-ಶರತ್ ಚಂದ್ರ
ತುಂಬಾ ದಿನಗಳ ನಂತರ ಕ್ರೇಜಿ ಸ್ಟಾರ್ ರವಿಚಂದ್ರನ್ ಸಿನಿಮಾ ಕಾರ್ಯಕ್ರಮ ವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಎಸ್. ಎಂ. ಪ್ರೊಡಕ್ಷನ್ ಮೂಲಕ ಮಹಿಳಾ ನಿರ್ಮಾಪಕಿ ನಾಗಶ್ರೀ, ನಿರ್ಮಿಸಿ, ನಿರ್ದೇಶಕ ಸುಪ್ರೀತ್ ಆಕ್ಷನ್ ಕಟ್ ಹೇಳುತ್ತಿರುವ ಹೊಸ ಚಿತ್ರದ ಟೈಟಲ್ ಅನಾವರಣ ಕಾರ್ಯಕ್ರಮಕ್ಕೆ ರವಿಚಂದ್ರನ್ ಭಾಗಿಯಾಗಿದ್ದರು.
ಸದ್ದಿಲ್ಲದೇ ಅರಂಭವಾದ ಈ ಚಿತ್ರದ ಚಿತ್ರೀಕರಣ ಈಗಾಗಲೇ 70% ಮುಗಿದಿದ್ದು ರವಿಚಂದ್ರನ್ ಅವರ ಭಾಗದ ಚಿತ್ರೀಕರಣ ಮಾತ್ರ ಬಾಕಿ ಇದೆಯಂತೆ.
ಇದೊಂದು ಪ್ರೇಮ ಕಥೆಯ ಸಬ್ಜೆಕ್ಟ್ ಆಗಿದ್ದು ಅದರಲ್ಲೂ ಪ್ರೇಮ ಲೋಕದ ಪ್ರಿನ್ಸಿಪಾಲ್ ರವಿಚಂದ್ರನ್ ಅಭಿನಯಿಸುತ್ತಿರುವುದರಿಂದ ಟೈಟಲ್ ಬಗ್ಗೆ ಎಲ್ಲರಿಗೂ ಸಹಜವಾದ ಕೂತೂಹಲ ಇತ್ತು.
ಈಗಾಗಲೇ ಲವ್ ಸಿನಿಮಾ ಗಳ ಟೈಟಲ್ ಗಳ ಸ್ಟಾಕ್ ಮುಗಿದಿರುವುದರಿಂದ 'ಪ್ಯಾರ್ ' ಅಂತ ಹೆಸರಿಡಲಾಗಿದೆ.
ಹೊಸ ಪ್ರತಿಭೆ ಭರತ್ ಮತ್ತು ಈಗಾಗಲೇ ಯೋಗರಾಜ್ ಭಟ್ ನಿರ್ದೇಶನ ದ 'ಮನದ ಕಡಲು' ಚಿತ್ರದಲ್ಲಿ ನಟಿಸಿರುವ ರಶಿಕ ಶೆಟ್ಟಿ, ಯುವ ಜೋಡಿಗಳಾಗಿ ಅಭಿನಯಿಸುತ್ತಿದ್ದಾರೆ
ರವಿಚಂದ್ರನ್ ರಶಿಕಾ ತಂದೆಯ ಪಾತ್ರ ಮಾಡುತ್ತಿದ್ದಾರೆ.ಇಲ್ಲಿ ಬರೀ ತಂದೆ ಮಗಳ ಬಾಂದವ್ಯ ಮಾತ್ರ ಇರುವುದಿಲ್ಲ, ಒಬ್ಬರಿಗೊಬ್ಬರು ಪ್ರಾಣ ಕೊಡಲು ಸಿದ್ದರಿರುವ ತ್ಯಾಗಮಯಿಗಳ ಪಾತ್ರ ಗಳು ಈ ಚಿತ್ರದಲ್ಲಿರುತ್ತವೆ ಎಂದು ನಿರ್ದೇಶಕ ಸುಪ್ರೀತ್ ತಿಳಿಸಿದ್ದಾರೆ.
ರವಿಚಂದ್ರನ್ ಮಾತಾಡಿ, ಬಾ. ಮಾ. ಹರೀಶ್ ಮೂಲಕ ಈ ಚಿತ್ರಕ್ಕೆ ಎಂಟ್ರಿ ಆದೆ, ನಿರ್ಮಾಪಕಿ ನಾಗಶ್ರೀ ಯವರು ಈ ಪಾತ್ರ ನಾನು ಮಾಡದೇ ಇದ್ದರೆ ಪ್ರಾಜೆಕ್ಟ್ ಕೈ ಬಿಡುವುದಾಗಿ ತಿಳಿಸಿದಕ್ಕೆ ಒಪ್ಪಿ ಕೊಂಡು ಈ ಚಿತ್ರ ಮಾಡುತ್ತಿದ್ದೇನೆ ತಂಡ ಶುಭವಾಗಲಿ ಎಂದು ಹಾರೈಸಿದರು.
ಚಿತ್ರಕ್ಕೆ 'ಪ್ಯಾರ್' ಅಂತ ಹೆಸರಿಟ್ಟು ನನ್ನನ್ನು ಪ್ಯಾರ್ ಮಾಡಲು ಹೀರೋಯಿನ್ ಯಾರು ಇಲ್ಲ ಅಂತ ತಮಾಷೆ ಮಾಡಿದರು.
ತಮ್ಮ ಮುಂದಿನ ಪ್ರಾಜೆಕ್ಟ್ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ತಾವು ನಿರ್ದೇಶಿಸುತ್ತಿರುವ ಚಿತ್ರದ ಚಿತ್ರೀಕರಣ ಈಗಾಗಲೇ ಮುಕ್ಕಾಲು ಭಾಗ ಮುಗಿದಿದ್ದು ಸಮಯ ಸಂದರ್ಭ ಬಂದಾಗ ವಿವರಗಳನ್ನು ಬಿಚ್ಚಿಡುತ್ತೇನೆ ಎಂದು ತಿಳಿಸಿದರು.
ಸಿನಿಮಾದಲ್ಲಿ 20ಕ್ಕಿಂತ ಹೆಚ್ಚು ಹಾಡುಗಳಿದ್ದು ಪ್ರೇಮ ಲೋಕವನ್ನು ಮೀರಿಸುವ ಸಿನಿಮಾ ಮಾಡುತ್ತಿದ್ದಾರಂತೆ.
ಬಹಳ ವರ್ಷಗಳ ನಂತರ ಸೋನು ನಿಗಮ್ ಮತ್ತು ಶ್ರೇಯ ಘೋಷಾಲ್ ಕನ್ನಡ ಚಿತ್ರದಲ್ಲಿ ಹಾಡುತ್ತಿದ್ದೂ, ಈ ಕುರಿತಾಗಿ ಚಿತ್ರ ತಂಡ ಬಿಡುಗಡೆ ಮಾಡಿದ ' ಒಂದೇ ಮಾತಲ್ಲಿ ಹೇಳೋದಾದರೆ 'ಸಾಂಗ್ ರೆಕಾರ್ಡಿಂಗ್ ವಿಡಿಯೋ ಗಮನ ಸೆಳೆದಿದ್ದು ಸಿನಿಮಾದ ಸಂಗೀತದ ಬಗ್ಗೆ ಈಗಾಗಲೇ ಸಾಕಷ್ಟು ಭರವಸೆ ಮೂಡಿಸಿದೆ. ಸಂಗೀತ ನಿರ್ದೇಶಕ ಪಳನಿ. ಡಿ. ಸೇನಾಪತಿ ರವಿಚಂದ್ರನ್ ಅವರ ಚಿತ್ರಕ್ಕೆ ಸಂಗೀತ ನೀಡಿ ನನ್ನ ಜನ್ಮ ಸಾರ್ಥಕ ಆಯ್ತು ಅಂತ ಖುಷಿ ಪಟ್ಟಿದ್ದಾರೆ. ಹಿರಿಯ ಛಾಯಾಗ್ರಾಹಕ ಕೆ.ಎಸ್. ಚಂದ್ರಶೇಖರ್ ರವಿಚಂದ್ರನ್ ಅವರ ಚಿತ್ರಕ್ಕೆ ಕೆಲಸ ಮಾಡಿರುವ ಬಗ್ಗೆ ಸಂತಸ ಹಂಚಿಕೊಂಡರು.
ಒಟ್ಟಿನಲ್ಲಿ ಕಾರ್ಯಕ್ರಮದಲ್ಲಿ ರವಿಚಂದ್ರನ್ ಅವರ ಉಪಸ್ಥಿತಿ ಚಿತ್ರತಂಡಕ್ಕೆ ಒಂದು ಪಾಸಿಟಿವ್ ವೈಬ್ ತಂದು ಕೊಟ್ಟಿತ್ತು.