- ರಾಘವೇಂದ್ರ ಅಡಿಗ ಎಚ್ಚೆನ್.

ಟೀಮ್ ಇಂಡಿಯಾ ಸ್ಟಾರ್ ಕ್ರಿಕೆಟಿಗ ಹಾಗೂ ಆರ್‌ಸಿಬಿ ಆಟಗಾರ ವಿರಾಟ್ ಕೊಹ್ಲಿ ಅವರಿಗೆ ‘ಧುರಂಧರ್-2’ ಚಿತ್ರ ತುಂಬಾ ಇಷ್ಟವಾಗಿದ್ದು, ಇನ್‌ಸ್ಟಾಗ್ರಾಮ್‌ನಲ್ಲಿ ಚಿತ್ರವನ್ನು ಕೊಂಡಾಡಿ ಪೋಸ್ಟ್ ಮಾಡಿದ್ದಾರೆ. ಇದು ಭಾರತದಲ್ಲಿ ಇದುವರೆಗೆ ತಯಾರಾದ ಅತ್ಯುತ್ತಮ ಚಿತ್ರ ಎಂದು  ಬಣ್ಣಿಸಿದ್ದಾರೆ.
ಸದ್ಯ ಐಪಿಎಲ್ 2026ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಪರ ಆಡುತ್ತಿರುವ ಕೊಹ್ಲಿ, ಬಿಡುವಿನ ವೇಳೆಯಲ್ಲಿ ಪತ್ನಿ ಅನುಷ್ಕಾ ಶರ್ಮಾ ಅವರೊಂದಿಗೆ ಸಿನಿಮಾ ವೀಕ್ಷಿಸಿದ್ದಾರೆ. ಈ ಬಗ್ಗೆ ಇನ್‌ಸ್ಟಾಗ್ರಾಮ್ ಸ್ಟೋರಿ ಹಂಚಿಕೊಂಡಿರುವ ಅವರು, ಇಂದು ಸಿನಿಮಾ ನೋಡಿದೆ. ಭಾರತದಲ್ಲಿ ಇಂತಹ ಚಿತ್ರವನ್ನು ಹಿಂದೆಂದೂ ನೋಡಿಲ್ಲ ಎಂದು ಖಂಡಿತವಾಗಿ ಹೇಳಬಲ್ಲೆ. ಈ ಚಿತ್ರವು ಪ್ರತಿಯೊಂದು ಭಾವನೆಯನ್ನು ಬಡಿದೆಬ್ಬಿಸಿದೆ. ಸುಮಾರು 4 ಗಂಟೆಗಳ ಕಾಲ ನಾನು ಒಮ್ಮೆಯೂ ನನ್ನ ಸೀಟಿನಿಂದ ಎದ್ದಿಲ್ಲ ಅಂತಾ ಬರೆದುಕೊಂಡಿದ್ದಾರೆ.

dhurandhars 1

ಚಿತ್ರದ ನಿರ್ದೇಶಕ ಆದಿತ್ಯ ಧರ್ ಅವರ ಪ್ರತಿಭೆಯನ್ನು ಶ್ಲಾಘಿಸಿರುವ ಕೊಹ್ಲಿ, ಚಿತ್ರದ ಪ್ರತಿಯೊಬ್ಬ ನಟರ ಅಭಿನಯವನ್ನೂ ಮೆಚ್ಚಿದ್ದಾರೆ. ಅದರಲ್ಲೂ ವಿಶೇಷವಾಗಿ ನಟ ರಣವೀರ್ ಸಿಂಗ್ ಅವರ ಬಗ್ಗೆ ಬರೆಯುತ್ತಾ, ಚಿತ್ರದಲ್ಲಿನ ಎಲ್ಲಾ ಪಾತ್ರಗಳು ಅದ್ಭುತವಾಗಿವೆ. ಆದರೆ ರಣವೀರ್ ಸಿಂಗ್ ಅವರೇ, ಈ ಸಿನಿಮಾದ ನಂತರ ನೀವು ಒಂದು ಬೇರೆಯದ್ದೇ ಹಂತಕ್ಕೆ ತಲುಪಿದ್ದೀರಿ. ನಿಮ್ಮ ಪರ್ಫಾರ್ಮೆನ್ಸ್ ಅತ್ಯಂತ ಅದ್ಭುತವಾಗಿತ್ತು ಎಂದು ಹೊಗಳಿದ್ದಾರೆ. ವಿರಾಟ್ ಪತ್ನಿ ಅನುಷ್ಕಾ ಶರ್ಮಾ ಕೂಡ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಧುರಂಧರ್-2’ ಸಿನಿಮಾ ಸದ್ಯ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದ್ದು, ಹಳೆಯ ಹಲವು ದಾಖಲೆಗಳನ್ನು ಮುರಿಯುತ್ತಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ