ಶತ್ರುಗಳನ್ನು ಸೋಲಿಸಲು ಕೇವಲ ಯುದ್ದ ಮಾಡಬೇಕೆಂದೇನು ಇಲ್ಲಾ. ತಮ್ಮ ಅಪರಿಮಿತ ಸ್ವಾಭಿಮಾನ ಮತ್ತು ದೇಶಪ್ರೇಮದಿಂದ ಶತ್ರುಗಳ ವಿರುದ್ಧ ನ್ಯಾಯಾಲಯಗಳಲ್ಲಿ ಹೋರಾಡಿ, ಇಡೀ ವ್ಯವಸ್ಥೆಯೇ ತನ್ನ ವಿರುದ್ಧವಿದ್ದರೂ, ತಮ್ಮ ದೇಶದ ಅಸ್ಮಿತೆ ಮತ್ತು ಅಸ್ತಿತ್ವಗಳನ್ನು ಎತ್ತಿ ಹಿಡಿಯುವ ಮೂಲಕ. ನ್ಯಾಯಾಲಯದ ತೀರ್ಪಿನಲ್ಲಿ ಸೋತರೂ ಜನಮಾನಸದಲ್ಲಿ ಗೆಲ್ಲಬಹುದು ಎಂಬುದನ್ನು ತೋರಿಸಿಕೊಟ್ಟ ಮಹಾನ್ ದೇಶಪ್ರೇಮಿ ಸರ್ ಚೆಟ್ಟೂರು ಶಂಕರನ್ ನಾಯರ್ ಅವರನ್ನು ಪ್ರತಿಯೊಬ್ಬ ಭಾರತೀಯರೂ ನೆನಪಿಸಿಕೊಳ್ಳಲೇ ಬೇಕು.

nair

ಕೇರಳದ ಪಾಲಕ್ಕಾಡ್ ಜಿಲ್ಲೆಯ ಮಂಕರದ ಮಮ್ಮಾಯಿಲ್ ರಾಮುನ್ನಿ ಪಣಿಕ್ಕರ್ ಮತ್ತು ಪಾರ್ವತಿ ಅಮ್ಮ ಚೆಟ್ಟೂರ್ ಎಂಬ ಶ್ರೀಮಂತ ದಂಪತಿಗಳ ಮಗನಾಗಿ 11 ಜುಲೈ 1857 ಚೆಟ್ಟೂರು ಶಂಕರನ್ ನಾಯರ್ ಅವರ ಜನನವಾಗುತ್ತದೆ. ಶಂಕರನ್ ನಾಯರ್ ಅವರ ಆರಂಭಿಕ ಶಿಕ್ಷಣವೆಲ್ಲರೂ ಮನೆಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ ಪ್ರಾರಂಭವಾಗಿ ನಂತರ ಮಲಬಾರ್‌ನ ಶಾಲೆಗಳಲ್ಲಿ ಮುಂದುವರೆದು, ಕ್ಯಾಲಿಕಟ್‌ನ ಪ್ರಾಂತೀಯ ಶಾಲೆಯಿಂದ ಕಲಾ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯೊಂದಿಗೆ ಉತ್ತೀರ್ಣರಾಗುತ್ತಾರೆ. ಅದಾದ ನಂತರ ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿಗೆ ಸೇರಿಕೊಂಡು, 1877 ರಲ್ಲಿ ಅವರು ತಮ್ಮ ಕಲಾ ಪದವಿಯನ್ನು ಪಡೆದನಂತರ ಮತ್ತೆ ಎರಡು ವರ್ಷಗಳ ಮದ್ರಾಸ್ ಕಾನೂನು ಕಾಲೇಜಿನಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿ ಕಾನೂನು ಪದವಿ ಪಡೆಯುತ್ತಾರೆ.

ಹೀಗೆ ಕಾನೂನು ಪದವಿಯವನ್ನು ಪಡೆದ ನಾಯರ್ ಒಬ್ಬ ಅಪ್ರತಿಮ ನ್ಯಾಯವಾದಿಗಳಾಗಿದ್ದರು. ಯಾವುದೇ ಭಾರತೀಯರೂ ಬ್ರಿಟಿಷ್ ಬ್ಯಾರಿಸ್ಟರ್ ಅವರೊಂದಿಗೆ ಕಾನೂನಾತ್ಮಕವಾಗಿ ಕೆಲಸ ಮಾಡಬಾರದು ಎಂದು ಅಂದಿನ ವಕೀಲರ ಸಂಘ ನೀಡಿದ್ದ ಆದೇಶಗಳನ್ನು ಧಿಕ್ಕರಿಸಿದ್ದಲ್ಲದೇ, ಕಕ್ಷಿದಾರರಿಗೆ ತಮ್ಮ ವಕೀಲರನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವಿದೆ. ಅವರಿಗೆ ವಕೀಲರ ಚರ್ಮದ ಬಣ್ಣಕ್ಕಿಂತ ನ್ಯಾಯ ಮುಖ್ಯವಾಗಿರುತ್ತದೆ ಎಂಬುದನ್ನು ಬಲವಾಗಿ ವಾದಿಸುವ ಮೂಲಕ ಸಾಮಾಜಿಕ ಸುಧಾರಣೆಗಳ ಅಬ್ಬರದ ಪ್ರತಿಪಾದಕರಾಗಿದ್ದರು.

nair2

ಇಂತಹ ನಾಯರ್ ಅವರು 1880 ರಲ್ಲಿ ಮದ್ರಾಸ್ ಹೈಕೋರ್ಟ್‌ನಲ್ಲಿ ವಕೀಲರಾಗಿ ಪ್ರಾರಂಭಿಸಿ, ಕೆಲವೇ ದಿನಗಳಲ್ಲಿ ಅತ್ಯಂತ ಬುದ್ಧಿವಂತ ವಕೀಲ ಎಂದೇ ಪ್ರಸಿದ್ಧರಾದದ್ದನ್ನು ಗ್ರಹಿಸಿದ ಅಂದಿನ ಮದ್ರಾಸ್ ಸರ್ಕಾರ, 1884 ರಲ್ಲಿ ಅವರನ್ನು ಮಲಬಾರ್ ಜಿಲ್ಲೆಯ ತನಿಖೆಗಾಗಿ ಸಮಿತಿಯ ಸದಸ್ಯರನ್ನಾಗಿ ನೇಮಿಸಿತು. ಏತನ್ಮಧ್ಯೆ, 1902 ರಲ್ಲಿ, ವೈಸರಾಯ್ ಲಾರ್ಡ್ ಕರ್ಜನ್ ಅವರನ್ನು ರೇಲಿ ವಿಶ್ವವಿದ್ಯಾಲಯ ಆಯೋಗಕ್ಕೆ ಕಾರ್ಯದರ್ಶಿಯಾಗಿ ನೇಮಿಸಿದ್ದರು. ಅವರ ಸೇವೆಗಳನ್ನು ಗುರುತಿಸಿ, ಅವರನ್ನು 1904 ರಲ್ಲಿ ರಾಜ-ಚಕ್ರವರ್ತಿಯವರು ಭಾರತೀಯ ಸಾಮ್ರಾಜ್ಯದ ಸಹಚರರಾಗಿ ನೇಮಕವಾಗಿದ್ದರು. 1908 ರವರೆಗೆ ಅವರು ಸರ್ಕಾರದ ಅಡ್ವೊಕೇಟ್ ಜನರಲ್ ಆಗಿದ್ದಲ್ಲದೇ, ಕಾಲಕಾಲ ಹಂಗಾಮಿ ನ್ಯಾಯಾಧೀಶರಾಗಿದ್ದರು. 1908 ರಿಂದ 1915 ರವರೆಗೆ ಅವರು ಮದ್ರಾಸ್‌ನ ಹೈಕೋರ್ಟ್‌ನಲ್ಲಿ ಖಾಯಂ ನ್ಯಾಯಾಧೀಶರಾಗಿ,ಸಿ.ಎ. ವೈಟ್, ವಿಲಿಯಂ ಆಯ್ಲಿಂಗ್ ಅವರೊಂದಿಗೆ ಕಲೆಕ್ಟರ್ ಆಶೆ ಕೊಲೆ ಪ್ರಕರಣವನ್ನು ವಿಚಾರಣೆ ನಡೆಸಿದ ಪೀಠದ ಭಾಗವಾಗಿದ್ದರು. ಅವರ ಸೇವೆಯನ್ನು ಗುರುತಿಸಿದ ಬ್ರಿಟಿಷ್ ಸರ್ಕಾರ ಅವರಿಗೆ 1912 ರಲ್ಲಿ ಅವರು ನೈಟ್ ಪದವಿಯನ್ನು ನೀಡಿ ಗೌರವಿಸಿತ್ತು.

nair3

1915 ರಲ್ಲಿ ಶಿಕ್ಷಣ ಖಾತೆಯ ಉಸ್ತುವಾರಿಯೊಂದಿಗೆ ವೈಸರಾಯ್ ಕೌನ್ಸಿಲ್‌ನ ಸದಸ್ಯರಾಗಿ ನೇಮಕಗೊಂಡರು ಹೀಗೆ ಸದಸ್ಯರಾಗಿದ್ದಾಗಲೇ, ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ವಿವಿಧ ದೋಷಗಳನ್ನು ಎತ್ತಿ ತೋರಿಸಿದರು ಮತ್ತು ಸುಧಾರಣೆಗಳನ್ನು ಸೂಚಿಸಿದರುಬ್ರಿಟಿಷ್ ಸರ್ಕಾರದ ಭಾಗವಾಗಿಯೂ ಈ ರೀತಿಯಾಗಿ ಬ್ರಿಟಿಷ್ ಸರ್ಕಾರದ ವಿರುದ್ಧವೇ ಒಬ್ಬ ಭಾರತೀಯನಾಗಿ ಅಂತಹ ಟೀಕೆಗಳನ್ನು ನೀಡುವುದು ಮತ್ತು ಅಂತಹ ಬೇಡಿಕೆಗಳನ್ನು ಮಾಡುವುದು ಆ ದಿನಗಳಲ್ಲಿ ನಂಬಲಸಾಧ್ಯವಾಗಿದ್ದರೂ, ಬ್ರಿಟಿಷ್ ಸರ್ಕಾರವು ಅವರ ಅನೇಕ ಶಿಫಾರಸುಗಳನ್ನು ಒಪ್ಪಿಕೊಂಡಿತ್ತು ಎಂದರೆ ಅವರ ಪ್ರಭಾವ ಎಷ್ಟಿತ್ತು ಎಂಬುದರ ಅರಿವಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ