- ರಾಘವೇಂದ್ರ ಅಡಿಗ ಎಚ್ಚೆನ್.

ಕನ್ನಡ ಚಿತ್ರರಂಗದಲ್ಲೀಗ ತ್ರಿಬಲ್ ಧಮಾಕಾ! ಹೌದು ಈ ವರ್ಷ ಮೊದಲಾರ್ಧ  ಡಲ್ಲಾಗಿದ್ದ ಚಿತ್ರರಂಗಕ್ಕೀಗ  ಹೌಸ್‌‌ಫುಲ್ ಖುಷಿಯ ಸಮಯ. ಸೋಲಿಂದ ಕಂಗೆಟ್ಟಿದ್ದ ಸಿನಿಮಾರಂಗಕ್ಕೆ ಬ್ಯಾಕ್ ಟೂ ಬ್ಯಾಕ್ ಮೂರು ಸಿನಿಮಾಗಳು ಹಿಟ್ ಆಗಿರುವುದು ನಿಜಕ್ಕೂ ಸಂಜೀವಿನಿ ಸಿಕ್ಕಂತಾಗಿದೆ. 2025ರ  ಏಳು ತಿಂಗಳುಗಳು ಮುಗಿದಿದ್ದು ಈ ಅವಧಿಯಲ್ಲಿ  150ಕ್ಕೂ ಅಧಿಕ ಕನ್ನಡ ಸಿನಿಮಾಗಳು ತೆರೆಗೆ ಬಂದಿದೆ. ಆದರೆ ಇವುಗಳ ಪೈಕಿ ಗೆದ್ದಂತಹಾ ಚಿತ್ರಗಳೆಷ್ಟು ಎಂದು ಕೇಳಿದ್ದರೆ ನಿಜಕ್ಕೂ ಆತಂಕಕಾರಿ ಉತ್ತರ ಸಿಕ್ಕುತ್ತದೆ.  ಶರಣ್‌ರ ಛೂ ಮಂತರ್, ಅಜಯ್ ರಾವ್ ಅವರ ’ಯುದ್ಧಕಾಂಡ ೨’, ಸತ್ಯ ಪ್ರಕಾಶ್- ಬೃಂದಾ ಆಚಾರ್ಯ ಕಾಂಬೋನ ಎಕ್ಸ್ ಅಂಡ್ ವೈ, ವಿನೋದ್ ಪ್ರಭಾಕರ್‌ ನಟನೆಯ ಮಾದೇವ ಹಾಗೂ ರಂಗಾಯಣ ರಘುರ ಅಜ್ಞಾತವಾಸಿ ಇವುಗಳು ತಕ್ಕಮಟ್ಟಿಗೆ ಜನಪ್ರಿಯತೆ ಗಳಿಸಿದ್ದವಾದರೂ ನಿರ್ಮಾಪಕರಿಗೆ ನಿರೀಕ್ಷಿತ ಮಟ್ಟದಲ್ಲಿ  ಜೇಬು ತುಂಬಿಸಲಿಲ್ಲ.

dhamaka 1

ಆದರೆ ಈ ತಿಂಗಳಲ್ಲಿ ತೆರೆಗೆ ಬಂದ ಯುವ ರಾಜ್ ಕುಮಾರ್ ಎಕ್ಕ , ಕಿರೀಟಿ- ಶ್ರೀಲೀಲಾ ಜೋಡಿಯ ಜೂನಿಯರ್, ರಾಜ್ ಬಿ. ಶೆಟ್ಟಿಯವರ  ಸು ಫ್ರಮ್ ಸೋ ಹೌಸ್‌ಫುಲ್ ಮೂಲಕ ಚಿತ್ರರಂಗಕ್ಕೆ ಮರುಜೀವ ಬಂದಂತಾಗಿದೆ. ಜನರು ಥಿಯೇಟರ್‌ಗಳಲ್ಲಿ ತುಂಬುತ್ತಿದ್ದಾರೆ. ಟೆಕೆಟ್ಸ್ ಸಿಗದೆ ಒದ್ದಾಡುತ್ತಿದ್ದಾರೆ. ಸ್ಟಾರ್‌ಡಮ್, ಮೇಕಿಂಗ್, ಬಜೆಟ್ ಯಾವುದೂ ವರ್ಕ್‌ ಆಗುತ್ತಿಲ್ಲ. ಕಂಟೆಂಟ್ ಒಂದೇ ಕಿಂಗ್. ಕಥೆ ಚೆನ್ನಾಗಿದ್ದರೆ ಜನ ನೋಡುತ್ತಾರೆ ಎನ್ನುವುದು ಮತ್ತೆ ಸಾಬೀತಾಗಿದೆ.
ರಾಮ ಶಾಮ ಭಾಮ ನಂತರದಲ್ಲಿ ಪ್ರೇಕ್ಷಕರನ್ನು ಅಷ್ಟರ ಮಟ್ಟಿಗೆ ಸೆಳೆದ ಕಾಮಿಡಿ ಜಾನರ್ ಚಿತ್ರ ಸು ಫ್ರಮ್ ಸೋ . ಇನ್ನು ಎಕ್ಕ ಕೂಡ ಯುವರಾಜ್‌ ಕುಮಾರ್ ನಟನೆಯಲ್ಲಿ ಮಾಸ್ ಜೊತೆ ಫ್ಯಾಮಿಲಿ ಆಡಿಯೆನ್ಸ್‌ಗೆ  ಇಷ್ಟವಾಗಿದೆ. ಜನಾರ್ದನ್ ರೆಡ್ಡಿ ಮಗ ಕಿರೀಟಿ ಚೊಚ್ಚಲ ಚಿತ್ರ ಜೂನಿಯರ್ ಸಹ ಕನ್ನಡದ ಜೊತೆ ತೆಲುಗಿನಲ್ಲಿ ಭರವಸೆ ಹುಟ್ಟು ಹಕಿದೆ.
ಈ ಮೂರೂ ಚಿತ್ರಗಳಿಂದ ಸ್ಯಾಂಡಲ್‌ವುಡ್ ಬಾಕ್ಸ್ ಆಫೀಸ್ ಸಖತ್ ಸದ್ದು ಮಾಡುತ್ತಿದ್ದು ಇನ್ನುಳಿದ ಸಮಯದಲ್ಲಿ ಮತ್ತಶ್ಃಟು ಉತ್ತಮ ಚಿತ್ರಗಳು ಬರಲಿದೆ ಎನ್ನುವುದು ಪ್ರೇಕ್ಷಕರ ನಿರೀಕ್ಷೆಯಾಗಿದೆ.

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ