ಸರಸ್ವತಿ ಜಾಗೀರ್ದಾರ್ *

ಇಲ್ಲಿ ಮಾತಾಡ್ತಿರೋದು ಉಗ್ರಾಣ ಬಗ್ಗೆ! ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ತಯಾರಾಗುತ್ತಿರುವ ಈ ಸಿನಿಮಾ ಈಗಾಗಲೇ ಭಾರಿ ಕುತೂಹಲ ಮೂಡಿಸುತ್ತಿದೆ. ಹಾಗಾದರೆ, ಈ ಚಿತ್ರದಲ್ಲಿ ಏನಂಥ ವಿಶೇಷ ..

ಒನ್ ಮ್ಯಾನ್ ಶೋ...

ಉಗ್ರಾಣ ಚಿತ್ರದ ಸೃಜನಶೀಲತೆಯ ಹಿಂದೆ ಇರುವ ಪ್ರಮುಖ ಹೆಸರು ರಿಷಿಕೇಶ್. ಇವರು ಈ ಚಿತ್ರದ ನಿರ್ದೇಶನ, ಛಾಯಾಗ್ರಹಣ, ಸಂಕಲನ, ಕಥೆ, ಹಾಗೂ ಚಿತ್ರಕಥೆ – ಎಲ್ಲವನ್ನೂ ತಾವೇ ಮಾಡಿರುವುದು ಒಂದು ವಿಶೇಷ. ಒಬ್ಬನೇ ಬಹುತೇಕ ತಂತ್ರಜ್ಞಾನದ ಹೊಣೆ ಹೊತ್ತಿರೋದು ಸಿನಿಮಾಗೆ ಒಂದು ಹೊಸ ಆಯಾಮ ಕೊಟ್ಟಿದೆಯಂತೆ..

Ugrana 2

ನಿರ್ಮಾಪಕರ ಪಾತ್ರ

ಅನಿತಾ ಭಟ್ ಈ ಚಿತ್ರವನ್ನು ABC ಪ್ರೊಡಕ್ಷನ್ ಹೌಸ್ ಮೂಲಕ ನಿರ್ಮಾಣ ಮಾಡಿದ್ದಾರೆ. ಪ್ರಾಮಾಣಿಕ ಕಥೆಯ ಜೊತೆಗೆ ಉತ್ತಮ ತಂತ್ರಜ್ಞಾನ ಬಳಸಿಕೊಂಡು ಈ ಚಿತ್ರವನ್ನು ಕಲಾತ್ಮಕವಾಗಿ ಮೂಡಿಬರಲು ಅವರು ಸಾಕಷ್ಟು ಶ್ರಮಪಟ್ಟಿದ್ದಾರೆ.
ತಾರಾಗಣದಲ್ಲಿ..

ಚಿತ್ರದಲ್ಲಿ ಅನಿತಾ ಭಟ್, ಪವನ್ ಶೆಟ್ಟಿ, ಮತ್ತು ಹೈದರಾಬಾದ್‌ನ ಶಫಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ, ಕನ್ನಡ ಮತ್ತು ತೆಲುಗು ಚಿತ್ರರಂಗದ ಅನುಭವಿ ಕಲಾವಿದರು ಸಹ ಭಾಗಿಯಾಗಿದ್ದಾರೆ. ಸಿದ್ದು ಮೂಲಿಮನೆ , ಮಿಮಿಕ್ರಿ ಗೋಪಿ ಜಯದೇವ್ ಮೋಹನ್, ಮತ್ತು ಕರಿ ಸುಬ್ಬು ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಹೊಸತೊಂದು ಶೈಲಿಯ ಅಭಿನಯವನ್ನೇ ಕಾಣಬಹುದಂತೆ

ಸಂಗೀತ ಮತ್ತು ತಂತ್ರಜ್ಞಾನ

ಚಿತ್ರಕ್ಕೆ ಆಕಾಶ್ ಪರ್ವ ಸಂಗೀತ ನಿರ್ದೇಶನ ಮಾಡಿದ್ದು, ಅದು ಸಿನಿಮಾದ ಭಾವನಾತ್ಮಕ ಕ್ಷಣಗಳನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲಿದೆ. ಡಾಟ್ ಟಾಕೀಸ್ ಮತ್ತು ಕೃಷಿ ಸ್ಟುಡಿಯೋಸ್ ಈ ಚಿತ್ರದ ಪೋಸ್ಟ್ ಪ್ರೊಡಕ್ಷನ್ ನಲ್ಲಿ ಮುಂಚೂಣಿಯಲ್ಲಿದ್ದು, ಥ್ರಿಲ್ಲರ್ ಚಿತ್ರದ ತೀವ್ರತೆಯನ್ನು ಹೆಚ್ಚಿಸೋಕೆ ಅದೊಂದು ಪ್ಲಸ್ ಪಾಯಿಂಟ್ ಆಗಲಿದೆ ಎನ್ನುತ್ತಾರೆ ಅನಿತಾ

ಉಗ್ರಾಣ – ನಿಮ್ಮ ಮುಂದೆ ಶೀಘ್ರದಲ್ಲೇ!

ಇಂಥಾ ವಿಭಿನ್ನ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ ನೀವು ತಪ್ಪದೆ ನೋಡಬೇಕು ,ಚಿತ್ರಗಳಲ್ಲಿ  ಥ್ರಿಲ್ಲಿಂಗ್ ಕಥೆ, ಪ್ರಬಲ ತಂತ್ರಜ್ಞಾನ, ತಾಜಾ ನಿರ್ವಹಣೆಯೊಂದಿಗೆ ಉಗ್ರಾಣ ಚಿತ್ರವನ್ನ  ನೀವು  ನಿರೀಕ್ಷಿಸಬಹುದು.

ಮಹಾಶಿವರಾತ್ರಿ ಆಚರಣೆಯೊಂದಿಗೆ

ಇಡೀ ತಂಡಕ್ಕೆ ಶುಭವಾಗಲಿ

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ