ಇಲ್ಲಿಯವರೆಗೂ ನ್ಯಾಷನಲ್ ಕ್ರಶ್ ಯಾರು ಅಂದ್ರೆ ಒನ್ ಅಂಡ್ ಓನ್ಲಿ ರಶ್ಮಿಕಾ ಮಂದಣ್ಣ ಹೆಸರು ಹೇಳಲಾಗ್ತಿತ್ತು. ಆದ್ರೀಗ ಟ್ರೆಂಡ್ ಕೊಂಚ ಬದಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಆ ಪಟ್ಟ ಮತ್ತೊಬ್ಬ ನಟಿ ಮುಡಿಗೇರಿಸಿಕೊಂಡಿದ್ದಾರೆ. ಅವರು ಬೇರಾರೂ ಅಲ್ಲ, ನಮ್ಮ ಕರುನಾಡಿನ ಮುಗಿಲ್ ಪೇಟೆ ಚೆಲುವೆ ಕಯಾಡು ಲೋಹರ್.

NATIONAL CRUSH (1)

ಅಯ್ಯೋ.. ಕನ್ನಡ ಫಿಲ್ಮ್ ಮಾಡಿರೋ ಈ ಹುಡುಗಿ ಕನ್ನಡದ ಹುಡುಗಿ ಅಲ್ವಾ ಅಂತಾ ಕನ್​​ಫ್ಯೂಸ್ ಆಗಬೇಡಿ.. ಸದ್ಯಕ್ಕೀಗ ಈಕೆ ಕನ್ನಡದ ಹುಡುಗಿನೇ. ಹೆಸರು ಮಾತ್ರ ಸ್ವಲ್ಪ ಡಿಫರೆಂಟ್ ಆಗಿದೆ.

NATIONAL CRUSH (3)

ಕನ್ನಡತಿ ಆಗಿದ್ಕೊಂಡು ಕಯಾಡು ಲೋಹರ್ ಅಂತ ಹೆಸರು ಹೇಗೆ ಬಂತು ಅಂತ ಕನ್ಫ್ಯೂಸ್ ಆಗ್ಬೇಡಿ. ಈಕೆ ಅಸ್ಸಾಂ ಮೂಲದವರು. ರೂಪದರ್ಶಿ ಆಗಿದ್ದ ಈಕೆ ನಟಿಮಣಿಯಾಗಿ ಬಡ್ತಿ ಪಡೆದದ್ದೇ ನಮ್ಮ ಸ್ಯಾಂಡಲ್​ವುಡ್ ಸಿನಿಮಾ ಮೂಲಕ. ಹೌದು.. ಕ್ರೇಜಿಸ್ಟಾರ್ ರವಿಚಂದ್ರನ್ ಹಿರಿಯ ಮಗ ಮನೋರಂಜನ್ ನಟನೆಯ ಮುಗಿಲ್ ಪೇಟೆ ಚಿತ್ರದ ಮೂಲಕ ಬಣ್ಣ ಹಚ್ಚಿದ್ರು.

NATIONAL CRUSH (5)

ಅದಾದ ಬಳಿಕ ಕಯಾಡು ಮಲಯಾಳಂ, ತೆಲುಗು, ಮರಾಠಿ ಸಿನಿಮಾಗಳಲ್ಲಿ ಮಿಂಚಿದ್ರು. ಆದ್ರೀಗ ಕಳೆದ ವಾರ ತೆರೆಕಂಡ ತಮಿಳಿನ ಡ್ರ್ಯಾಗನ್ ಮೂವಿ ಮೂಲಕ ಈಕೆ ಎಲ್ಲರ ದಿಲ್ ದೋಚುತ್ತಿದ್ದಾರೆ. ಹೌದು.. ಲವ್ ಟುಡೇ ಚಿತ್ರದ ನಾಯಕನಟ ಪ್ರದೀಪ್ ರಂಗನಾಥನ್ ಜೊತೆ ಡ್ರ್ಯಾಗನ್ ಚಿತ್ರದಲ್ಲಿ ನಟಿಸಿದ್ದು, ಈಕೆಯ ನಟನೆಗೆ ಪ್ರೇಕ್ಷಕರು ಫಿದಾ ಆಗ್ತಿದ್ದಾರೆ.

NATIONAL CRUSH (6)

ಒಳ್ಳೆಯ ಪ್ರಶಂಸೆ ಹಾಗೂ ಪ್ರತಿಕ್ರಿಯೆಗಳ ಮೂಲಕ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಕೂಡ ದೊಡ್ಡ ಮಟ್ಟದಲ್ಲೇ ಕಮಾಲ್ ಮಾಡ್ತಿದೆ. ಡ್ರ್ಯಾಗನ್ ತೆರೆಕಂಡ ನಾಲ್ಕೇ ದಿನದಲ್ಲಿ ಬರೋಬ್ಬರಿ 50 ಕೋಟಿ ಕಲೆಕ್ಷನ್ ಮಾಡೋ ಮೂಲಕ ಸೌಂಡ್ ಮಾಡ್ತಿದೆ. ಈ ಚಿತ್ರದಲ್ಲಿ ಅನುಪಮಾ ಪರಮೇಶ್ವರನ್ ನಾಯಕಿ ಇದ್ಕೊಂಡು, ಕಯಾಡು ಅಪಿಯರೆನ್ಸ್ ಹಾಗೂ ನಟನೆ ಚಿತ್ರದ ಗೆಲುವಿಗೆ ಪ್ರಮುಖ ಕಾರಣವಾಗಿದೆ ಎನ್ನಲಾಗ್ತಿದೆ.

NATIONAL CRUSH (8)

ಅದೇನೇ ಇರಲಿ, ಕನ್ನಡ ಸಿನಿಮಾ ಮೂಲಕ ಸಿನಿಯಾನ ಶುರುವಿಟ್ಟ ಕಯಾಡು ಲೋಹರ್, ಇದೀಗ ನ್ಯೂ ನ್ಯಾಷನಲ್ ಕ್ರಶ್ ಆಗಿರೋದು ಹೆಮ್ಮೆಯ ವಿಷಯ. ಈಕೆಯ ಕ್ರೇಜ್ ನೋಡಿ, ಮತ್ತೆ ಕನ್ನಡಕ್ಕೆ ಯಾವಾಗ್ ಬರ್ತೀರಾ ಬ್ಯೂಟಿ ಅಂತಿದ್ದಾರೆ ನೆಟ್ಟಿಗರು.

NATIONAL CRUSH (9)

ಸದ್ಯ ನ್ಯಾಷನಲ್​ ಕ್ರಶ್​​ ನಟಿ ರಶ್ಮಿಕಾ ಮಂದಣ್ಣ ಅಲ್ಲ.. ಈಕೆನೇ ಅಂತಾ ನೆಟ್ಟಿಗರು ವಾದ ಮಾಡ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಂತೂ ಸಖತ್​​ ಟ್ರೆಂಡಿಂಗ್​ನಲ್ಲಿದ್ದಾರೆ. ಸಿನಿರಂಗದಲ್ಲಿ ಎಲ್ಲಾ ಬ್ಯೂಟಿಗಳು ಸೌಂದರ್ಯದ ಕ್ರಾಂತಿ ಮಾಡೋದು ಕೇವಲ ಕನ್ನಡದಿಂದಲೇ ಅಂತಾ ಮಾತನಾಡಿಕೊಳ್ತಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ