ಬಹುಭಾಷೆಯಲ್ಲಿ ಕನ್ನಡ ಪ್ರತಿಭೆ ದೀಕ್ಷಿತ್ ಶೆಟ್ಟಿ ಯಶೋಗಾಥೆ - ರಾಘವೇಂದ್ರ ಅಡಿಗ ಎಚ್ಚೆನ್.
ದೀಕ್ಷಿತ್ ಶೆಟ್ಟಿ ದಿಯಾ ಸಿನಿಮಾದಿಂದ ಕನ್ನಡ ನೆಲದಲ್ಲಿ ಭರವಸೆ ಹುಟ್ಟಿಸಿದ ನಟ.. ತೆಲುಗಿನ ದಸರಾ ಮೂಲಕ ಇಡೀ ಸೌತ್ ಸಿನಿಮಾ ದುನಿಯಾದಲ್ಲಿ ಸೆನ್ಸೇಷನ್ ಸೃಷಿಸಿದ ನಟ...ನಟನೆಯನ್ನೇ ಉಸಿರಾಗಿಸಿಕೊಂಡಿರೋ ಸಿನಿಮಾವನ್ನೇ ಬದುಕನ್ನಾಗಿಸಿಕೊಂಡಿರೋ ದೀಕ್ಷಿತ್ ಶೆಟ್ಟಿಯ ಸಿನಿಮೋತ್ಸಾಹದ ಕನಸು... ಬಹುಭಾಷೆಯಲ್ಲಿ ಚಾಚಿ ಕೊಂಡಿದೆ...
ಕತೆಗೆ ಮೊದಲ ಆದ್ಯತೆ ಉತ್ತಮ ತಂಡಗಳೊಂದಿಗೆ ಕೆಲಸ ಮಾಡೋ ಆಶಯದಲ್ಲಿ ದೀಕ್ಷಿತ್ ಆಯ್ಕೆಗಳು ನಿಧಾನವಾದ್ರೂ ತುಂಬಾ ಗಟ್ಟಿಯಾಗಿ ನೆಲೆ ನಿಲ್ಲೂ ಪ್ರೇಕ್ಷಕರ ಮನಗೆಲ್ಲೋವಂತಹ ಪ್ರಯೋಗಗಳೇ ಆಗಿರುತ್ತವೆ.. ಅದಕ್ಕೆ ಈಗಾಗ್ಲೇ ಇವ್ರು ಮಾಡಿರೋ ಪ್ರಯತ್ನಗಳೇ ಸಾಕ್ಷಿ...
ಇತ್ತಿಚೆಗಿನ ಬ್ಲಿಂಕ್, ಕೆ.ಟಿ.ಎಂ ಕನ್ನಡ ಪ್ರೇಕ್ಷಕರ ಮನ ಗೆದ್ದವು.. ಇನ್ನೂ ತೆಲುಗಿನಲ್ಲಿ ಮುಗ್ಗುರು ಮೊನಗಾಳ್ಳು ಸಿನಿಮಾದ ಪಾತ್ರದಿಂದ ಗಮನ ಸೆಳೆದಿದ್ದ ದೀಕ್ಷಿತ್ ಅಭಿನಯದಲ್ಲಿ, ತೆಲುಗಿನಲ್ಲಿ KJQ ಮತ್ತು ರಷ್ಮಿಕಾ ಮಂದಣ್ಣ ಜೋಡಿಯಲ್ಲಿ ದಿ ಗರ್ಲ್ ಫ್ರೆಂಡ್ ಚಿತ್ರಗಳು ರಿಲೀಸ್ಗೆ ರೆಡಿಯಾಗಿದ್ದು, ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ ಬರಲು ಸಿದ್ದವಾಗ್ತಿವೆ.
ಜೊತೆಗೆ ತಮಿಳು ಹಾಗೂ ಮಲಯಾಳಂನ ಸಿನಿಮಾಗಳೂ ಸೆಟ್ಟೇರಿವೆ. ಈ ನಡುವೆ ಬ್ಲಿಂಕ್ ಡೈರೆಕ್ಟರ್ ಜೊತೆಗೆ ಮತ್ತೊಂದು ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ ದೀಕ್ಷಿತ್ ಶೆಟ್ಟಿ.
ಈ ನಡುವೆ ಇವರು ಅಭಿನಯದ ಮೊಟ್ಟ ಮೊದಲ ವೆಬ್ ಸೀರಿಸ್ ರಿಲೀಸ್ ಆಗಿದೆ. Touch me Not ಅನ್ನೋ ತೆಲುಗು ಮೂಲದ ವೆಬ್ ಸೀರಿಸ್ ಇತ್ತೀಚೆಗೆ ಜಿಯೋ ಹಾಟ್ ಸ್ಟಾರ್ ನಲ್ಲಿ ರಿಲೀಸ್ ಆಗಿದೆ. ಇದ್ರಲ್ಲಿ ದೀಕ್ಷಿತ್ ಕೂತೂಹಲ ಭರಿತ ಯುವಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ವೃತ್ತಿ ಬದುಕಿನಲ್ಲಿ ಸಿಕ್ಕಾಪಟ್ಟೆ ವಿವಿಧತೆಯನ್ನ ಬಯಸೋ ದೀಕ್ಷಿತ್, ಈ ವೆಬ್ ಸರಣಿಯಲ್ಲಿ ಪ್ರಮುಖ ಪಾತ್ರಧಾರಿಯಾಗಿದ್ದು, ಸರಣಿ ನೋಡಿದವ್ರು ಈಗಾಗ್ಲೇ ಕೊಂಡಾಡಲು ಆರಂಭಿಸಿದ್ದಾರೆ..
ಪಾತ್ರದಿಂದ ಪಾತ್ರಕ್ಕೆ ಸಿನಿಮಾ ಬಯಸೋ ಹಾಗೇ ದೈಹಿಕವಾಗಿ ಬದಲಾಗೋ ದೀಕ್ಷಿತ್ ಈ ವೆಬ್ ಸರಣಿಗಾಗಿ ಹರೆಯದ ಹುಡುಗನಂತಾಗಲೂ ಸಣ್ಣ ಆಗಿದ್ದರು... ಇಡೀ ಸರಣಿಯಲ್ಲಿ ದೀಕ್ಷಿತ್ ಎಳೆಯ ಹುಡುಗನಾಗಿ ಕಂಡಿದ್ದಾರೆ..
ದೀಕ್ಷಿತ್ ಈ ಹಿಂದಿನ ಸಿನಿಮಾಗಳನ್ನ ನೋಡಿದ್ದಕ್ಕೂ ಈ ಸರಣಿಯಲ್ಲಿ ಇವರ ಚಹರೆ ತೀರಾ ಬದಲಾಗಿದೆ.. ಟಚ್ ಮಿ ನಾಟ್ ವೆಬ್ ಸರಣಿಯಲ್ಲಿ ಇದು ಹೈಲೈಟ್ ಆಗಿ ಕಾಣ್ತಿದೆ.
ತೆಲುಗಿನಲ್ಲಿ ಮನೆ ಮಗನಂತೆ ಜನಪ್ರಿಯತೆಯನ್ನ ಗಳಿಸಿರೋ ದೀಕ್ಷಿತ್, ಈ ಸರಣಿಯಿಂದ ಎಲ್ಲಾ ಭಾಷೆಯ ಪ್ರೇಕ್ಷಕರಿಗೂ ಇನ್ನೂ
ಹತ್ತಿರವಾಗಿದ್ದಾರೆ..
ಸದ್ಯ ದೀಕ್ಷಿತ್ ಶೆಟ್ಟಿಯ ಕೆಲಸದ ನೀತಿ.. ಹೋಗ್ತಿರೋ ರೀತಿ ನೋಡ್ತಿದ್ರೆ...ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಸುಧೀರ್ಘವಾಗಿ ಬೆಳಗೋ ನಕ್ಷತ್ರದಂತೆ ಕಾಣ್ತಿದ್ದಾರೆ..