- ರಾಘವೇಂದ್ರ ಅಡಿಗ ಎಚ್ಚೆನ್.

ದಶಕಗಳಿಂದ ದೈನಿಕ ಧಾರಾವಾಹಿಗಳ ಮೂಲಕ ಹೆಣ್ಣಿನ ಬದುಕಿನ ವಿವಿಧ ಆಯಾಮಗಳನ್ನು ಕಟ್ಟಿಕೊಡುತ್ತಿರುವ ಹೆಮ್ಮೆಯ ‘ಕಲರ್ಸ್ ಕನ್ನಡ’ ವಾಹಿನಿ, ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ನಾಡಿನ ಸಾಮಾನ್ಯ ಮಹಿಳೆಯರ ಅಸಾಮಾನ್ಯ ಬದುಕನ್ನು ಸಂಭ್ರಮಿಸಲು ಸಜ್ಜಾಗಿದೆ. ತನ್ನ ವಿನೂತನ ಅಭಿಯಾನ ‘ಕಲರ್ಸ್ ಕನ್ನಡತಿ’ ಮೂಲಕ ವಾಹಿನಿಯು ಈಗ ಜನರ ಮನೆಬಾಗಿಲಿಗೆ ಬರುತ್ತಿದೆ.
ಮನೆಮಗಳ ಸಾಧನೆಗೆ ವೇದಿಕೆಯಾಗಲಿದೆ ಕಲರ್ಸ್ ಕನ್ನಡದ 'ಕಲರ್ಸ್ ಕನ್ನಡತಿ' ಸಂಭ್ರಮದ ಸಾರೋಟು
ಒಬ್ಬ ಮಹಿಳೆ ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ತನ್ನ ಕುಟುಂಬಕ್ಕಾಗಿ ಮಾಡುವ ಕೆಲಸಗಳು ಯಾವುದೇ ಪ್ರಶಸ್ತಿ-ಪುರಸ್ಕಾರಕ್ಕೆ ಒಳಪಡುವುದಿಲ್ಲ. ಅಡುಗೆ ಮನೆಯಿಂದ ಮಕ್ಕಳ ಶಿಕ್ಷಣದವರೆಗೆ ಅವಳು ನಿಭಾಯಿಸುವ 'ಮಲ್ಟಿ-ಟಾಸ್ಕಿಂಗ್' ಬದುಕೇ ಒಂದು ದೊಡ್ಡ ಸಾಧನೆ. ಕಲರ್ಸ್ ಕನ್ನಡ ಈ 'ಅಸಾಮಾನ್ಯ' ಸಾಧನೆಯನ್ನು ಗುರುತಿಸಿ, ಅವಳಿಗೆ "ಕಲರ್ಸ್ ಕನ್ನಡತಿ" ಎಂದು ಗೌರವಿಸಲಿದೆ. ಇಷ್ಟು ದಿನ ಕಲರ್ಸ್ ಕನ್ನಡ ವಾಹಿನಿಯು ತನ್ನ ಪರದೆಯ ಮೇಲಿನ ಹೆಣ್ಮಕ್ಕಳ ಕಥೆಯನ್ನು ಹೇಳುತ್ತಾ ಬಂದಿತ್ತು. ಆದರೆ ಈ ಬಾರಿ ಉದ್ದೇಶ ವಿಭಿನ್ನವಾಗಿದೆ. ಇದು ಕೇವಲ ಟಿವಿಯ ಪಾತ್ರಗಳ ಬಗ್ಗೆ ಮಾತನಾಡುವ ಸಮಯವಲ್ಲ; ಬದಲಿಗೆ ಕರುನಾಡಿನ ಪ್ರತಿ ಮನೆಯಲ್ಲೂ ಇರುವ, ಸದ್ದಿಲ್ಲದೆ ಜವಾಬ್ದಾರಿಗಳನ್ನು ಹೊತ್ತು ಮುನ್ನಡೆಯುತ್ತಿರುವ ಮಹಿಳೆಯರಿಗಾಗಿ ಮೀಸಲಾದ ವೇದಿಕೆ.

CK1Artboard 1@3x

ಪರದೆಯ ಪಾತ್ರಗಳೇ ಸ್ಫೂರ್ತಿ
ನಮ್ಮ ಕಣ್ಣಮುಂದೆ ‘ಭಾಗ್ಯಲಕ್ಷ್ಮೀ’ ಧಾರಾವಾಹಿಯ ಪಾರದರ್ಶಕ ಮನಸ್ಸಿನ ಗಟ್ಟಿಗಿತ್ತಿ ಭಾಗ್ಯ, ‘ಮುದ್ದು ಸೊಸೆ’ಯ ಧೈರ್ಯವಂತ ವಿದ್ಯಾ, ‘ಭಾರ್ಗವಿ ಎಲ್‌ಎಲ್‌ಬಿ’ಧಾರಾವಾಹಿಯ ನ್ಯಾಯನಿಷ್ಠೆಯ ಭಾರ್ಗವಿ ಕೇವಲ ಉದಾಹರಣೆಗಳು ಮಾತ್ರ. ಇವರು ಮಾಡಿದ್ದು ಜಗತ್ತಿನ ದೃಷ್ಟಿಯಲ್ಲಿ ಅತಿ ದೊಡ್ಡ ಸಾಧನೆಯಲ್ಲದಿರಬಹುದು, ಆದರೆ ಆ ಸಾಧನೆ ಅವರು ಪ್ರತಿನಿಧಿಸುವ ಕುಟುಂಬಕ್ಕೆ ಮತ್ತು ಅವರ ಬದುಕಿಗೆ ಅತ್ಯಂತ ದೊಡ್ಡದು. ಧಾರಾವಾಹಿಯ ಪಾತ್ರಗಳು ಕೇವಲ ಕಾಲ್ಪನಿಕವಲ್ಲ, ಅವು ನಮ್ಮ ಮನೆಯ ಹೆಣ್ಣುಮಕ್ಕಳ ಪ್ರತಿಬಿಂಬ. ತೆರೆಯ ಮೇಲಿನ ಪಾತ್ರಗಳಿಗೆ ಸ್ಫೂರ್ತಿ ನೀಡುವ ನಿಜ ಜೀವನದ ಪಾತ್ರಗಳನ್ನು ಹುಡುಕುವ ಪ್ರಯತ್ನವಿದು. ಇಂತಹ ಕೋಟಿ ಕೋಟಿ ಮಹಿಳೆಯರು ನಮ್ಮ ನಡುವೇ ಇದ್ದಾರೆ. ಅವರ ಸಣ್ಣ ಸಣ್ಣ ಸಾಧನೆಗಳಿಗೆ, ಅವರು ನಿಭಾಯಿಸಿದ ಕಠಿಣ ಜವಾಬ್ದಾರಿಗಳಿಗೆ ಬೆಳಕಾಗಲು ಮತ್ತು ಅವರ ಧ್ವನಿಗೆ ‘ವೇದಿಕೆ’ ಆಗಲು ಕಲರ್ಸ್ ಕನ್ನಡ ಈ ಪರಿಕಲ್ಪನೆಯನ್ನು ಹೊತ್ತು ತಂದಿದೆ.
ಸಾಮಾನ್ಯರಲ್ಲಿ ಸಾಮಾನ್ಯ ಮಹಿಳೆಯರಿಗಾಗಿ ಬೃಹತ್ ವೇದಿಕೆ
‘ನಿಮ್ಮೂರಿನ ನಿಜ ಜೀವನದ ಕಲರ್ಸ್ ಕನ್ನಡತಿ ಯಾರು?’ ಎಂಬ ಪ್ರಶ್ನೆಯೊಂದಿಗೆ ಆರಂಭವಾಗಿರುವ ಈ ಅಭಿಯಾನವು, ಟಿವಿ ಪರದೆಗೆ ಮಾತ್ರ ಸೀಮಿತವಾಗದೆ ಒಂದು ಬೃಹತ್ ಸಾಮಾಜಿಕ ವೇದಿಕೆಯಾಗಿ ಮಾರ್ಪಟ್ಟಿದೆ. ಇಲ್ಲಿ ಪ್ರತಿಯೊಬ್ಬ ಮಹಿಳೆಯೂ ತನ್ನ ಕಷ್ಟದ ಹಾದಿ, ತಾನು ಪಟ್ಟ ಪಾಡು, ಕುಟುಂಬಕ್ಕಾಗಿ ಮಾಡಿದ ತ್ಯಾಗ, ಅನುಭವಿಸಿದ ಅವಮಾನ ಹಾಗೂ ಆ ಎಲ್ಲವನ್ನೂ ಮೀರಿ ನಿಂತ ತನ್ನ ಬದುಕಿನ ಅನುಭವಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು.
ಈ ಸಂಭ್ರಮದ ಸಾರೋಟು ರಾಜ್ಯಾದ್ಯಂತ ಸಂಚರಿಸಲಿದೆ. ಅದರ ಮೊದಲ ಹೆಜ್ಜೆಯಾಗಿ ಬೆಂಗಳೂರಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಅಭಿಯಾನದ ಭಾಗವಾಗಿ ಬೆಂಗಳೂರಿನ ಸುಂಕದಕಟ್ಟೆಯಲ್ಲಿ ಫೆಬ್ರವರಿ 7 ಅಂದರೆ ಶನಿವಾರ ಸಂಜೆ 5 ಗಂಟೆಗೆ ಚಾಲನೆ ಸಿಗಲಿದೆ. ಸುಂಕದಕಟ್ಟೆಯಲ್ಲಿನ ಅಂಜನಾ ನಗರದ ಹೇರೋಹಳ್ಳಿ ಕೆಂಪೇಗೌಡ ಮೈದಾನ, ಬಿಂದು ಅಮೂಲ್ಯ ಬಿಡಿಎ ಅಪಾರ್ಟ್‌ಮೆಂಟ್ ಹತ್ತಿರ ಈ ಕಾರ್ಯಕ್ರಮ ನಡೆಯಲಿದೆ.
*ಕಾರ್ಯಕ್ರಮದ ವಿಶೇಷತೆಗಳು*
ಮಹಿಳೆಯರಿಗಾಗಿ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಸಾಧನೆಯ ಕಥೆಗಳನ್ನು ಹಂಚಿಕೊಳ್ಳುವುದರ ಜೊತೆಗೆ, ಕಲರ್ಸ್ ಕನ್ನಡ ರಸಪ್ರಶ್ನೆ,  ವೈವಿಧ್ಯಮಯ ಮನರಂಜನಾ ಚಟುವಟಿಕೆಗಳಿರಲಿವೆ. ತಮ್ಮ ಸುತ್ತಮುತ್ತಲಿರುವ ಅಥವಾ ತಮ್ಮದೇ ಮನೆಯಲ್ಲಿರುವ ‘ನಿಜ ಜೀವನದ ಕಲರ್ಸ್ ಕನ್ನಡತಿ’ಯನ್ನು ಈ ವೇದಿಕೆಗೆ ಕರೆತಂದು, ಅವರ ಸಾಧನೆಯನ್ನು ನಾಡಿಗೆ ಪರಿಚಯಿಸಬೇಕೆಂಬುದು ಕಲರ್ಸ್‌ ಕನ್ನಡದ ಮುಖ್ಯ ಉದ್ದೇಶ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ