ಒಬ್ಬೊಬ್ಬರದ್ದು ಒಂದೊಂದು ರೀತಿಯ ಟೇಸ್ಟ್ ಇರುತ್ತೆ.. ಒಂದೊಂದು ರೀತಿಯ ಹವ್ಯಾಸ ಇರುತ್ತೆ.. ಒಂದೊಂದು ರೀತಿಯ ಕ್ರೇಜ್ ಇರುತ್ತೆ. ಅದೇ ರೀತಿ ಬಾಡಿಬಿಲ್ಡಿಂಗ್ ಕೂಡ ಒಂದು ರೀತಿಯ ಕ್ರೇಜ್ ಅನ್ನೋದ್ರ ಜೊತೆ ಒಂದು ರೀತಿಯ ಸ್ಪೋರ್ಟ್ಸ್ ಅಂತಾನೂ ಹೇಳಬಹುದು. ಆದ್ರೆ, ಆ ಬಾಡಿಬಿಲ್ಡಿಂಗ್ನಲ್ಲಿ ಬರೀ ಪುರುಷರಷ್ಟೇ ಅಲ್ಲದೇ ಹೆಣ್ಣುಮಕ್ಕಳೂ ಕೂಡ ಫೇಮಸ್ ಆಗ್ತಿರೋದು ಖುಷಿಯ ವಿಚಾರವೇ ಸರಿ. ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಲೇಡಿ ಬಾಡಿಬಿಲ್ಡರ್ ಒಬ್ಬರು ಮದುವೆಯ ಡ್ರೆಸ್ನಲ್ಲಿ ಕಾಣಿಸಿಕೊಂಡು ಭಾರೀ ವೈರಲ್ ಆಗ್ತಿದ್ದಾರೆ.. ಹಾಗಾದ್ರೆ, ಅವರು ಯಾರು ಅನ್ನೋ ಕುತೂಹಲಕ್ಕೆ ಈ ಸ್ಟೋರಿ ಓದಿ.
ಕರ್ನಾಟಕದ ಲೇಡಿ ಬಾಡಿ ಬಿಲ್ಡರ್ ಮದುವೆ ದಿರಿಸಿನಲ್ಲಿ ಫೋಟೋಶೋಟ್ ಇದೀಗ ಎಲ್ಲೆಡೆ ಭಾರಿ ವೈರಲ್ ಆಗಿದ್ದು, ಸೀರೆಯಲ್ಲಿ ಸೌಂದರ್ಯ ಮತ್ತು ಶಕ್ತಿಯ ಅದ್ಭುತ ಮಿಶ್ರಣದ ಮೂಲಕ ಗಮನ ಸೆಳೆದಿದ್ದಾರೆ. ಕರ್ನಾಟಕದ ಲೇಡಿ ಬಾಡಿ ಬಿಲ್ಡರ್ ವಧುವಿನ ವಸ್ತ್ರ ಧರಿಸಿಕೊಂಡಿರುವ ವಿಡಿಯೋ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ವಿಡಿಯೋ ನೋಡಿದ ಹಲವಾರು ಮಂದಿ ವ್ಹಾವ್ ಸೂಪರ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಇದು ನಿಜಕ್ಕೂ ಆತ್ಮವಿಶ್ವಾಸ ತುಂಬುವ ವಿಡಿಯೋ ಎನ್ನುವ ಮೂಲಕ ತಮ್ಮ ಸಂತಸ ಹಂಚಿಕೊಂಡಿದ್ದಾರೆ.
ಕರ್ನಾಟದ ಮೂಲದ ಈ ಲೇಡಿ ಬಾಡಿ ಬಿಲ್ಡರ್ ಮತ್ತು ಫಿಟ್ನೆಸ್ ತರಬೇತುದಾರರಾದ ಚಿತ್ರಾ ಪುರುಷೋತ್ತಮ್. ವುಧುವಿನ ಲುಕ್ನಲ್ಲಿ ತಮ್ಮ ವೀಡಿಯೋ ಹಂಚಿಕೊಂಡು ನೆಟ್ಟಿಗರ ಗಮನ ಸೆಳೆದಿದ್ದಾರೆ. ಈಗ ವೈರಲ್ ಆಗಿರುವ ಕ್ಲಿಪ್ನಲ್ಲಿ, ಚಿತ್ರಾ ಪುರುಷೋತ್ತಮ್ ಆಕರ್ಷಕ ಹಳದಿ ಮತ್ತು ನೀಲಿ ಕಾಂಜೀವರಂ ಸೀರೆ ಧರಿಸಿ ಫಿಟ್ನೆಸ್ ಮತ್ತು ಸಂಪ್ರದಾಯದ ಸಮ್ಮಿಲನವನ್ನು ಸೊಗಸಾಗಿ ಬೆಸೆದಿದ್ದಾರೆ.
ತಮ್ಮ ದೇಹವನ್ನು ಪೂರ್ಣ ಪ್ರದರ್ಶನ ನೀಡಿದ್ದು, ವಧುವಿನ ನೋಟವನ್ನು ಪೂರ್ಣಗೊಳಿಸಿದ್ದಾರೆ. ಕಮರ್ಬಂದ್, ಮಾಂಗ್ ಟಿಕ್ಕಾ, ಕಿವಿಯೋಲೆಗಳು ಮತ್ತು ಬಳೆಗಳು ಸೇರಿದಂತೆ ಚಿನ್ನದ ಆಭರಣಗಳಿಂದ ಅಲಂಕರಿಸಿಕೊಳ್ಳುವ ಮೂಲಕ ಅವರು ಗಮನ ಸೆಳೆದಿದ್ದಾರೆ. ಐಲೈನರ್ ಮತ್ತು ಕೆಂಪು ಲಿಪ್ಸ್ಟಿಕ್ ಕೂಡಾ ಗಮನ ಸೆಳೆಯುವಂತಿದೆ. ತಮ್ಮ ಮುಡಿಗೆ ಮಲ್ಲಿಗೆ ಹೂ ಮುಡಿದು ಕಂಗೊಳಿಸುತ್ತಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಹಾಗೂ ಫೋಟೋಗಳನ್ನು ಶೇರ್ ಮಾಡಿರುವ ಅವರು, “ಮನಸ್ಥಿತಿಯೇ ಎಲ್ಲವೂ” ಎಂದು ಅದಕ್ಕೆ ಶೀರ್ಷಿಕೆಯನ್ನು ನೀಡಿದ್ದಾರೆ. ಈ ಪೋಸ್ಟ್ 8 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದ್ದು, ಅಪಾರ ಗಮನ ಸೆಳೆಯುವ ಜೊತೆಗೆ ಮೆಚ್ಚುಗೆಯೂ ವ್ಯಕ್ತವಾಗಿದೆ.