ವಿಭಾ*
ರಥಾವರ ಸಾರಥಿ ಚಂದ್ರಶೇಖರ್ ಬಂಡಿಯಪ್ಪ ʼಚೌಕಿದಾರ್ʼ ಸಿನಿಮಾ ಮೂಲಕ ಮತ್ತೊಮ್ಮೆ ಬೆಳ್ಳಿಪರದೆಯಲ್ಲಿ ಚಮತ್ಕಾರ ಮಾಡಲು ಹೊರಟಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಟೀಸರ್ ಹಾಗೂ ಹಾಡುಗಳಿಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಇದೀಗ ಚಿತ್ರತಂಡ, ರೀ-ರೆಕಾರ್ಡಿಂಗ್‌ನಲ್ಲಿ ಬ್ಯುಸಿಯಾಗಿದೆ. ಚೌಕಿದಾರ್ ಸಿನಿಮಾದ ರೀ ರೆಕಾರ್ಡಿಂಗ್‌ಗೆ ಎಸ್.ಚಿನ್ನಾ ಎಂಟ್ರಿ ಕೊಟ್ಟಿದ್ದಾರೆ.
ತೆಲುಗು ಖ್ಯಾತ ರೀ ರೆಕಾರ್ಡಿಂಗ್ ಸ್ಪೆಷಾಲಿಸ್ಟ್ ಆಗಿರುವ ಎಸ್ ಚಿನ್ನಾ, ಪ್ರಭಾಸ್ ನಟನೆಯ ರೆಬಲ್ ಸಿನಿಮಾ, ನಾಗಾರ್ಜುನ್ ನಟನೆಯ ಡಾನ್, ರವಿತೇಜಾ ಬೆಂಗಾಲ್ ಟೈಗರ್, ಬಾಲಯ್ಯ ನಟನೆಯ ಸಿಂಹ ಚಿತ್ರಗಳಿಗೆ ರೀ ರೆಕಾರ್ಡಿಂಗ್ ಮಾಡಿದ್ದಾರೆ. ನಿಖಿಲ್ ಕುಮಾರಸ್ವಾಮಿ ಚೊಚ್ಚಲ ಚಿತ್ರ ಜಾಗ್ವರ್ ಸಿನಿಮಾಗೂ ಇವ್ರೇ ರೀ-ರೆಕಾರ್ಡಿಂಗ್ ಮಾಡಿದ್ದರು. ಇದೀಗ ಬಹಳ ವರ್ಷಗಳ ನಂತರ ಚಿನ್ನಾ ಚೌಕಿದಾರ್‌ಗಾಗಿ ಕನ್ನಡ ಇಂಡಸ್ಟ್ರೀಯತ್ತ ಮುಖ ಮಾಡಿದ್ದಾರೆ.
ಚೌಕಿದಾರ್ ಸಿನಿಮಾದಲ್ಲಿ ಸ್ಟಾರ್ ಕಾಸ್ಟ್ ತುಂಬಾನೇ ಚೆನ್ನಾಗಿದೆ. ದೊಡ್ಮನೆಯ ಮೊಮ್ಮಗಳು ಧನ್ಯಾ ರಾಮ್‌ಕುಮಾರ್ ಈ ಚಿತ್ರದಲ್ಲಿ ನಾಯಕಿ ಆಗಿದ್ದಾರೆ. ದಿಯಾ ಚಿತ್ರ ಖ್ಯಾತಿಯ ನಟ ಪೃಥ್ವಿ ಅಂಬಾರ್ ಇಲ್ಲಿ ವಿಭಿನ್ನವಾಗಿಯೇ ಕಾಣಿಸುತ್ತಿದ್ದಾರೆ. ರಗಡ್ ರೋಲ್ ಮೂಲಕವೇ ಎಲ್ಲರ ಗಮನ ಸೆಳೆಯಲಿದ್ದಾರೆ. ಚೈತ್ರದಪ್ರೇಮಾಂಜಲಿ ಚಿತ್ರದ ನಾಯಕಿ ಶ್ವೇತಾ, ಡೈಲಾಗ್ ಕಿಂಗ್ ಸಾಯಿಕುಮಾರ್ ಕೂಡ ಈ ಸಿನಿಮಾದಲ್ಲಿದ್ದಾರೆ. ಸುಧಾರಾಣಿ ಈ ಚಿತ್ರದಲ್ಲಿ ಪೊಲೀಸ್ ಆಫೀಸರ್ ಪಾತ್ರ ಮಾಡಿದ್ದಾರೆ.

ಸಚಿನ್ ಬಸ್ರೂರ್ ಅವರ ಸಂಗೀತ ಟೀಸರ್‌ನಲ್ಲಿ ಗಮನಸೆಳೆಯುತ್ತಿರುವ ಪ್ರಮುಖ ಅಂಶಗಳಲ್ಲಿ ಒಂದು. ಕಲ್ಲಹಳ್ಳಿ ಚಂದ್ರಶೇಖರ್ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ವಿದ್ಯಾದೇವಿ ಸಹ ನಿರ್ಮಾಣ ಮಾಡಿದ್ದಾರೆ. ವಿ.ನಾಗೇಂದ್ರ ಪ್ರಸಾದ್, ಪ್ರಮೋದ್ ಮರವಂತೆ, ಸಂತೋಷ್ ನಾಯಕ್ ಅವರುಗಳು ಸಿನಿಮಾದ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಸಿದ್ದು ಕಂಚನಹಳ್ಳಿ ಛಾಯಾಗ್ರಹಣ, ಕಿರಣ್ ನಾಯಕ್ ಮೇಕಪ್ ಚಿತ್ರಕ್ಕಿದೆ. ‘ಚೌಕಿದಾರ್’ ಸಿನಿಮಾ ಬಹುಭಾಷೆಯಲ್ಲಿ ಮೂಡಿ ಬರುತ್ತಿದೆ.