- ರಾಘವೇಂದ್ರ ಅಡಿಗ ಎಚ್ಚೆನ್.

‘ದುನಿಯಾ’ ವಿಜಯ್‍ ನಿರ್ದೇಶನದ ಮತ್ತು ವಿನಯ್‍ ರಾಜಕುಮಾರ್ ಮತ್ತು ಮೋನಿಷಾ ವಿಜಯ್‍ ನಾಯಕ-ನಾಯಕಿಯಾಗಿ ನಟಿಸಿರುವ ‘ಸಿಟಿ ಲೈಟ್ಸ್’ ಚಿತ್ರದ ಬಿಡುಗಡೆ ದಿನಾಂಕ ಫಿಕ್ಸ್ ಹಾಕಿದೆ. ಕೆ.ವಿ.ಎನ್‍ ಪ್ರೊಡಕ್ಷನ್ಸ್ ಸಂಸ್ಥೆಯು ಈ ಚಿತ್ರವನ್ನು ರಾಜ್ಯಾದ್ಯಂತ ಸೆಪ್ಟೆಂಬರ್ 18ರಂದು ಬಿಡುಗಡೆ ಮಾಡುತ್ತಿದೆ.
‘ಸಿಟಿ ಲೈಟ್ಸ್’ ಚಿತ್ರಕ್ಕೆ ವಿಜಯ್‍ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ ನಿರ್ಮಾಣದಲ್ಲೂ ತೊಡಗಿಸಿಕೊಂಡಿದ್ದಾರೆ. ನಿರ್ಮಾಣದಲ್ಲಿ ವಿಕ್ರಮ್‍ ಆರ್ಯ ಕೈಜೋಡಿಸಿದ್ದಾರೆ. ಚಿತ್ರಕ್ಕೆ ಹರ್ಷ ಗೌಡ ಛಾಯಾಗ್ರಹಣ, ಚರಣ್‍ರಾಜ್‍ ಸಂಗೀತ ಮತ್ತು ಮಾಸ್ತಿ ಉಪ್ಪಾರಳ್ಳಿ ಸಂಭಾಷಣೆ ಇದೆ.

1001693975

ಈಗಾಗಲೇ ಚಿತ್ರದ ಭಾವ ಭಾವ, ಕಂದಮ್ಮ ಕಂದಮ್ಮ ಹಾಡು ಅನಾವರಣಗೊಂಡಿದೆ. ಮುಂದಿನ ದಿನಗಳಲ್ಲಿ ಟ್ರೇಲರ್​ ಬಿಡುಗಡೆಯಾಗಲಿದೆ. ಬಹುನಿರೀಕ್ಷಿತ ಚಿತ್ರದಲ್ಲಿ 5-6 ಹಾಡುಗಳಿದ್ದು, ಸದ್ಯ ಅನಾವರಣಗೊಂಡಿರುವ ಸಾಂಗ್ಸ್​ ಉತ್ತಮ ಪ್ರತಿಕ್ರಿಯೆ ಸ್ವೀಕರಿಸಿದೆ. ಸಿಟಿ ಲೈಟ್ಸ್ ಸಂಪೂರ್ಣ ಹೆಣ್ಣು ಮಕ್ಕಳ ಬಗೆಗಿನ ಕಥೆ. ಬೆಂಗಳೂರಿನಲ್ಲಿ ಹುಡುಗಿಯರು ಜೀವನ ಸಾಗಿಸೋದಕ್ಕೆ ಏನೆಲ್ಲಾ ಕೆಲಸಗಳನ್ನು ಮಾಡುತ್ತಾರೆ ಎಂಬುದುರ ಬಗ್ಗೆ ಹೇಳೋದಕ್ಕೆ ಹೊರಟಿದ್ದೇನೆಂದು ಈ ಹಿಂದೆ ಸ್ವತಃ ದುನಿಯಾ ವಿಜಯ್​ ಹೇಳಿಕೊಂಡಿದ್ದರು.
ಚಿತ್ರದಲ್ಲಿ ಹಿರಿಯ ನಟಿ ಉಮಾಶ್ರೀ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಚರಣ್ ರಾಜ್ ಸಂಗೀತವಿದೆ. ವಿನಯ್ ರಾಜ್​​ಕುಮಾರ್ ಪಕ್ಕಾ ಮಾಸ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾ ಸುತ್ತಲಿನ ಕುತೂಹಲ ದೊಡ್ಡ ಮಟ್ಟದಲ್ಲಿದ್ದು, ಸೆಪ್ಟೆಂಬರ್ 18ರಂದು ರಾಜ್ಯಾದ್ಯಂತ ತೆರೆಕಾಣಲಿದೆ. ಪ್ರೇಕ್ಷಕರು ಏನಂತಾರೆ ಎಂಬುದನ್ನು ಕಾದು ನೋಡಬೇಕಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ