ನಿರ್ದೇಶಕ ಕೆ.ಎಮ್. ಚೈತನ್ಯ …
2007ರಲ್ಲಿ ನಮ್ಮ “ಆ ದಿನಗಳು” ಚಿತ್ರದ ಶೆಟ್ಟಿ ಪಾತ್ರಕ್ಕೆ ಅನೇಕ ನಟರನ್ನ audition ಮಾಡಿದ್ವಿ. ಆದರೆ ಅಗ್ನಿ ಶ್ರೀಧರ್ ಅವರು ಯಾರನ್ನು ಒಪ್ಪಲಿಲ್ಲ. ನಿಜ ಜೀವನದಲ್ಲಿ ಆ ವ್ಯಕ್ತಿಯ ಪರಿಚಯ ಅವರಿಗಿತ್ತು. ಆದ್ದರಿಂದ ಆ ಪಾತ್ರಕ್ಕೆ ಒಂದು Animal energy ಬೇಕು. ಆತ ಬಹಳ unpredictable ಆಗಿರಬೇಕು ಎಂದು ಹೇಳುತ್ತಿದ್ದರು. ಆಗ ನಾನು ಶ್ರೀಧರ್ ಸರ್ ಅವರಿಗೆ ಹೇಳಿದೆ “ನನ್ನ ಸ್ನೇಹಿತರು ಒಬ್ಬರಿದ್ದಾರೆ. ಅವರು ನಟರಲ್ಲ. ಕಲಾ ನಿರ್ದೇಶಕರು. ಅವರು ನಿಮಗೆ ಈ ಪಾತ್ರಕ್ಕೆ ಸೂಕ್ತ ಅನಿಸಬಹುದು.”… 1998 ರಲ್ಲಿ ಗಿರೀಶ್ ಕಾರ್ನಾಡರು ನಿರ್ದೇಶಿಸಿದ “ಕಾನೂರು ಹೆಗ್ಗಡತಿ” ಚಿತ್ರಕ್ಕೆ ನಾನು ಸಹ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದಾಗ, ದಿನೇಶ್ ಮಂಗಳೂರ್ ಶಶಿ ಅಡಪ ಅವರಿಗೆ Art Assistant ಕೆಲಸ ಮಾಡುತ್ತಿದ್ದರು. ಕಾನೂರು ಹೆಗ್ಗಡತಿ ಚಿತ್ರೀಕರಣಕ್ಕಾಗಿ ಕಾರ್ನಾಡರು ಮೇಗರವಳ್ಳಿಯ ಬಳಿ ಒಂದು ತೊಟ್ಟಿಮನೆಯನ್ನು ಬಾಡಿಗೆಗೆ ತೊಗೊಂಡಿದ್ರು. ಕಾರ್ನಾಡರು, ಛಾಯಾಗ್ರಾಹಕರು ಎಸ್ ರಾಮಚಂದ್ರ ಸೇರಿದಂತೆ ಸುಮಾರು ಮೂರು ತಿಂಗಳ ಕಾಲ ನಾವೆಲ್ಲರೂ ಒಟ್ಟಿಗೆ ಆ ಮನೆಯಲ್ಲಿ ಇದ್ವಿ. ಪರಸ್ಪರ ಒಬ್ಬರಿಗೊಬ್ಬರು ಸಹಾಯ ಮಾಡುತ್ತ, ಒಟ್ಟಿಗೆ ಕೆಲಸ ಮಾಡುತ್ತ, ನಮ್ಮ ತಂಡ ಒಂದು ಕುಟುಂಬದ ಹಾಗಿತ್ತು. ದಿನೇಶ್ ಎಲ್ಲರನ್ನೂ ಕೀಟಲೆ ಮಾಡುತ್ತ, ನಗಿಸುತ್ತ, ಇಡೀ set ಲವಲಕಿಯಿಂದ ಇರುವಂತೆ ನೋಡಿಕೊಳ್ಳುತ್ತಿದ್ದರು. ದಿನೇಶ್ ಅವರನ್ನ ಶ್ರೀಧರ್ ಸರ್ ಅವರಿಗೆ ಪರಿಚಯ ಮಾಡಿಸಿದೆ. ಅವರನ್ನು audition ಕೂಡ ಮಾಡಲಿಲ್ಲ. ಕೆಲವೇ ಕ್ಷಣಗಳಲ್ಲಿ ಇವರೇ ಈ ಪಾತ್ರಕ್ಕೆ ಸರಿ ಅಂತ ಶ್ರೀಧರ್ ಸರ್ ಒಪ್ಪಿಕೊಂಡರು. ಆ ಪಾತ್ರದಲ್ಲಿ ಎಲ್ಲರ ಗಮನ ಸೆಳೆಡ ಗೆಳೆಯ ದಿನೇಶ್ ಮಂಗಳೂರು ಈಗ ನಮ್ಮನ್ನು ಅಗಲಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ.