– ರಾಘವೇಂದ್ರ ಅಡಿಗ ಎಚ್ಚೆನ್.
ಮೋಹಕತಾರೆ ರಮ್ಯಾ ಜೊತೆ ದೊಡ್ಮನೆ ಕುಡಿ ವಿನಯ್ ರಾಜ್‌ಕುಮಾರ್ ಜೊತೆ ಮಸ್ತ್ ಮಸ್ತ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ಹಾಗಿದ್ರೆ ರಮ್ಯಾ ಜೊತೆ ವಿನಯ್ ನಟಿಸ್ತಿದ್ದಾರಾ? ಇದು ಸಿನಿಮಾಗಾಗಿ ಮಾಡಿದ ಫೋಟೋಶೂಟಾ? ಎಂಬ ಪ್ರಶ್ನೆಗೆ ಉತ್ತರ ಸಿಂಪಲ್ ಇಲ್ಲ. ಮ್ಯಾಗಜಿನ್ ಒಂದಕ್ಕಾಗಿ ವಿನಯ್ ರಾಜ್ ಕುಮಾರ್ ಹಾಗೂ ರಮ್ಯಾ ಒಟ್ಟಿಗೆ ಕ್ಯಾಮೆರಾಗೆ ಫೋಸ್ ಕೊಟ್ಟಿದ್ದಾರೆ.
‘ಸ್ವಾಸ ಲೈಫ್’ ಮ್ಯಾಗಜಿನ್ಗಾಗಿ ರಮ್ಯಾ ಹಾಗೂ ವಿನಯ್ ರಾಜ್‌ಕುಮಾರ್ ಫೋಟೋಶೂಟ್ ಮಾಡಿಸಿದ್ದಾರೆ. ವಿನಯ್ ಅವರು ಮಸ್ತ್ ಆಗಿ ಕಾಣಿಸಿಕೊಂಡಿದ್ದಾರೆ. ಮೋಹಕತಾರೆ ಫೋಟೋಶೂಟ್ ನಲ್ಲಿ ಸಖತ್ ಆಗಿ ಕಾಣಿಸಿಕೊಂಡಿದ್ದು, ವಿನಯ್ ಕೂಡ ತಾವೇನೂ ಕಡಿಮೆ ಇಲ್ಲವೆಂಬಂತೆ ಮಿಂಚಿದ್ದಾರೆ.
ರಮ್ಯಾ ಸಿನಿಮಾರಂಗ ಪ್ರವೇಶಿಸಿದ್ದು, ರಾಜ್‌ಕುಮಾರ್ ಕುಟುಂಬದ ಬ್ಯಾನರ್ ಮೂಲಕ. ಅಭಿ ಸಿನಿಮಾದಲ್ಲಿ ಪುನೀತ್ ಜೊತೆ ಅವರು ನಾಯಕಿಯಾಗಿ ನಟಿಸಿದ್ದರು. ದೊಡ್ಮನೆ ಎಲ್ಲಾ ಸದಸ್ಯರ ಜೊತೆ ಆತ್ಮೀಯ ಒಡನಾಟ ಇಟ್ಟುಕೊಂಡಿದ್ದಾರೆ.
ರಮ್ಯಾ ಹಾಗೂ ವಿನಯ್ಗೆ ಮೊದಲಿನಿಂದಲೂ ಪರಿಚಯ ಇದೆ. ‘ಅಪ್ಪು’ ರೀ-ರಿಲೀಸ್ ಸಮಯದಲ್ಲಿ ವಿನಯ್ ಹಾಗೂ ರಮ್ಯಾ ಒಟ್ಟಿಗೆ ಸಿನಿಮಾ ವೀಕ್ಷಿಸಿದ್ದರು. ಅವಕಾಶ ಸಿಕ್ಕರೆ ವಿನಯ್ ಜೊತೆ ನಟಿಸ್ತೀನಿ ಎಂದು ಕೂಡ ಮೋಹಕ ತಾರೆ ಹೇಳಿದ್ದರು. ‘ಅಭಿ’ ಸಿನಿಮಾ ಸಮಯದಿಂದಲೂ ವಿನಯ್ ಅವರನ್ನು ರಮ್ಯಾ ನೋಡುತ್ತಿದ್ದಾರೆ. ಹಾಗಾಗಿ ಇಬ್ಬರ ನಡುವೆ ಆತ್ಮೀಯ ಒಡನಾಟವಿದೆ. ವಿನಯ್ ನಟನೆಯ ‘ಒಂದು ಸರಳ ಪ್ರೇಮಕಥೆ’ ಸಿನಿಮಾ ಸೆಟ್‌ಗೂ ರಮ್ಯಾ ವಿಸಿಟ್ ಮಾಡಿದ್ದರು.
‘ಸ್ಯಾಂಡಲ್‌ವುಡ್ ಕ್ವೀನ್’ ರಮ್ಯಾ ಅವರು ಚಿತ್ರರಂಗಕ್ಕೆ ಕಂಬ್ಯಾಕ್ ಬಗ್ಗೆ ಈಗಾಗಲೇ ಸಿಹಿಸುದ್ದಿ ಸಿಕ್ಕಿದೆ. 21 ವರ್ಷಗಳ ಬಳಿಕ ರಮ್ಯಾ ಅವರಿಗೆ ನಿರ್ದೇಶನ ಮಾಡಲು ಯೋಗರಾಜ್ ಭಟ್ ರೆಡಿ ಆಗುತ್ತಿದ್ದಾರೆ. 2004ರಲ್ಲಿ ತೆರೆಕಂಡಿದ್ದ ಸುದೀಪ್ ನಟನೆಯ ‘ರಂಗ ಎಸ್‌ಎಸ್‌ಎಲ್‌ಸಿ’ ಸಿನಿಮಾದಲ್ಲಿ ರಮ್ಯಾ ನಟಿಸಿದ್ದರು. ಅದು ಯೋಗರಾಜ್ ಭಟ್ ನಿರ್ದೇಶನ ಮಾಡಿದ್ದ 2ನೇ ಸಿನಿಮಾವಾಗಿತ್ತು. ಇದೀಗ ಮತ್ತೊಮ್ಮೆ ರಮ್ಯಾ ಜೊತೆ ಯೋಗರಾಜ್ ಭಟ್ ಸಿನಿಮಾ ಮಾಡುವ ಕುರಿತು ಮಾತುಕತೆ ಆಗುತ್ತಿದೆ.