ಚಿತ್ರ : ದೊಡ್ಮನ್ಸ
ನಿರ್ಮಾಣ : ವೇದಿಕ್ ಕಾಸ್ಮೋಸ್
ನಿರ್ದೇಶನ : ಶರತ್ ಕೃಷ್ಣ ಸಂಗೀತ : ಶ್ರೀಧರ್ ಕಶ್ಯಪ್, ಪೌಲ್ ಅಲೆಕ್ಸ್ ಛಾಯಾಗ್ರಹಣ : ಆನಂದ್ ಇಳಿಯರಾಜ
ತಾರಾಗಣ : ಶರತ್ ಕೃಷ್ಣ, ರೇಷ್ಮಾ ಲಿಂಗರಾಜಪ್ಪ , ಶಿಲ್ಪಾ ಶಿವಕುಮಾರ್ , ಬಾಲ ರಾಜ್ವಾಡಿ, ಹುಲಿ ಕಾರ್ತಿಕ್ ಹಾಗೂ ಮುಂತಾದವರು
ರೇಟಿಂಗ್ : 3/5
-
ರಾಘವೇಂದ್ರ ಅಡಿಗ ಎಚ್ಚೆನ್.

ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಹೊಸ ಆಕ್ಷನ್‌ ಎಂಟರ್‌ಟೈನರ್‌ ಸೇರ್ಪಡೆಯಾಗಲು ಸಜ್ಜಾಗಿದೆ *"ದೊಡ್ಮನ್ಸ" ಸಿನಿಮಾ ಇಂದು( ಜೂನ್ 19ರಂದು )ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಈ ಚಿತ್ರದ ವಿಶೇಷವೆಂದರೆ, ಶರತ್‌ ಕೃಷ್ಣ ಅವರು ನಿರ್ದೇಶನದ ಜೊತೆಗೆ ನಾಯಕ ನಟರಾಗಿಯೂ ಕಾಣಿಸಿಕೊಂಡಿದ್ದಾರೆ.  ಚಿತ್ರದಲ್ಲಿ ರೇಷ್ಮಾ ಮತ್ತು ಶಿಲ್ಪಾ ನಾಯಕಿಯರಾಗಿ ಅಭಿನಯಿಸಿದ್ದಾರೆ. ಜೊತೆಗೆ ಬಲ ರಾಜ್ವಾಡಿ, ಹುಲಿ ಕಾರ್ತಿಕ್ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. "ದುಡ್ಡು ಇರುವವನೇ ದೊಡ್ಡ ಮನುಷ್ಯ ಅಲ್ಲ, ದೊಡ್ಡ ಮನಸ್ಸು ಇರುವವನೇ ನಿಜವಾದ ದೊಡ್ಡ ಮನುಷ್ಯ" ಎಂಬ ಸಂದೇಶವನ್ನು ಮನರಂಜನೆಯೊಂದಿಗೆ ಹೇಳುವ ಪ್ರಯತ್ನ ಈ ಸಿನಿಮಾದಲ್ಲಿದೆ  ಇನ್ನು ಚಿತ್ರ ಹೇಗಿದೆ ಎಂದು ತಿಳಿಯಲು ಮುಂದೆ ಓದಿ.
ಅವನು ತಂದೆ ತಾಯಿ ಇಲ್ಲದ ಅನಾಥ ಹುಡುಗ, ಶಿವು (ಶರತ್ ಕೃಷ್ಣ) ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿರುತ್ತಾನೆ.  ಗೆಳೆಯ (ಹುಲಿ ಕಾರ್ತಿಕ್) ಹಾಗೂ ನಿರ್ದೇಶಕನಾಗಲು ಶ್ರಮಪಡುವ ದೇವ್ ಹಾಗೂ ಆತನ ಸ್ನೇಹಿತರ ಜೊತೆ ಒಡನಾಟದ ಬದುಕು.ಅವನದು.  ಬಡ ಕುಟುಂಬದ ಹುಡುಗಿ ಸ್ನೇಹ ತಾನು ಸಿನಿಮಾ ನಟಿಯಾಗಲು ಹೋಗಿ ಎದುರಿಸುವ ಸಮಸ್ಯೆಯಿಂದ ಕಂಗಾಲಾಗುತ್ತಾಳೆ. ಆಗ ಅವಳಿಗೆ ಶಿವು ಸಹಾಯ ನೀಡಲು ಮುಂದಾಗುತ್ತಾನೆ. ಅವರಿಬ್ಬರಲ್ಲಿ ಇದು ಸ್ನೇಹ, ಪ್ರೀತಿಗೆ ಕಾರಣವಾಗುತ್ತದೆ.  ನಿರ್ದೇಶಕ ದೇವ್ ಗೆ ನಿರ್ಮಾಪಕ (ಬಾಲ ರಾಜ್ವಾಡಿ) ಸಿಗುತ್ತಿದ್ದಂತೆ ತನ್ನ ಗೆಳೆಯ ಶಿವು ಹೀರೋ ಹಾಗೂ ಆತನ ಪ್ರೇಯಸಿ ನಾಯಕಿಯಾಗಿ ಪಾದಾರ್ಪಣೆ ಮಾಡಿಸುವುದಕ್ಕೆ ನಿರ್ಧರಿಸುತ್ತಾನೆ. ಆದರೆ ನಿರ್ಮಾಪಕರಿಗೆ ಈ ನಿರ್ಧಾರ ಒಪ್ಪುವುದಿಲ್ಲ. ಇದರ ಹಿಂದೆ ಶಿವು ಫ್ಲಾಶ್ ಬ್ಯಾಕ್ ಕತೆಯು ತೆರೆದುಕೊಳ್ಳುತ್ತದೆ.  ಶಿವು ಯಾರು…

dodmansa

ಅವನ ಕನಸು ಏನು… ಸ್ನೇಹ ಹೀರೋಯಿನ್ ಆಗ್ತಾಳ… ನಿರ್ದೇಶಕ ಸಿನಿಮಾ ಮಾಡ್ತಾನ…. ಕ್ಲೈಮಾಕ್ಸ್ ಉತ್ತರ ಏನು… ಇದೆಲ್ಲದಕ್ಕೂ ಉತ್ತರ ಒಮ್ಮೆ ನೀವು ಚಿತ್ರ ನೋಡಬೇಕು.
ಒಂದು ರೀತಿ ಸಿನಿಮಾದಲ್ಲೊಂದು ಸಿನಿಮಾ ಬದುಕಿನ ಕನಸು ಕಾಣುವ ಯುವಕ ಯುವತಿಯರ ಬದುಕು ಬವಣೆಯ ಕಥೆಯಾಗಿದ್ದು , ಸ್ನೇಹ , ಪ್ರೀತಿ , ನಂಬಿಕೆ , ಗೆಳೆತನ , ಸಹಕಾರ , ಸಮಸ್ಯೆಗೆ ಸ್ಪಂದಿಸುವ ಆಟೋ ಚಾಲಕರ ಮನಸುಗಳ ಸುತ್ತ ಬೆಸೆದುಕೊಂಡು ಮಧ್ಯಮ ವರ್ಗದವರ ಸ್ಥಿತಿಗತಿಯನ್ನ ನೈಜಕ್ಕೆ ಪೂರಕ ಎನ್ನುವ ಹಾಗೆ ಹೇಳುವುದರ ಜೊತೆಗೆ ಸಿನಿಮಾರಂಗದ ಕೆಲವು ಒಳ ಮರ್ಮವನ್ನು ಹೇಳುವ ಪ್ರಯತ್ನ ಇಲ್ಲಿದೆ.  ಕಥೆ ಉತ್ತಮವಾಗಿದ್ದರೂ ಸಹ  ಚಿತ್ರಕಥೆ ಇನ್ನೆಷ್ಟು ಹಿಡಿತ ಮಾಡಬೇಕಿತ್ತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ