-ಶರತ್ ಚಂದ್ರ

ಸುಮಾರು 15 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ನಟನಾಗಿ,ನಿರೂಪಕನಾಗಿ ಹಾಗೂ ನಿರ್ಮಾಣದಲ್ಲಿ ತೊಡಗಿಸಿಕೊಂಡಿರುವ ಸಂತೋಷ್ ಬಿಲ್ಲವ ನಾಯಕನಾಗಿ ನಟಿಸಿರುವ' ಕನಸೊಂದು ಶುರುವಾಗಿದೆ' ಚಿತ್ರದ ಪ್ರಿ ರಿಲೀಸ್ ಇವೆಂಟ್ ಮತ್ತು ಟ್ರೈಲರ್ ಲಾಂಚ್ ಇತ್ತೀಚಿಗೆ ನಡೆಯಿತು.

ಟ್ರೈಲರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಸಾಥ್ ನೀಡಲು ಕನ್ನಡದ ಜನಪ್ರಿಯ ನಾಯಕ ನಟರುಗಳಾದ ಡಾರ್ಲಿಂಗ್ ಕೃಷ್ಣ ಹಾಗೂ ಯೋಗಿ ಉಪಸ್ಥಿತರಿದ್ದು ಸ್ನೇಹಿತರ ಈ ಒಂದು ಪ್ರಯತ್ನಕ್ಕೆ ಶುಭವಾಗಲಿ ಎಂದು ಹರಸಿದರು.

1000434390

ಚಿತ್ರತಂಡಕ್ಕೆ ಮಾರ್ಗದರ್ಶನ ನೀಡುವುದರೊಂದಿಗೆ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿರುವ ಥ್ರಿಲ್ಲರ್ ಮಂಜು ಮುಖ್ಯ ಅತಿಥಿಯಾಗಿ ಭಾಗವಹಿಸಿ, ತಮ್ಮದೇ ಕ್ರಿಕೆಟ್ ತಂಡದ ಸ್ನೇಹಿತರು ಸೇರಿ ಮಾಡುತ್ತಿರುವ ಈ ಚಿತ್ರಕ್ಕೆ ಆಲ್ ದ ಬೆಸ್ಟ್ ಹೇಳಿ ಪ್ರೋತ್ಸಾಹದ ನುಡಿ ಆಡಿದರು.ಇದೊಂದು ವಿಭಿನ್ನ ಸಸ್ಪೆನ್ಸ್ ಕಥೆಯಿರುವ ಚಿತ್ರ,  ಹಾಡು ನೋಡಿ ಸಂತೋಷ್ ಬಿಲ್ಲವ ಸ್ಕ್ರೀನ್ ಪ್ರೆಸೆನ್ಸ್ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.

ಚಿತ್ರದ ನಾಯಕಿ ಸಾತ್ವಿಕಾ ಮಾತನಾಡಿ ನನಗೆ ಈ ಚಿತ್ರದಲ್ಲಿ ನಾಯಕಿಯಾಗಿ ನಿರ್ದೇಶಕರು ಒಳ್ಳೆ ಪಾತ್ರವನ್ನು ನೀಡಿದ್ದಾರೆ, ಪಾತ್ರದ ಬಗ್ಗೆ ಹೆಚ್ಚು ಬಿಚ್ಚಿಡುವ ಹಾಗಿಲ್ಲ, ತಾನು ಜೊತೆಗೆ ನಟಿಸಿದ ನಾಯಕರಲ್ಲಿ ಸಂತೋಷ್ ಬಿಲ್ಲವ ಒಬ್ಬ ಒಳ್ಳೆ ಕೋ ಸ್ಟಾರ್ ಅಂತ ಮೆಚ್ಚುಗೆ ವ್ಯಕ್ತಪಡಿಸಿದರು.

1000433754

ಬಿಡುಗಡೆಯಾದ ಹಾಡುಗಳು ಈಗಾಗಲೇ ಜನರಿಗೆ ರೀಚ್ ಆಗುತ್ತಿದ್ದು ಚಿತ್ರಕ್ಕೆ ಸೂರಜ್ ಜೋಯಿಸ್ ಸಂಗೀತ ನೀಡಿದ್ದಾರೆ. ಪ್ರಮೋದ್ ಮರವಂತೆ, ಸಿಂಪಲ್ ಸುನಿ, ಶಶಾಂಕ್ ಸಾಹಿತ್ಯ ಬರೆದಿರುವ

ಹಾಡುಗಳಿಗೆ ಸೋನು ನಿಗಮ್, ವಾಸುಕಿ ವೈಭವ್ ಹಾಗೂ ರಾಜೇಶ್ ಕೃಷ್ಣನ್ ಮುಂತಾದ ಗಾಯಕರು ಧ್ವನಿ ನೀಡಿದ್ದಾರೆ. ಟ್ರೈಲರ್ ಜೊತೆ ರಾಜೇಶ್ ಕೃಷ್ಣನ್ ಹಾಡಿರುವ ಟೈಟಲ್ ಟ್ರ್ಯಾಕ ನ್ನು ಕೂಡ ಬಿಡುಗಡೆ ಮಾಡಲಾಯಿತು.

1000434386

ಕನ್ನಡದ ಪ್ರಪ್ರಥಮ ಡ್ರಿಂ ಚೇಸರ್ ಸಬ್ಜೆಕ್ಟ್ ಆದರಿಸಿ ಮಾಡಿದಂತಹ ಈ ಚಿತ್ರಕ್ಕೆ ಈ ಹಿಂದೆ ' ಸಹಾರ' ಎಂಬ ಮಹಿಳಾ ಕ್ರಿಕೆಟ್ ಕುರಿತಾದ ಸಿನಿಮಾ ನಿರ್ದೇಶಿಸಿದ್ದ ಮಂಜೇಶ್ ಭಾಗವತ್ ಆಕ್ಷನ್ ಕಟ್ ಹೇಳಿದ್ದಾರೆ. ಪುನೀತ್ ರಾಜಕುಮಾರ್ ಅವರ ನಿನ್ನಿಂದಲೇ ಹಾಡಿನಲ್ಲಿ ಬರುವ ಕನಸೊಂದು ಶುರುವಾಗಿದೆ ಲೈನ್ ಚಿತ್ರಕ್ಕೆ ಈ ಟೈಟಲ್ ಇಡಲು ಪ್ರೇರಣೆಯಂತೆ.

ನಿರ್ಮಾಪಕ ಲಕ್ಷ್ಮಿಕಾಂತ್ ರೆಡ್ಡಿ ಈ ವಿಭಿನ್ನ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.ಚಿತ್ರಕ್ಕೆ ಲೋಕೇಶ್ ಸೂರ್ಯ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ.ಚಿತ್ರ ಮಾರ್ಚ್ ತಿಂಗಳ 7 ನೇ ತಾರೀಕಿಗೆ ಚಿತ್ರ ಮಂದಿರಗಳಲ್ಲಿ ತೆರೆ ಕಾಣಲಿದೆ.

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ