- ರಾಘವೇಂದ್ರ ಅಡಿಗ ಎಚ್ಚೆನ್.

ಟಾಕ್ಸಿಕ್’, ‘ಜನ ನಾಯಗನ್’ ಸೇರಿದಂತೆ ಬಹುಭಾಷಾ ಬಿಗ್ ಬಜೆಟ್ ಸಿನಿಮಾಗಳ ಮೂಲಕ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿರುವ ಕೆವಿಎನ್ ಪ್ರೊಡಕ್ಷನ್ಸ್ ಇದೀಗ ಮತ್ತೊಂದು ತೆಲುಗು ಚಿತ್ರವನ್ನು ಘೋಷಿಸಿದೆ. ‘ಮ್ಯಾಡ್’, ‘ಆಯ್’ ಹಾಗೂ ‘ಮ್ಯಾಡ್ ಸ್ಕ್ವೇರ್’ ಮೂಲಕ ಹ್ಯಾಟ್ರಿಕ್ ಯಶಸ್ಸು ದಾಖಲಿಸಿರುವ ಯುವ ನಟ ನರ್ನೆ ನಿತಿನ್ ಅಭಿನಯದ ಹೊಸ ಚಿತ್ರಕ್ಕೆ ಕೆವಿಎನ್ ಬಂಡವಾಳ ಹೂಡುತ್ತಿದೆ.

‘ಜೂನಿಯರ್’ ಸಿನಿಮಾ ಖ್ಯಾತಿಯ ನಿರ್ದೇಶಕ ರಾಧಾಕೃಷ್ಣ ರೆಡ್ಡಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದು, ಸದ್ಯಕ್ಕೆ #NN5 ಎಂಬ ವರ್ಕಿಂಗ್ ಟೈಟಲ್‌ನಡಿ ಯೋಜನೆ ಆರಂಭವಾಗಿದೆ. ನರ್ನೆ ನಿತಿನ್ ಜನ್ಮದಿನದ ಪ್ರಯುಕ್ತ ವಿಶೇಷ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಅಧಿಕೃತ ಘೋಷಣೆ ಮಾಡಿದೆ.

ಸಾಮಾಜಿಕ ಜಾಲತಾಣದ ಪೋಸ್ಟ್ ಶೈಲಿಯಲ್ಲಿ ವಿನ್ಯಾಸಗೊಳಿಸಲಾದ ಪೋಸ್ಟರ್‌ನಲ್ಲಿ ‘ಆಕಾಶದಲ್ಲಿರುತ್ತೆ ಮೂನ್.. ನೀವೇ ನನ್ನ ಲೈಫ್‌ಗೆ ಕ್ವೀನ್’ ಎಂಬ ಸಾಲುಗಳಿದ್ದು, ಚಿತ್ರದ ಕಥೆ ರೊಮ್ಯಾಂಟಿಕ್ ಟ್ರ್ಯಾಕ್ ಹೊಂದಿರಬಹುದೆಂಬ ಸುಳಿವು ನೀಡಿದೆ. ಪೋಸ್ಟರ್‌ನಲ್ಲಿ ನಾಯಕ-ನಾಯಕಿಯ ಮುಖವನ್ನು ರಹಸ್ಯವಾಗಿಡಲಾಗಿದೆ.

ಪೋಸ್ಟರ್‌ನ ಮತ್ತೊಂದು ವಿಶೇಷವೆಂದರೆ, ಜೂನಿಯರ್ ಎನ್‌ಟಿಆರ್ ಈ ಪೋಸ್ಟ್‌ಗೆ ಲೈಕ್ ಮಾಡಿರುವ ರೀತಿಯನ್ನು ಕ್ರಿಯೇಟಿವ್ ಆಗಿ ಡಿಸೈನ್ ಮಾಡಲಾಗಿದೆ. ಛಾಯಾಗ್ರಾಹಕ ರಾಮ ಮಾರುತಿ ಎಂ, ಸಂಕಲನಕಾರ ನಿರಂಜನ್ ದೇವರಮನೆ ಹಾಗೂ ಕಲಾ ನಿರ್ದೇಶಕ ಶಿವ ಕಮೇಶ್ ಡಿ. ಚಿತ್ರದ ತಾಂತ್ರಿಕ ತಂಡದಲ್ಲಿದ್ದಾರೆ.

ಕೆವಿಎನ್ ಪ್ರೊಡಕ್ಷನ್ಸ್ ಈಗಾಗಲೇ ಚಿರಂಜೀವಿ ಅಭಿನಯದ ತೆಲುಗು ಸಿನಿಮಾ, ಯಶ್ ನಟನೆಯ ‘ಟಾಕ್ಸಿಕ್’, ವಿಜಯ್ ಅಭಿನಯದ ‘ಜನ ನಾಯಗನ್’, ಶಿವರಾಜ್‌ಕುಮಾರ್ ನಟನೆಯ ‘ಬೇಲ್’ ಸೇರಿದಂತೆ ಹಲವು ಮೆಗಾ ಪ್ರಾಜೆಕ್ಟ್‌ಗಳನ್ನು ನಿರ್ಮಿಸುತ್ತಿದ್ದು, ಇದೀಗ ನರ್ನೆ ನಿತಿನ್ ಸಿನಿಮಾ ಮೂಲಕ ತೆಲುಗು ಚಿತ್ರರಂಗದಲ್ಲಿ ತನ್ನ ವಿಸ್ತರಣೆಯನ್ನು ಮತ್ತಷ್ಟು ಬಲಪಡಿಸಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ