- ರಾಘವೇಂದ್ರ ಅಡಿಗ ಎಚ್ಚೆನ್.

ಚಂದನವನದಲ್ಲಿ ಮತ್ತೆ ಶುಕ್ರ ದೆಸೆ ಆರಂಭವಾದಂತಾಗಿದೆ. ಖ್ಯಾತ ಉದ್ಯಮಿ ವಿಜಯ್ ಟಾಟಾ ಕನ್ನಡ ಸಿನಿಮಾ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯನ್ನೇ ಮಾಡಲು ಮುಂದಾಗಿದ್ದಾರೆ. ಬಹಳ ಅಚ್ಚುಕಟ್ಟಾಗಿ ಶರ್ಟನ್ ಹೋಟೆಲ್​ನಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ರಾಜ್ಯದ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಹಾಗೂ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಆಗಮಿಸಿ, ಚಿತ್ರೋದ್ಯಮಕ್ಕೆ ಅನುಕೂಲ ವಾಗುವಂತಹ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಆರು ಚಿತ್ರ ನಿರ್ಮಾಣ ಮಾಡುತ್ತಿರುವ ಇವರು ನಿರಂತರವಾಗಿ ಸಿನಿಮಾಗಳನ್ನ ಮಾಡಲಿ, ಚಿತ್ರೋದ್ಯಮಕ್ಕೆ ಸಹಕಾರಿಯಾಗಿ ನಿಲ್ಲಲಿ ಎಂದು ಶುಭ ಕೋರಿದರು.

IMG-20250711-WA0042

ಇನ್ನು ಈ ಒಂದು ಕಾರ್ಯಕ್ರಮಕ್ಕೆ ಸ್ಯಾಂಡಲ್​ವುಡ್​ನ ಕ್ರೇಜಿಸ್ಟಾರ್ ವಿ. ರವಿಚಂದ್ರನ್, ರೋರಿಂಗ್ ಸ್ಟಾರ್ ಶ್ರೀಮುರಳಿ, ನಾದಬ್ರಹ್ಮ ಹಂಸಲೇಖ ಮುಖ್ಯ ಅತಿಥಿಗಳಾಗಿ ಆಗಮಿಸಿ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಇದೇ ಸಂದರ್ಭದಲ್ಲಿ ಚಂದನವನದ ತಾರೆಯರಾದ ಕೃಷ್ಣ ಅಜಯ್ ರಾವ್, ಶರಣ್, ರಾಗಿಣಿ ದಿವೇದಿ, ಸಾಧು ಕೋಕಿಲಾ, ನಿರೂಪ ಭಂಡಾರಿ, ರಾಜವರ್ಧನ್ ಧೀರನ್ ರಾಮ್ ಕುಮಾರ್, ಶಶಾಂಕ್, ಆ ದಿನಗಳು ಚೇತನ್, ADGP ಡಿ .ರೂಪ, ಸೇರಿದಂತೆ ಹಿರಿಯ ಅಧಿಕಾರಿಗಳು, ಗಣ್ಯರು, ಸ್ನೇಹಿತರು ಉಪಸ್ಥಿರಿದ್ದರು.

IMG-20250711-WA0043

ಖ್ಯಾತ ಉದ್ಯಮಿ ವಿಜಯ್ ಟಾಟಾ ಅವರ ಪತ್ನಿ ಅಮೃತ ಟಾಟಾ 2025ರ Mien ಮಿಸಸ್ ಇಂಡಿಯಾ ಪ್ರಶಸ್ತಿಯ ಕಿರೀಟವನ್ನು ಪುಣೆ hyatt ನಲ್ಲಿ ಪಡೆದುಕೊಂಡರು. ಪಂಜಾಬ್ ಮೂಲದ ಅಮೃತ ರವರಿಗೆ ಕರ್ನಾಟಕ ಬಹಳಷ್ಟು ಕೊಟ್ಟಿದೆಯಂತೆ. ಇಲ್ಲಿನ ಭಾಷೆ ಹಾಗೂ ಜನರ ಮೇಲೆ ಅಪಾರ ಪ್ರೀತಿ, ಗೌರವವಿದ್ದು, ಮೀಡಿಯಾ ಹಾಗೂ ಸಿನಿಮಾ ಕ್ಷೇತ್ರದಲ್ಲೂ ದೊಡ್ಡ ಸಾಧನೆ ಮಾಡಲು ಸಿದ್ಧರಾಗಿದ್ದಾರೆ. ಹಾಗೆ ತಮಗೆ ಸಿಕ್ಕ ಈ ಕ್ರೌನ್ ಅನ್ನ ಕ್ರೇಜಿಸ್ಟಾರ್ ರವಿಚಂದ್ರನ್ ಕೈಯಲ್ಲೇ ಮತ್ತೊಮ್ಮೆ ತಮ್ಮ ಮುಡಿಗೆ ಹಾಕಿಸಿಕೊಳ್ಳಬೇಕೆಂಬ ಆಸೆ ನೆರವೇರಿಸಿಕೊಂಡರು ಜೊತೆಗೆ ರಾಂಪ್ ವಾಕ್ ಕೂಡ ಮಾಡಿದರು. ವಿಶೇಷ ಎಂದರೆ ಮಿಸ್ ಇಂಡಿಯಾ ಆಗಿದ್ದ ಸುಂದರಿ ಜೂಲಿ ಚಾವ್ಲಾ ರನ್ನ ಪ್ರೇಮಲೋಕ ಚಿತ್ರಕ್ಕೆ ಕರೆತಂದಿದ್ದು ಕ್ರೇಜಿಸ್ಟಾರ್, ಹಾಗೆಯೇ ಮಿಸ್ ವರ್ಲ್ಡ್ ಆಗಿದ್ದ ಐಶ್ವರ್ಯ ರೈಗೂ ಬೆಂಗಳೂರಿನಲ್ಲಿ ಮತ್ತೊಮ್ಮೆ ಕ್ರೌನ್ ಧರಿಸಿದ್ದು ಕೂಡ ಕನಸುಗಾರ ರವಿಚಂದ್ರನ್. ಆರಂಭದಲ್ಲಿ ಯಶಸ್ಸಿನ ಕಿರೀಟವನ್ನು ಹೊತ್ತುಕೊಂಡು ಬಂದಂತಹ ಅಮೃತ ಟಾಟಾ ರವರ ಸಾಧನೆ, ಆಲೋಚನೆ ಬಗ್ಗೆ ಬಂದಂತಹ ಗಣ್ಯರಿಂದ ಮೆಚ್ಚುಗೆಯ ಜೊತೆ ಶುಭಾಶಯಗಳು ವ್ಯಕ್ತವಾಗಿತ್ತು. ಇದೇ ಸಂದರ್ಭದಲ್ಲಿ ಅಮೃತ ಟಾಟಾ ರವರ ಸುಪುತ್ರಿ ಫುಟ್ಬಾಲ್ ಆಟಗಾತಿ ಸಾಂಚಿ ಟಾಟಾ, ಕುಟುಂಬ ವರ್ಗ, ಸ್ನೇಹಿತರು, ಹಾಜರಿದ್ದರು.

IMG-20250711-WA0041

ಇಡೀ ಕಾರ್ಯಕ್ರಮದ ಪ್ರಮುಖ ಗಣ್ಯರಾದಂತಹ ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಹಾಗೂ ರೋರಿಂಗ್ ಸ್ಟಾರ್ ಶ್ರೀಮುರಳಿ ರವರು ಖ್ಯಾತ ಉದ್ಯಮಿ ವಿಜಯ್ ಟಾಟಾ ಅವರ ನೂತನ ನಿರ್ಮಾಣ ಸಂಸ್ಥೆಯಾದ ಅಮೃತ ಸಿನಿ ಕ್ರಾಫ್ಟ್ ಉದ್ಘಾಟಿಸುವುದರ ಮೂಲಕ ಚಿತ್ರರಂಗಕ್ಕೆ ಅವರನ್ನ ಬರಮಾಡಿಕೊಂಡರು. ಅದರಲ್ಲೂ ವಿಶೇಷ ಎಂದರೆ ಒಟ್ಟೊಟ್ಟಿಗೆ ಒಂದೇ ದಿನ ಗುರುಪೂರ್ಣಿಮೆಯ ವಿಶೇಷ ದಿನದಂದು ಆರು ಚಿತ್ರಗಳ ನಿರ್ಮಾಣ ಮಾಡಲು ಸಜ್ಜಾಗಿದೆ.ಉದ್ಯಮಿ ವಿಜಯ್ ಟಾಟಾ ಅವರು, ನಾವು ಚಿತ್ರರಂಗಕ್ಕೆ ಬರಲು ಕಾರಣವೇ ನಮ್ಮ ಗಂಡ ಹೆಂಡ್ತಿ ಜಗಳ. ಅದರಲ್ಲೂ ವಿಶೇಷವಾಗಿ ನಮ್ಮ ಜಗಳ ಆರಂಭಗೊಳ್ಳುವುದೇ ಪ್ರೇಮಲೋಕ ಹಾಡಿನಿಂದ ಅಂತ್ಯವಾಗುವುದು ಅದೇ ಹಾಡಿನಿಂದ. ನನ್ನ ಹೆಂಡತಿ ಇತ್ತೀಚಿಗೆ ಈ ಪ್ರಶಸ್ತಿಗಳನ್ನು ಪಡೆದು ಬಂದ ನಂತರ ನಮ್ಮ ಮಾತುಕತೆ ನಿರಂತರವಾಗಿ ನಡೆಯುತ್ತಿತ್ತು, ಚಿತ್ರಗಳ ಬಗ್ಗೆ ಚರ್ಚೆ ಮಾಡುತ್ತಿರುವಾಗ ಬಹಳಷ್ಟು ಚಿತ್ರಗಳು ಬರುತ್ತವೆ, ಆದರೆ ಚಿತ್ರ ಬಿಡುಗಡೆ ಹಂತದ ಸಮಯದಲ್ಲಿ ಮಾರ್ಕೆಟಿಂಗ್ ವಿಚಾರದಲ್ಲಿ ಎಲ್ಲೋ ಸೋಲುತ್ತಿದ್ದಾರೆ ಎಂಬ ಅನುಮಾನ ಬಂದಿತ್ತು. ಒಂದಷ್ಟು ರಿಸರ್ಚ್ ಮಾಡಿದ ಮೇಲೆ ನಾವು ಕನ್ನಡ ಚಿತ್ರೋದ್ಯಮಕ್ಕೆ ಬರಬೇಕು, ಒಳ್ಳೆಯ ಚಿತ್ರಗಳನ್ನು ನಿರ್ಮಾಣ ಮಾಡಬೇಕು ಜೊತೆಗೆ ಚಿತ್ರೀಕರಣ ಅರ್ಧಕ್ಕೆ ನಿಂತಿರುವ ಚಿತ್ರಗಳಿಗೂ ಸಾಥ್ ಕೊಡಬೇಕು, ಹೊಸ ನಿರ್ದೇಶಕ, ಕಲಾವಿದರಿಗೆ ಅವಕಾಶ ಸಿಗುವಂತಾಗಬೇಕು, ಹಾಗೆಯೇ ಚಿತ್ರವನ್ನ ವಿತರಣೆ ಮಾಡುವುದಕ್ಕೂ ನಿರ್ಧಾರ ಮಾಡಿದ್ದೇವೆ ಎಂದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ