- ರಾಘವೇಂದ್ರ ಅಡಿಗ ಎಚ್ಚೆನ್.

ಕೆಡಿ ಚಂದನವನದ ಬಹುನಿರೀಕ್ಷಿತ ಚಿತ್ರ. ಧ್ರುವ ಸರ್ಜಾ ಮತ್ತು ಪ್ರೇಮ್ ಕಾಂಬಿನೇಷನ್‌ನ ಈ ಚಿತ್ರ ಹಾಡಿನ ಮೂಲಕ ಸಕತ್ ಸೌಂಡ್ ಕೂಡ ಮಾಡಿದೆ. ಮತ್ತೊಂದೆಡೆ ದೊಡ್ಡ ಮಟ್ಟಿನ ವಿವಾದದಿಂದಲೂ ಸುದ್ದಿ ಮಾಡಿದೆ. ಇದೀಗ ಸಿನಿಮಾದ ಟ್ರೇಲರ್ ಬಿಡುಗಡೆ ಬಗ್ಗೆ ಚಿತ್ರತಂಡ ಬಿಗ್ ಅಪ್ಡೇಟ್ ಕೊಟ್ಟಿದೆ.
ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಚಿತ್ರದ ಟ್ರೇಲರ್ ಇಂದು(ಎ.22) ಬಿಡುಗಡೆಯಾಗಲಿದೆ. ಟ್ರೇಲರ್ ಬಿಡುಗಡೆ ಕುರಿತ ಪೋಸ್ಟರ್ ಹಂಚಿಕೊಂಡಿರುವ ಚಿತ್ರತಂಡ, ದಾರಿ ಎಂದಿಗೂ ಮರೆಯದ ಹೆಸರನ್ನು ಪ್ರತಿಯೊಂದು ಕಾಲವೂ ಹೊಂದಿದೆ ಎಂಬುದಾಗಿ ಕ್ಯಾಪ್ಶನ್ ಕೊಟ್ಟಿದೆ.

devil 1

ಅಂದಹಾಗೆ, ಕೆಡಿ 2026 ರ ಎಪ್ರಿಲ್ 30 ರಂದು ತೆರೆಗಪ್ಪಳಿಸಲಿದೆ. ಕೆಡಿ ಕನ್ನಡ ಸೇರಿದಂತೆ ಹಿಂದೆ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ದೊಡ್ಡ ತಾರಾಬಳಗ ಹೊಂದಿರುವ ಪ್ರೇಮ್ ನಿರ್ದೇಶನದ ಈ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಧ್ರುವ ಸರ್ಜಾ ಜೊತೆ ರೀಷ್ಮಾ ನಾಣಯ್ಯ, ರವಿಚಂದ್ರನ್, ರಮೇಶ್ ಅರವಿಂದ್, ಸಂಜಯ್ ದತ್, ಶಿಲ್ಪಾ ಶೆಟ್ಟಿ, ಮೊದಲಾದವರು ಪಾತ್ರವಾಗಿದ್ದಾರೆ. ಅಂದಹಾಗೆ, ಕಿಚ್ಚ ಸುದೀಪ್ ಕೂಡ ಇದ್ದಾರೆ ಎನ್ನಲಾಗಿದೆ. ಕೆವಿಎನ್ ಪ್ರೊಡಕ್ಷನ್ ನಿರ್ಮಿಸಿರುವ ಕೆಡಿ ನೈಜ ಘಟನೆಯಾಧರಿತ ಚಿತ್ರ. ಗ್ಯಾಂಗ್ ಸ್ಟರ್‌ಗಳ ಕಥೆ ಹೊಂದಿದ್ದು, ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ