ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆಯ ಡೆವಿಲ್ ಫಸ್ಟ್ ಸಾಂಗ್ ಇದಾಗಿದ್ದು, ಗಾಯಕ ಅನಿರುದ್ದ್ ಶಾಸ್ತ್ರಿ ಈ ಹಾಡಿಗೆ ಸಾಹಿತ್ಯ ಪೋಣಿಸಿದ್ದಾರೆ. ಇನ್ನು ದೀಪಕ್ ಬ್ಲೂ ಗಾಯನದಲ್ಲಿ ಅಷ್ಟೇ ಜೋಶ್ಫುಲ್ ಆಗಿ ಮೂಡಿಬಂದಿದೆ. ಅಂದಹಾಗೆ ರಾಬರ್ಟ್ ಸಿನಿಮಾ ಖ್ಯಾತಿಯ ಸಂತು ಮಾಸ್ಟರ್ ಕೊರಿಯೋಗ್ರಾಫಿ ಇರೋ ಈ ಹಾಡು ಹೀರೋ ಇಂಟ್ರಡಕ್ಷನ್ ಸಾಂಗ್ ಆಗಿದ್ದು, ಸಿಕ್ಕಾಪಟ್ಟೆ ಕಲರ್ಫುಲ್ ಹಾಗೂ ರಿಚ್ ಆಗಿ ತಯಾರಾಗಿದೆ.ನಿರ್ದೇಶಕ ಪ್ರಕಾಶ್ ವೀರ್ ಪತ್ನಿ ಅಶ್ವಿನಿ ಅವರೇ ದರ್ಶನ್ಗೆ ಕಾಸ್ಟ್ಯೂಮ್ಸ್ ಡಿಸೈನ್ ಮಾಡಿದ್ದ್ದುದಾರೆ. ಅಂದಹಾಗೆ ಇದು ಡೆವಿಲ್ ಚಿತ್ರದ ದರ್ಶನ್ ಇಂಟ್ರಡಕ್ಷನ್ ಸಾಂಗ್ ಆಗಿದ್ದು, ಮೊದಲಿನಿಂದ ಹಾಡಿನ ಕೊನೆಯವರೆಗೂ ಬಿಂದಾಸ್ ಸ್ಟೆಪ್ಸ್ ಹಾಕಿದ್ದಾರಂತೆ ದಚ್ಚು. ಸೆಟ್ಗೆ ಬಂದು ಆನ್ ಸ್ಪಾಟ್ನಲ್ಲೇ ಪ್ರಾಕ್ಟೀಸ್ ಮಾಡ್ತಿದ್ದ ದರ್ಶನ್, ಬಹಳ ದಿನಗಳ ನಂತ್ರ ಅದ್ಭುತವಾಗಿ ಕುಣಿದಿದ್ದಾರೆ. ಬೆನ್ನು ನೋವಿನ ಹೊರತಾಗಿಯೂ ಕೂಡ ಇಷ್ಟು ಜೋಶ್ನಿಂದ ಕುಣಿದಿರೋ ದಾಸ, ಒಮ್ಮೆ ನೋವಿನಿಂದ ಕೆಳಗೆ ಬಿದ್ದಿದ್ದೂ ಉಂಟಂತೆ.
ಫ್ಯಾನ್ಸ್ಗೆ ಈ ಸಾಂಗ್ ಥಿಯೇಟರ್ನಲ್ಲಿ ಹಬ್ಬದ ಫೀಲ್ ಕೊಡಲಿದ್ದು, ಶಿಳ್ಳೆ ಚಪ್ಪಾಳೆಯಿಂದ ಹುಚ್ಚೆದ್ದು ಕುಣಿಯೋದು ಗ್ಯಾರಂಟಿ. ಒಂದೂವರೆ ಕೋಟಿಯಷ್ಟು ಹಣ ಖರ್ಚು ಮಾಡಿ ಈ ಹಾಡನ್ನ ಸಿದ್ಧಗೊಳಿಸಿರೋ ನಿರ್ಮಾಪಕರ ಸಿನಿಮಾ ಪ್ಯಾಷನ್ ಪ್ರತಿ ಫ್ರೇಮ್ನಲ್ಲೂ ಎದ್ದು ಕಾಣುತ್ತೆ. ಇನ್ನೂ ಈ ಹಿಂದೆ ರಾಬರ್ಟ್ ಚಿತ್ರದ ಜೈ ಶ್ರೀರಾಮ್ ಹಾಗೂ ಬಾ ಬಾ ಬಾ ನಾ ರೆಡಿ ಸಾಂಗ್ ಕೊರಿಯೋಗ್ರಾಫಿ ಮಾಡಿದ್ದ ಸಂತು ಮಾಸ್ಟರ್, ಕ್ರಾಂತಿ ಚಿತ್ರದಲ್ಲೂ ದಚ್ಚು ಜೊತೆ ಕೆಲಸ ಮಾಡಿದ್ರು. ಇಲ್ಲಿ ಇದೊಂದೇ ಸಾಂಗ್ ಅಲ್ಲ, ಇನ್ನೂ ಮೂರು ಸಾಂಗ್ಸ್ಗೆ ಸ್ಟೆಪ್ಸ್ ಹಾಕಿಸಿದ್ದಾರೆ ಸಂತು.
ಡೆವಿಲ್ ಸಿನಿಮಾ ಇಲ್ಲಿಯವರೆಗೂ ಅಕ್ಟೋಬರ್ನಲ್ಲಿ ತೆರೆಗೆ ಬರಲಿದೆ ಎನ್ನಲಾಗ್ತಿತ್ತು. ಆದ್ರೀಗ ಸಾಂಗ್ ಜೊತೆ ರಿಲೀಸ್ ಡೇಟ್ ಕೂಡ ಲಾಕ್ ಮಾಡಿದೆ ಚಿತ್ರತಂಡ. ಇದೇ ಡಿಸೆಂಬರ್ 12ರಂದು ತಲೈವಾ ರಜನೀಕಾಂತ್ ಬರ್ತ್ ಡೇ ಪ್ರಯುಕ್ತ ಬೆಳ್ಳಿತೆರೆ ಬೆಳಗಲಿದೆ. ಅಂದಹಾಗೆ ಕಾಟೇರ ಸಿನಿಮಾ ಕೂಡ ಡಿಸೆಂಬರ್ 29ಕ್ಕೆ ಬಿಡುಗಡೆಗೊಂಡಿತ್ತು. ಡಿಸೆಂಬರ್ ಒಂಥರಾ ಚಿತ್ರರಂಗದ ಪಾಲಿಗೆ ಲಕ್ಕಿ ಮಂಥ್ ಆಗಿದ್ದು, ಡೆವಿಲ್ ನಿರ್ಮಾಪಕರಿಗೂ ವರದಾನವಾಗುತ್ತಾ ಅನ್ನೋದು ನಿರೀಕ್ಷಿಸಬೇಕಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ