ಸಿನಿಮಾ ಇಂಡಸ್ಟ್ರೀಯಲ್ಲಿ ಹೀರೋಯಿನ್ಗಳು ತಮ್ಮ ಬ್ಯೂಟಿನಾ ಹಾಗೆ ಮೇಂಟೇನ್ ಮಾಡೋದು ತುಂಬಾನೇ ಕಷ್ಟ. ಕೆಲವೇ ಕೆಲವರು ಮಾತ್ರ ಒಂದೇ ಏಜ್ನಲ್ಲಿ ಸ್ಟ್ರಕ್ ಆಗಿಬಿಡ್ತಾರೆ. ಅದಕ್ಕೆ ಬೆಸ್ಟ್ ಎಕ್ಸಾಂಪಲ್ ಅಂದ್ರೆ ಕನ್ನಡದ ಖ್ಯಾತ ನಟಿ ರಮ್ಯಾ.
ಹೌದು.. ಕಳೆದ 20 ವರ್ಷಗಳ ಹಿಂದೆ ಪುನೀತ್ ರಾಜ್ಕುಮಾರ್ ಜೊತೆ ಅಭಿ ಸಿನಿಮಾ ಮೂಲಕ ಎಂಟ್ರಿ ಕೊಟ್ಟಿದ್ದ ರಮ್ಯಾ ಈಗಲೂ ಕೂಡ ಮೋಹಕತಾರೆನೇ. ಕೆಲ ವರ್ಷಗಳಿಂದ ಸಿನಿಮಾಲೋಕದಿಂದ ದೂರ ಉಳಿದಿದ್ರೂ ರಮ್ಯಾ ಎವರ್ಗ್ರೀನ್ ನಾಯಕಿ. ಅಸಂಖ್ಯಾತ ಅಭಿಮಾನಿಗಳಿಗೆ ಈಗಲೂ ಕೂಡ ಹಾರ್ಟ್ ಫೇವರೀಟ್. ಸೋಷಿಯಲ್ ಮೀಡಿಯಾದಲ್ಲಿ ಸ್ವಲ್ಪ ಮಟ್ಟಿಗೆ ಆಕ್ಟೀವ್ ಆಗಿರೋ ನಟಿ ರಮ್ಯಾ ಸದ್ಯ ಒಂದು ಮೆಸೇಜ್ ಕೊಟ್ಟಿದ್ದಾರೆ.
ಮೋಹಕತಾರೆ ರಮ್ಯಾ ರಾಜಕೀಯ ಬಿಟ್ರು. ನಿರ್ಮಾಣ ಸಂಸ್ಥೆ ತೆರೆದು, ಅಲ್ಲೊಂದು ಸಿನಿಮಾ ಮಾಡಿ ಪ್ರೊಡಕ್ಷನ್ ಹೌಸ್ ಕೂಡ ಕೈ ಬಿಟ್ರು. ನಾಯಕಿ ಆಗ್ತೀನಿ ಅಂತ ಬಂದ್ರು, ಉತ್ತರಕಾಂಡದಿಂದ ಹೊರಬಂದ್ರು. ಅರೇ ನಮ್ ರಮ್ಯಾ ಮೇಡಂ ಬೇರೇನು ಮಾಡ್ತಾರೆ ಅಂತ ಸಿಕ್ಕಾಪಟ್ಟೆ ತಲೆಕೆಡಿಸಿಕೊಳ್ತಿದ್ದ ಡೈಹಾರ್ಡ್ ಫ್ಯಾನ್ಸ್ ಗೆ ಕೊನೆಗೂ ಲೈಫ್ ಸ್ಟೈಲ್ ನ ವಿವರಿಸಿದ್ದಾರೆ. ಅದೂ ಒಂದೇ ಒಂದು ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ಅನ್ನೋದು ವಿಶೇಷ.
ಯೆಸ್.. ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ, ಇನ್ಸ್ಟಾದಲ್ಲಿ ಒಂದು ಸ್ಪೆಷಲ್ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಬರೋಬ್ಬರಿ 20 ಫೋಟೋಗಳನ್ನ ಅಪ್ಲೋಡ್ ಕೂಡ ಮಾಡಿದ್ದಾರೆ. ಆದ್ರೆ ಅದಕ್ಕೆ ಕೊಟ್ಟಿರೋ ಕ್ಯಾಪ್ಷನ್ ಸಖತ್ ಇಂಟರೆಸ್ಟಿಂಗ್ ಅನಿಸಿದೆ. Everybody Rides the Carousel ಅಂತ ಬರೆದುಕೊಂಡಿದ್ದಾರೆ. ಅಂದಹಾಗೆ ಇದು ಹಾಲಿವುಡ್ ಸಿನಿಮಾವೊಂದರ ಟೈಟಲ್.
ಇದು ಸಿನಿಮಾ ಆದ್ರೂ ಕೂಡ, ಜನ ಬೆಳಗಿನಿಂದ ಸಂಜೆವರೆಗೂ ಕುದುರೆ ಮೇಲೆ ಓಡ್ತಿರ್ತಾರೆ ಅನ್ನೋದು ಸತ್ಯದ ಮಾತು. ಅಂದ್ರೆ ಎದ್ದಾಗಿಂದ ಮಲಗೋವರೆಗೂ ಏನೆಲ್ಲಾ ನಡೆಯಲಿದೆ ಅನ್ನೋದನ್ನ ಫೋಟೋಸ್ ಸಮೇತ ವಿವರಿಸಿದ್ದಾರೆ. ವಿಶೇಷ ಅಂದ್ರೆ ಆ ಇಪ್ಪತ್ತು ಫೋಟೋಸ್ ನಲ್ಲಿ ರಮ್ಯಾ ಫೇವರಿಟ್ ಶ್ವಾನಗಳು ಕೂಡ ಇರೋದು ಸ್ಪೆಷಲ್ ಅಟ್ರ್ಯಾಕ್ಷನ್.
ರಮ್ಯಾ ಏನ್ಮಾಡ್ತಿದ್ದಾರೆ ಅನ್ನೋರಿಗೆ ಪರೋಕ್ಷವಾಗಿ ಉತ್ತರ ಕೊಟ್ಟಿದ್ದಾರೆ ಮೋಹಕತಾರೆ. ಅಂದಹಾಗೆ ಇಂದಿಗೂ ಈಕೆಯೇ ಗ್ಲಾಮರ್ ದಿವಾ. ಈಕೆಯ ಸೌಂದರ್ಯವನ್ನ ಮೀರಿಸೋ ಮತ್ತೊಬ್ಬ ನಟಿ ಬರಲೇ ಇಲ್ಲ. ಮೊನ್ನೆ ಮೊನ್ನೆಯಷ್ಟೇ ರಕ್ಷಿತಾ ಸಹೋದರ ರಾಣಾ ಮದ್ವೆಗೆ ಆಗಮಿಸಿದ್ದ ರಮ್ಯಾ ಅವ್ರನ್ನ ಕಂಡು ಇಡೀ ಕರುನಾಡು ಬೋಲ್ಡ್ ಆಗೋಗಿದೆ. ಅಷ್ಟರ ಮಟ್ಟಿಗೆ ಬ್ಯೂಟಿ ಮೇಂಟೇನ್ ಮಾಡ್ತಿದ್ದಾರೆ ರಮ್ಯಾ. ಅವರು ಆದಷ್ಟು ಬೇಗ ಬಣ್ಣದ ಲೋಕಕ್ಕೆ ವಾಪಸ್ ಆಗಲಿ ಅನ್ನೋದು ಎಲ್ಲರ ಆಶಯ.
20 ವರ್ಷಗಳ ಹಿಂದೆ ರಕ್ಷಿತಾ, ರಮ್ಯಾ, ರಾಧಿಕಾ ಅನ್ನೋ RRR ಸ್ಪರ್ಧೆ ಏರ್ಪಟ್ಟಿತ್ತು. ಆದ್ರೆ, ಇದರಲ್ಲಿ ತಮ್ಮ ಬ್ಯೂಟಿನಾ ಹಾಗೆ ಮೇಂಟೇನ್ ಮಾಡಿದೋರು ಇಬ್ಬರು ಮಾತ್ರ. ಒಂದು ನಟಿ ರಮ್ಯಾ. ಮತ್ತೊಬ್ಬರು ನಟಿ ರಾಧಿಕಾ ಕುಮಾರಸ್ವಾಮಿ. ಈ ಇಬ್ಬರೂ ನಟಿಯರಿಗೆ ಸ್ಯಾಂಡಲ್ವುಡ್ನಲ್ಲಿ ಈಗಲೂ ಸಖತ್ ಡಿಮ್ಯಾಂಡ್ ಇದ್ದೇ ಇದೆ. ಅದ್ರಲ್ಲೂ ನಟಿ ರಮ್ಯಾಗೆ ತುಸು ಜಾಸ್ತಿನೇ. ಹೀಗಾಗಿ ರಮ್ಯಾ ಕಂಬ್ಯಾಕ್ ಮಾಡೋದನ್ನ ಕನ್ನಡಿಗರು ಕಾಯುತ್ತಲೇ ಇದ್ದಾರೆ.