- ರಾಘವೇಂದ್ರ ಅಡಿಗ ಎಚ್ಚೆನ್.
ಚಿತ್ರ: ಅಂದೊಂದಿತ್ತು ಕಾಲ
ನಿರ್ದೇಶಕ: ಕೀರ್ತಿ
ನಿರ್ಮಾಣ: ಭುವನ್ ಸುರೇಶ್
ತಾರಾಗಣ: ವಿನಯ್ ರಾಜ್ಕುಮಾರ್, ಅದಿತಿ ಪ್ರಭುದೇವ, ನಿಶಾ ರವಿಕೃಷ್ಣನ್, ಅರುಣಾ ಬಾಲರಾಜ್, ಕಡ್ಡಿಪುಡಿ ಚಂದ್ರು, ಜಗ್ಗಪ್ಪ, ದೊಡ್ಡರಂಗೇಗೌಡ ಮುಂತಾದವರು.
ರೇಟಿಂಗ್: 3/5
ಕನ್ನಡ ಮೀಡಿಯಂ ಕುಮಾರ ಹಳ್ಳಿಯಲ್ಲಿರುವ ಬಡಕುಟುಂಬದ ಹುಡುಗ.ಕುಮಾರನಿಗೆ ಸಿನಿಮಾ ಡೈರೆಕ್ಟರ್ ಆಗಬೇಕು ಎಂಬ ಕನಸು. ಬಾಲ್ಯದಲ್ಲಿ ‘ನಾಗರಹಾವು’ ಸಿನಿಮಾ ನೋಡಿದ ಬಳಿಕ ಆತನಿಗೆ ಈ ಕನಸು ಚಿಗುರುತ್ತದೆ. ಪುಟ್ಟಣ್ಣ ಕಣಗಾಲ್ ಅವರನ್ನು ದೇವರ ರೀತಿ ಆರಾಧಿಸುವ ಕುಮಾರನಿಗೆ ತಾನೂ ಕೂಡ ಅವರಂತೆಯೇ ಒಳ್ಳೆಯ ಸಿನಿಮಾ ಮಾಡಬೇಕು ಎಂಬ ಆಸೆ. ಆದರೆ ದೊಡ್ಡವನಾದ ಬಳಿಕ ಅವಕಾಶ ಅಷ್ಟು ಸುಲಭವಾಗಿ ಸಿಗಲ್ಲ. ಒಂದೆಡೆ ಮನೆಯ ಜವಾಬ್ದಾರಿ, ಇನ್ನೊಂದೆಡೆ ಸಿನಿಮಾ ಕನಸು. ಹೀಗೆ ಎರಡು ದೋಣಿಯ ಮೇಲೆ ಕಾಲಿಟ್ಟು ಸಾಗುವ ಕುಮಾರನ ಜೀವನ ಅಂತಿಮವಾಗಿ ಕುಮಾರ ತನ್ನ ಕನಸು ನನಸು ಮಾಡಿಕೊಂಡನೇ ತಿಳಿಯಲು ನೀವು 'ಅಂದೊಂದಿತ್ತು ಕಾಲ' ಸಿನಿಮಾ ನೋಡಬೇಕು.
ವಿನಯ್ ರಾಜ್ ಕುಮಾರ್, ಅದಿತಿ ಪ್ರಭುದೇವ, ನಿಶಾ ರವಿಕೃಷ್ಙನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಅಂದೊಂದಿತ್ತು ಕಾಲ’ ಇಂದು ತೆರೆಗೆ ಬಂದಿದೆ.ಕೀರ್ತಿ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಭುವನ್ ಸುರೇಶ್ ಅವರು ನಿರ್ಮಾಣ ಮಾಡಿದ್ದಾರೆ. ರಾಘವೇಂದ್ರ ವಿ. ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ರಿಲೀಸ್ಗಿಂತ ಮುನ್ನ ಈ ಸಿನಿಮಾದ ಹಾಡುಗಳು ಸದ್ದು ಮಾಡಿದ್ದವು.
ಕಥೆಗಾರರು, ಸಿನಿಮಾ ರಂಗದಲ್ಲಿ ಹೆಸರು ಮಾಡಬೇಕು ಎಂದು ಪ್ರಯತ್ನಿಸುವವರಿಗೆ ಈ ಚಿತ್ರದ ಕಥೆ ಬೇಗ ಮನಸ್ಸಿಗೆ ತಟ್ಟುತ್ತದೆ.
ವಿನಯ್ ರಾಜ್ ಕುಮಾರ್ ಎರಡು ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ.ಕೆಲವು ದೃಶ್ಯಗಳಲ್ಲಿ ಬಾಲ್ಯದ ನೆನಪುಗಳು ಮರುಕಳಿಸುವಂತೆ ತೋರಾಸಲಾಗಿದ.ಕ್ಲೈಮ್ಯಾಕ್ಸ್ ಎಮೋಷನಲ್ ಆಗಿದ್ದು
ಹಾಡುಗಳು ಕಥೆಗೆ ಪೂರಕವಾಗಿವೆ. ಕಾಮಿಡಿ ದೃಶ್ಯಗಳು ಗಮನ ಸೆಳೆಯುತ್ತದೆ. ಒಟ್ಟೂ ನಿರೂಪಣೆ ಸಾಧಾರಣ ರೀತಿಯಲ್ಲಿದೆ. ನಿಶಾ ರವಿಕೃಷ್ಣನ್ ಮತ್ತು ಅದಿತಿ ಪ್ರಭುದೇವ ಅವರು ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ತಾಯಿ ಪಾತ್ರದಲ್ಲಿ ಅರುಣಾ ಬಾಲರಾಜ್ ಗಮನ ಬೆಳೆಯುತ್ತಾರೆ.