- ರಾಘವೇಂದ್ರ ಅಡಿಗ ಎಚ್ಚೆನ್.
ಪ್ಯಾನ್ ಇಂಡಿಯಾ ಮಟ್ಟದಲ್ಲಿ ತನ್ನದೇ ಆದ ಗುರುತು ನಿರ್ಮಿಸಿಕೊಂಡಿರುವ ರಿಷಬ್ ಶೆಟ್ಟಿ, ‘ಕಾಂತಾರ: ಚಾಪ್ಟರ್ 1’ ಮೂಲಕ ಮತ್ತೊಂದು ಮೆಟ್ಟಿಲೇರಿದರೂ ಕನ್ನಡ ಚಿತ್ರರಂಗದ ಬೆಂಬಲ ಮಾತ್ರ ಕೈ ಬಿಡಿಲ್ಲ. ತಮ್ಮ ಸಂಪ್ರದಾಯವನ್ನು ಮುಂದುವರಿಸಿಕೊಂಡಿರುವ ರಿಷಬ್, ಈಗ ದರ್ಶನ್ ನಟನೆಯ ‘ಡೆವಿಲ್’ ಸಿನಿಮಾಗಿಗೂ ಹಾರೈಕೆ ತಿಳಿಸಿ ಬೆಂಬಲ ನೀಡಿದ್ದಾರೆ.
ಮಿಲನ ಪ್ರಕಾಶ್ ನಿರ್ದೇಶನದ ‘ಡೆವಿಲ್’ ಡಿಸೆಂಬರ್ 11ರಂದು ವಿಶ್ವಾದ್ಯಂತ ಬಿಡುಗಡೆಯಾಗುತ್ತಿದೆ. ದರ್ಶನ್ ಸದಾ ಕನ್ನಡಕ್ಕೆ ನಿಂತು ಕೆಲಸ ಮಾಡುವ ಕಲಾವಿದ ಎಂಬ ಕಾರಣದಿಂದ ಈ ಸಿನಿಮಾ ಕನ್ನಡದಲ್ಲೇ ಮಾತ್ರ ತೆರೆಗೆ ಬರುತ್ತಿದೆ. ಈ ಹಿನ್ನೆಲೆ ರಿಷಬ್ ಶೆಟ್ಟಿ ತಮ್ಮ ಶುಭಾಶಯವನ್ನು ಹಂಚಿಕೊಂಡಿದ್ದಾರೆ.
“ದರ್ಶನ್ ಸರ್ ಮತ್ತು ಡೆವಿಲ್ ತಂಡಕ್ಕೆ ಹಾರ್ದಿಕ ಹಾರೈಕೆಗಳು. ಸಿನಿಮಾ ಬ್ಲಾಕ್ಬಸ್ಟರ್ ಆಗಲಿ. ದೊಡ್ಡ ಪರದೆಯಲ್ಲಿ ಅಬ್ಬರಿಸಲಿ” ಎಂದು ರಿಷಬ್ ಟ್ವೀಟ್ ಮಾಡಿದ್ದು, ಈ ಬ್ಯಾನರ್ ಅನ್ನು ದರ್ಶನ್ ಅಭಿಮಾನಿಗಳು ದೊಡ್ಡ ಮಟ್ಟದಲ್ಲಿ ರೀಟ್ವೀಟ್ ಮಾಡುತ್ತಿದ್ದಾರೆ.
‘ಡೆವಿಲ್’ ಸಂಗೀತ ಸಂಯೋಜನೆ ಅಜನೀಶ್ ಲೋಕನಾಥ್ ಅವರದ್ದು. ‘ಕಾಂತಾರ’ ಮೂಲಕ ರಿಷಬ್–ಅಜನೀಶ್ ಜೋಡಿ ಈಗಾಗಲೇ ಗಮನಸೆಳೆದ ಕಾರಣ, ರಿಷಬ್ ಈ ಸಿನಿಮಾಗಿಗೂ ವಿಶೇಷವಾಗಿ ಟ್ಯಾಗ್ ಮಾಡಿ ಶುಭಕೋರಿದ್ದಾರೆ.
ದರ್ಶನ್–ಅರ್ಚನಾ ಜೋಡಿ ನಟಿಸಿರುವ ಈ ಸಿನಿಮಾ ನೂರಾರು ಸ್ಕ್ರೀನ್‌ಗಳಲ್ಲಿ ಅದ್ದೂರಿಯಾಗಿ ತೆರೆಗೆ ಬರಲಿದ್ದು, ಟ್ರೇಲರ್‌ಗೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಗಿಲ್ಲಿ ನಟ, ಅಚ್ಯುತ್ ಕುಮಾರ್ ಸೇರಿದಂತೆ ಹಲವಾರು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ನಿರ್ದೇಶಕ ಮಿಲನ ಪ್ರಕಾಶ್ ಈ ಚಿತ್ರದ ನಿರ್ಮಾಪಕರೂ ಆಗಿದ್ದಾರೆ.





