. ಶೀಘ್ರದಲ್ಲೇ ಸೀಸನ್ 13ರ ಅಧಿಕೃತ ದಿನಾಂಕ ಪ್ರಕಟವಾಗಲಿದ್ದು, ಗ್ರ್ಯಾಂಡ್ ಓಪನಿಂಗ್ ಕಾರ್ಯಕ್ರಮಕ್ಕೆ ವೇದಿಕೆ ಸಜ್ಜಾಗಿದೆ.
ಈ ನಡುವೆ ಬಿಗ್‌ಬಾಸ್ ಅಭಿಮಾನಿಗಳಿಗಾಗಿ ವಿಶೇಷ ‘ಬಿಗ್‌ಬಾಸ್ ಅಗ್ನಿಪರೀಕ್ಷೆ ಎಕ್ಸ್‌ಪೀರಿಯನ್ಸ್ ಝೋನ್’ ಅನ್ನು ಲಾಲ್‌ಬಾಗ್ ಫ್ಲವರ್ ಶೋದಲ್ಲಿ ತೆರೆಯಲಾಗಿದೆ. ಇಲ್ಲಿ ಬಿಗ್‌ಬಾಸ್‌ನ ಐಕಾನಿಕ್ ಚೇರ್, ಸೆಲ್ಫಿ ಸ್ಪಾಟ್ ಸೇರಿದಂತೆ ಹಲವು ವಿಶೇಷ ಆಕರ್ಷಣೆಗಳನ್ನು ಸಿದ್ಧಪಡಿಸಲಾಗಿದೆ.
ಲೈವ್ ವೀಕೆಂಡ್ ಎಪಿಸೋಡ್ ನೋಡಲು ಬಯಸುವವರು ಈ ಎಕ್ಸ್‌ಪೀರಿಯನ್ಸ್ ಝೋನ್‌ನಲ್ಲಿ ಸೆಲ್ಫಿ ಕ್ಲಿಕ್ಕಿಸಿ ಅದನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಬೇಕು. ಪೋಸ್ಟ್‌ನಲ್ಲಿ ಕಲರ್ಸ್ ಕನ್ನಡವನ್ನು ಟ್ಯಾಗ್ ಮಾಡುವುದರ ಜೊತೆಗೆ #BBKAGNIPARIKSHE ಹ್ಯಾಶ್‌ಟ್ಯಾಗ್ ಬಳಸಬೇಕು. ಪೋಸ್ಟ್ ಸಾರ್ವಜನಿಕವಾಗಿ (Public) ಕಾಣುವಂತಿರಬೇಕು.
ಈ ನಿಯಮಗಳನ್ನು ಪಾಲಿಸಿದವರಲ್ಲಿ ಆಯ್ಕೆಯಾದ ಕೆಲ ಅದೃಷ್ಟಶಾಲಿಗಳಿಗೆ ಬಿಗ್‌ಬಾಸ್ ಕನ್ನಡ ವೀಕೆಂಡ್ ಎಪಿಸೋಡ್ ಅನ್ನು ನೇರವಾಗಿ ವೀಕ್ಷಿಸುವ ಅವಕಾಶ ನೀಡಲಾಗುತ್ತದೆ. ಜೊತೆಗೆ ಬಿಗ್‌ಬಾಸ್ ವಿಶೇಷ ಉಡುಗೊರೆಗಳನ್ನು ಗೆಲ್ಲುವ ಅವಕಾಶವೂ ಇರಲಿದೆ.
ಲಾಲ್‌ಬಾಗ್ ಫ್ಲವರ್ ಶೋ ಆಗಸ್ಟ್ 6ರಿಂದ ಆರಂಭವಾಗಿ ಆಗಸ್ಟ್ 17ರವರೆಗೆ ನಡೆಯಲಿದ್ದು, ಈ ಅವಧಿಯಲ್ಲೇ ಬಿಗ್‌ಬಾಸ್ ಎಕ್ಸ್‌ಪೀರಿಯನ್ಸ್ ಝೋನ್ ಸಾರ್ವಜನಿಕರಿಗೆ ಲಭ್ಯವಿರಲಿದೆ.





