ಶರತ್ ಚಂದ್ರ
ಕನ್ನಡ ಸಿನಿಮಾಗಳಲ್ಲಿ ಅಪ್ಪನ ಬಾಂಧವ್ಯ ಮತ್ತು ಮಹತ್ವ ವನ್ನು ತಿಳಿಸುವ ಸಾಕಷ್ಟು ಹಾಡುಗಳು ಬಂದಿವೆ. ವಿಶ್ವ ಅಪ್ಪಂದಿರ ದಿನದ ಪ್ರಯುಕ್ತ ಒಂದಷ್ಟು ಹಾಡುಗಳನ್ನು ಮೆಲುಕು ಹಾಕೋಣ.
1) ನಿನ್ನ ಕಂಗಳ ಬಿಸಿಯ ಹನಿಗಳು
ಬಡವರ ಬಂಧು ಚಿತ್ರದ ಈ ಹಾಡಿನಲ್ಲಿ ನಟ ಸಂಪತ್ ತಂದೆಯ ಪಾತ್ರ ವಹಿಸಿದ್ದು, ಡಾಕ್ಟರ್ ರಾಜಕುಮಾರ್ ಮಗನಾಗಿ ತಂದೆಯ ಸೇವೆ ಸಲ್ಲಿಸುವ ಈ ಹಾಡು ಇಂದಿಗೂ ನೋಡುಗರ ಕಣ್ಣೀರು ತರಿಸುತ್ತದೆ.ಈ ಹಾಡು ಇಂದಿಗೂ ಅಪ್ಪನ ಹಾಡುಗಳಲ್ಲಿ ಎತ್ತರದ ಸ್ಥಾನ ವನ್ನು ಹೊಂದಿದೆ.
2) ನಿನ್ನಂತ ಅಪ್ಪ ಇಲ್ಲ
ರಾಜಕುಮಾರ್ ಅವರೇ ನಟಿಸಿರುವ ಅವರ 200ನೇ ಚಿತ್ರವಾದ 'ದೇವತಾ ಮನುಷ್ಯ 'ಚಿತ್ರದಲ್ಲಿ ಮಗಳಾಗಿ ನಟಿಸಿರುವ ಸುಧಾರಾಣಿ ಜೊತೆಗಿನ ಡ್ಯಾನ್ಸ್ ಈಗಲೂ ಜನಪ್ರಿಯ.
3) ಅಪ್ಪ ಅಪ್ಪ ನಂಗೆ ನೀನು ಬೇಕಪ್ಪ
ರವಿಚಂದ್ರನ್ ನಾಯಕನಾಗಿ ನಟಿಸಿರುವ 'ಮನೆ ದೇವ್ರು' ಚಿತ್ರದ ಈ ಹಾಡು ತನ್ನಿಂದ ದೂರ ಇರುವ ಮಗನನ್ನು ಮತ್ತೆ ಸೇರಿದಾಗ ಅಪ್ಪ ಮಗನ ಮೇಲೆ ತೋರಿಸುವ ಮಮತೆ ಯ ಹಾಡು ಇದಾಗಿದೆ.
3) ಡ್ಯಾಡಿ ಮೈ ಲವ್ಲೀ ಡ್ಯಾಡಿ
ಅಂಡಮಾನ್ ಚಿತ್ರದಲ್ಲಿ ನಾಯಕ ನಟ ಶಿವರಾಜ್ ಕುಮಾರ್ ಮಗಳು ನಿವೇದಿತ ಜೊತೆ ಹಾಡುವ, ಅಂಡಮಾನಲ್ಲಿ ಚಿತ್ರೀಕರಿಸಲಾದ ಈ ಹಾಡು ನಿಜ ಜೀವನದ ತಂದೆ ಮತ್ತು ಮಗಳ ಅಪರೂಪದ ಹಾಡಾಗಿದೆ.
4) ಅಪ್ಪ ಐ ಲವ್ ಯು ಪ್ಪಾ
ಕಾಶಿನಾಥ್ ಹಾಗೂ ಮಾನ್ವಿತಾ ಕಾಮತ್ ಅಪ್ಪ ಮಗಳಾಗಿ ನಟಿಸಿದ ಚೌಕ ಚಿತ್ರದ ಈ ಹಾಡು ಇತ್ತೀಚೆಗೆ ಅಪ್ಪನ ಹಾಡಿನ anthem ಆಗಿ ಮುಂದುವರೆದಿದೆ. ಕುಟುಂಬದ ಮೇಲೆ ಪ್ರತಿಯೊಬ್ಬ ತಂದಯ ತ್ಯಾಗ ಪ್ರೀತಿಯ ಕುರಿತು ಸಾಹಿತ್ಯ ಇರುವ ಅರ್ಜುನ್ ಜನ್ಯ ಅವರ ಸಂಗೀತ ಇರುವ ಈ ಹಾಡನ್ನು ಅದ್ಭುತವಾಗಿ ಅನುರಾಧ ಭಟ್ ಹಾಡಿದ್ದರು
5) ರೆಕ್ಕೆಯ ಕುದುರೆ ಏರಿ
ಕವಚ ಚಿತ್ರದ ಈ ಹಾಡಿನಲ್ಲಿ ಕಣ್ಣು ಕಾಣದ ಅಂಧ ಅಪ್ಪನಾಗಿ ಶಿವರಾಜ್ ಕುಮಾರ್ ನಟಿಸಿದ್ದು ಈ ಚಿತ್ರದಲ್ಲಿ ಅಪ್ಪ ಮತ್ತು ಮಗಳ ಬಾಂಧವ್ಯವನ್ನು ಚೆನ್ನಾಗಿ ತೆರೆ ಹಿಡಿಯಲಾಗಿದೆ.ಹಿಡಿಯಲಾಗಿದೆ.
ಉಳಿದಂತೆ ಯಾರಿವನು ಚಿತ್ರದಲ್ಲಿ ಪುನೀತ್ ಜೊತೆ ಡಾ. ರಾಜ್ ನಟಿಸಿರುವ ಆಕಾಶಕೆ ಹಾರಾಡುವ, ವಿಷ್ಣುವರ್ಧನ್ ಲಾಲಿ ಚಿತ್ರದ ಚಂದನ ಕಂಪಿನ ಲಾಲಿ, ಅವರೇ ನಟಿಸಿರುವ ಚಿನ್ನಾ ನಿನ್ನ ಮುದ್ದಾಡುವೆ ಟೈಟಲ್ ಸಾಂಗ್ ಮುಂಗಾರು ಮಳೆ ಭಾಗ ಎರಡು ಚಿತ್ರದ ರವಿಚಂದ್ರನ್ ಅಪ್ಪುನಾಗಿ ಗಣೇಶ್ ಮಗನಾಗಿ ನಟಿಸಿರುವ ಮೈ ಡ್ಯಾಡಿ ಹಾಡು, ಮಾಣಿಕ್ಯ ಚಿತ್ರದಲ್ಲಿ ರವಿಚಂದ್ರನ್ ಮತ್ತು ಸುದೀಪ್ ತಂದೆ ಮಗನಾಗಿ ನಟಿಸಿರುವ ಜೀವ ಜೀವ ಹಾಡು, ಹೀಗೆ ಅಪ್ಪನ ಕುರಿತಾದ ಅನೇಕ ಹಾಡುಗಳು ಕನ್ನಡ ಸಿನಿಮಾಗಳಲ್ಲಿ ಬಂದಿವೆ.