ಜಾಗೀರ್ದಾರ್*

ಕನ್ನಡದಲ್ಲಿ ಈಗ ಪ್ರಯೋಗಾತ್ಮಕ ಚಿತ್ರಗಳು ಹೆಚ್ಚು ಬರುತ್ತಿದೆ. ಜನರು ಅಂತಹ ಚಿತ್ರಗಳಿಗೆ ಉಘೇ ಎನ್ನುತ್ತಿದ್ದಾರೆ‌‌. ಅಂತಹ ಸಾಲಿಗೆ ELEVEN ELEMENTS ಸಂಸ್ಥೆ RECTANGLE STUIOS ಸಹಯೋಗದೊಂದಿಗೆ ನಿರ್ಮಿಸಿರುವ " ಫಾದರ್ಸ್ ಡೇ" ಚಿತ್ರ ಸೇರಲಿದೆ ಎಂಬ ಭರವಸೆ ಚಿತ್ರತಂಡಕ್ಕಿದೆ. ರಾಜಾರಾಮ್ ರಾಜೇಂದ್ರನ್ ನಿರ್ದೇಶನದಲ್ಲಿ "ಆಚಾರ್ & ಕೋ", "ಸಪ್ತಸಾಗರದಾಚೆ ಎಲ್ಲೋ",‌ " ಅನಾಮಾಧೇಯ ಅಶೋಕ್ ಕುಮಾರ್" ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿ ಜನಮನ್ನಣೆ ಪಡೆದುಕೊಂಡಿರುವ ಹರ್ಷಿಲ್ ಕೌಶಿಕ್ ಹಾಗೂ "ಶ್ರೀರಸ್ತು ಶುಭಮಸ್ತು" ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ಅಭಿನಯಿಸಿ ಜನಪ್ರಿಯರಾಗಿರುವ ಅಜಿತ್ ಹಂಡೆ ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ. ಹೆಸರಾಂತ ಗಾಯಕ ALL OK ಹಾಗೂ ಸಾಮ್ರಾಗ್ನಿ ರಾಜನ್ ಸಹ ಈ ಚಿತ್ರದಲ್ಲಿದ್ದಾರೆ.

day

ಇದೊಂದು ಪ್ರವಾಸ ಕಥನಾ ಸಹ ಆಗಿದ್ದು, ಕನ್ನಡದ ಮೊದಲ ಬೈಕರ್ ಚಿತ್ರ ಅಂತಲೂ ಹೇಳಬಹುದು. ಈ ಚಿತ್ರದ ಕಥೆ ಇಬ್ಬರು ಬೈಕರ್ ಗಳ ಸುತ್ತ ಸಾಗುತ್ತದೆ. ಇಬ್ಬರು ಸಹ ಪಯಣಿಗರಾಗಿದ್ದರೂ ತಾವಿಬ್ಬರು ತಂದೆ - ಮಗ ಎಂದು ಕೊನೆಯವರೆಗೂ ತಿಳಿಯುವುದಿಲ್ಲ‌. ಅಂತಹ ಕೌತುಕ ಚಿತ್ರಕಥೆ ಹೊಂದಿರುವ "ಫಾದರ್ಸ್ ಡೇ" ತಂದೆ - ಮಗನ ಬಾಂಧವ್ಯದ ಚಿತ್ರವೂ ಹೌದು. ಇದರ ಜೊತೆಗೆ ತಿಳಿ ಹಾಸ್ಯದ ಸನ್ನಿವೇಶಗಳೂ ಸಹ ಜನರ ಮನಸ್ಸಿಗೆ ಹತ್ತಿರವಾಗುತ್ತದೆ.

ಈಗಾಗಲೇ ಚಿತ್ರೀಕರಣ ಮುಗಿಸಿರುವ ಈ ಚಿತ್ರ ತೆರೆಗೆ ಬರಲು ಅಣಿಯಾಗುತ್ತಿದೆ. ಬಿಡುಗಡೆಗೂ ಪೂರ್ವಭಾವಿಯಾಗಿ ಟೀಸರ್ ಬಿಡುಗಡೆಯಾಗಿದೆ. ಟೀಸರ್ ಕೂಡ ಕುತೂಹಲ ಮೂಡಿಸಿದೆ.‌ ಚಿತ್ರ ನೋಡುವ ಕಾತುರವನ್ನು ಹೆಚ್ಚಿಸಿದೆ‌. ಜ್ಯೋಲ್ಸ್ನಾ ಪ್ಯಾನಿಕರ್ ಸಂಕಲನ ಹಾಗೂ ಜೋ ಪ್ಯಾನಿಕರ್ ಸಂಗೀತ ನಿರ್ದೇಶನ "ಫಾದರ್ಸ್ ಡೇ" ಚಿತ್ರಕ್ಕಿದೆ.

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ