- ರಾಘವೇಂದ್ರ ಅಡಿಗ ಎಚ್ಚೆನ್
ಸ್ಯಾಂಡಲ್ವುಡ್ ನಲ್ಲಿ ಕರಾವಳಿ ಭಾಗದ ಪ್ರತಿಭೆಗಳ ಅಬ್ಬರ ಜೋರಾಗಿ ನಡೆಯುತ್ತಿದೆ. ಎಲ್ಲಾ ಕಾಲಘಟ್ಟಕ್ಕೂ ಒಪ್ಪುವಂತಹ ಕಥಾನಕ ಬಂದರೆ ಖಂಡಿತ ಪ್ರೇಕ್ಷಕರ ಗಮನ ಸೆಳೆಯಬಹುದು ಎಂಬ ನಿಟ್ಟಿನಲ್ಲಿ ಪ್ರೇಕ್ಷಕರ ಮುಂದೆ ಬಂದಂತಹ ತುಳುವಿನ ಚಿತ್ರ "ದಸ್ಕತ್".
ಈಗ ಈ ಚಿತ್ರವನ್ನು ಕನ್ನಡದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಂಡು ಮೇ 9ರಂದು ರಾಜ್ಯಾದ್ಯಂತ ತೆರೆಯ ಮೇಲೆ ತರಲು ಪ್ಲಾನ್ ಮಾಡಿಕೊಂಡಿದೆ. ಈ ವಿಚಾರವಾಗಿ ಚಿತ್ರತಂಡ ಕನ್ನಡದ ಟ್ರೈಲರ್ ಬಿಡುಗಡೆ ಮಾಡುವ ಮೂಲಕ ಪತ್ರಿಕಾಗೋಷ್ಠಿಯನ್ನು ಆಯೋಜನೆ ಮಾಡಿತ್ತು.
ಈ ಚಿತ್ರದ ಕುರಿತು ನಿರ್ದೇಶಕ ಅನೀಶ್ ಪೂಜಾರಿ ವೇಣೂರು ಮಾತನಾಡುತ್ತಾ ನಾನು 2015 ರ ಝೀ ಕಾಮಿಡಿ ರಿಯಾಲಿಟಿ ಶೋ ನಲ್ಲಿ ಬಂದಂತಹ ಪ್ರತಿಭೆ. ನನ್ನದೇ ಒಂದಷ್ಟು ಗೆಳೆಯರ ಬಳಗ ಸೇರಿಕೊಂಡು ಕಿರುಚಿತ್ರ ಹಾಗೂ ವೆಬ್ ಸೀರೀಸ್ ಆನ್ನ ಮಾಡಿದ್ವಿ. ತದನಂತರ ಚಿತ್ರ ಮಾಡಬೇಕೆಂಬ ಉದ್ದೇಶದಿಂದ ಬಹಳಷ್ಟು ಪೂರ್ವ ತಯಾರಿಯನ್ನು ಮಾಡಿಕೊಂಡು ಈ ದಸ್ಕತ್ ಎಂಬ ಶೀರ್ಷಿಕೆ ಇಟ್ಟುಕೊಂಡು ಚಿತ್ರ ಶುರು ಮಾಡಿದ್ವಿ, ದಸ್ಕತ್ ಅಂದರೆ (ಸಿಗ್ನೇಚರ್) ಸಹಿ ಮಾಡುವುದು ಎಂಬ ಅರ್ಥ. ಒಂದು ಹಳ್ಳಿಯಲ್ಲಿ ಜನ ಸಹಿಗಾಗಿ ಎಷ್ಟು ಕಷ್ಟ ಪಡ್ತಾರೆ ಎಂಬುದನ್ನು ಈ ಚಿತ್ರದಲ್ಲಿ ತೋರಿಸಿದ್ದೇವೆ. ಒಂದು ಸಹಿಯಿಂದ ಏನೆಲ್ಲಾ ಅವಾಂತರ ಸೃಷ್ಟಿಯಾಗುತ್ತದೆ. ಶ್ರೀಮಂತರು , ಬಡವರು ಹಾಗೂ ಅಧಿಕಾರಿಗಳ ನಡುವಿನ ತಳಮಳದ ಜೊತೆಗೆ ಬದುಕು ಹೇಗೆಲ್ಲಾ ಸಾಗುತ್ತದೆ ಎಂಬುದನ್ನು ಬಹಳ ಸೂಕ್ಷ್ಮವಾಗಿ ಹೇಳುವ ಪ್ರಯತ್ನ ಮಾಡಿದ್ದೇವೆ. ಇಂತಹ ಘಟನೆಗಳು ಪ್ರತಿಯೊಬ್ಬರ ಬದುಕಿನಲ್ಲಿ ನಡೆಯುವಂತಹ ಸಾಧ್ಯತೆ ಇದ್ದೇ ಇರುತ್ತದೆ. ಕರಾವಳಿ ಭಾಗದ ಸುತ್ತ ಚಿತ್ರೀಕರಿಸಿರುವ ನಮ್ಮ ಈ ತುಳು ಚಿತ್ರ ದಸ್ಕತ್ ಬಿಡುಗಡೆಗೊಂಡು ಯಶಸ್ವಿ 70 ದಿನವನ್ನು ಪೂರೈಸಿದೆ. ಹಾಗೆಯೇ ಕೆನಡಾ , ನೈಜೀರಿಯಾ , ದುಬೈ , ಸೇರದಂತೆ ದೇಶದ ನಾನಾ ಭಾಗಗಳನ್ನು ಕೂಡ ನಮ್ಮ ಚಿತ್ರ ಪ್ರದರ್ಶನ ಆಗಿದ್ದು ಇನ್ನು ಹಲವು ದೇಶಗಳಲ್ಲಿ ಪ್ರದರ್ಶನವಾಗಬೇಕಿದೆ.
ನಮ್ಮ ಚಿತ್ರದ ಟ್ರೈಲರ್ ವೀಕ್ಷಿಸಿದಂತ ಹಾಟ್ರಿಕ್ ಹೀರೋ ಶಿವರಾಜ್ ಕುಮಾರ್ , ನಟ ಶ್ರೀ ಮುರಳಿ , ನಟ ರಾಜ್ .ಬಿ .ಶೆಟ್ಟಿ ಸೇರಿದಂತೆ ಹಲವಾರು ಸಿನಿಮಾ ಕಲಾವಿದರು ತಂತ್ರಜ್ಞರು ನೋಡಿ ಮೆಚ್ಚಿಕೊಂಡಿದ್ದಾರೆ. ನಮ್ಮ ಚಿತ್ರವನ್ನು ವೀಕ್ಷಿಸಿದಂತಹ ಚಿತ್ರ ಪ್ರೇಮಿಗಳು , ತಾರೆಯರು , ತಂತ್ರಜ್ಞರು ಕೂಡ ಮೆಚ್ಚಿಕೊಂಡರು. ವಿಶೇಷವಾಗಿ ಈ ಬಾರಿಯ ಬೆಂಗಳೂರು ಅಂತರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ನಮ್ಮ ಚಿತ್ರ ಪ್ರದರ್ಶನಗೊಂಡು ಎಲ್ಲರಿಂದ ಪ್ರಶಂಸೆ ಪಡೆದು ಮೂರನೇ ಅತ್ಯುತ್ತಮ ಚಿತ್ರವಾಗಿ ಪ್ರಶಸ್ತಿಯನ್ನು ಕೂಡ ಪಡೆದುಕೊಂಡಿದೆ. ಇದೆಲ್ಲವೂ ನಮಗೆ ಬಹಳ ಸಂತೋಷವನ್ನು ತಂದಿದ್ದು. ನಮ್ಮ ಈ ಚಿತ್ರವನ್ನು ಎಲ್ಲರೂ ನೋಡುವಂತಾಗಬೇಕು ಹಾಗಾಗಿ ರಾಜ್ಯಾದ್ಯಂತ ಬಿಡುಗಡೆ ಮಾಡಬೇಕೆಂದು ನಿರ್ಧರಿಸಿ ಈ ಚಿತ್ರವನ್ನು ಮೇ 9ರಂದು ಬಿಡುಗಡೆ ಮಾಡಲು ಸಿದ್ಧತೆಯನ್ನು ಮಾಡಿಕೊಂಡಿದ್ದೇವೆ. ನಿಮ್ಮೆಲ್ಲರ ಪ್ರೀತಿ ಸಹಕಾರ ಇರಲಿ ಎಂದು ಕೇಳಿಕೊಂಡರು.