ರಾಘವೇಂದ್ರ ಅಡಿಗ ಎಚ್ಚೆನ್.
ಭಾರತೀಯ ಚಿತ್ರರಂಗದ ಪ್ರಸಿದ್ಧ ಪೋಷಕ ನಟ ರವಿ ಕಾಳೆ ‘ಶ್ರೀಗಂಧದಗುಡಿ’ ಧಾರಾವಾಹಿಯಲ್ಲಿ ಗೌರವ ನಟರಾಗಿ ಕಾಣಿಸಿಕೊಳ್ಳಲಿದ್ದಾರೆ. ‘ಶ್ರೀಗಂಧದಗುಡಿ’ ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾಗಿದ್ದು ಪ್ರತಿ ರಾತ್ರಿ 8 ಕ್ಕೆ ಪ್ರಸಾರವಾಗುತ್ತಿದೆ.
ಧಾರಾವಾಹಿಯ ಕತೆಯು ಅತ್ಯಂತ ಕುತೂಹಲದ ಘಟ್ಟ ತಲುಪಿದೆ. ಚಂದನಾ ಹರಿಗೆ ತಾನು ಈ ಮನೆಯಲ್ಲಿ ಇರಲಾಗುವುದಿಲ್ಲ ಮತ್ತು ತನ್ನ ಗುರಿಗಳನ್ನು ಸಾಧಿಸಲು ಬೆಂಗಳೂರಿಗೆ ಹೋಗಬೇಕೆಂದು ಹೇಳುತ್ತಾಳೆ.

WhatsApp-Image-2025-11-06-at-6.02.45-PM

ಆಕೆ ಹರಿಯ ಸಹಾಯ ಕೇಳುತ್ತಾಳೆ. ಹರಿ ಆಕೆಗೆ ರಾತ್ರಿ ಹೋಗುವಂತೆ ಹೇಳುತ್ತಾನೆ ಮತ್ತು ತಾನೇ ಕರೆದುಕೊಂಡು ಹೋಗುವುದಾಗಿ ಹೇಳುತ್ತಾನೆ. ಆದರೆ ಬೆಂಗಳೂರಿಗೆ ಹೊರಡುವ ಮಾರ್ಗದಲ್ಲಿ ಚಂದನಾ ಮಾಡಿದ ಒಂದು ತಪ್ಪಿನಿಂದ ಕುಟುಂಬಕ್ಕೆ ಆಕೆ ಮನೆ ಬಿಟ್ಟಿರುವುದು ಗೊತ್ತಾಗುತ್ತದೆ.

WhatsApp-Image-2025-11-06-at-5.52.32-PM-1-768x409

ಇದರಿಂದ ಒಂದು ಚೇಸ್ ಆರಂಭವಾಗುತ್ತದೆ. ಚಂದನಾಳ ತಂದೆ ಮಹಾಬಲ ತನ್ನ ಸಂಪರ್ಕ ಬಳಸಿ ದಾಳಿ ಮಾಡುತ್ತಾನೆ. ತನ್ನನ್ನು ರಕ್ಷಿಸಿಕೊಳ್ಳಲು ಹರಿ ಪೊಲೀಸ್ ಠಾಣೆಗೆ ಶರಣಾಗುತ್ತಾನೆ. ಅಲ್ಲಿ ಇನ್‌ಸ್ಪೆಕ್ಟರ್ ಕಾಳೆ ಪ್ರತ್ಯಕ್ಷ ಆಗುತ್ತಾರೆ. ಕಾಳೆ ಈ ಧಾರಾವಾಹಿಯ ಕತೆಗೆ ಟರ್ನಿಂಗ್ ಪಾಯಿಂಟ್ ಆಗುತ್ತಾರೆ.

WhatsApp-Image-2025-11-06-at-5.54.48-PM

ಕಾಳೆ ಹೇಳುವುದು ಏನೆಂದರೆ, ಹರಿಯನ್ನೂ ಚಂದನಾಳನ್ನೂ ಉಳಿಸುವ ಏಕೈಕ ಮಾರ್ಗ ಎಂದರೆ ಅವರಿಬ್ಬರೂ ಮದುವೆಯಾಗಬೇಕು. ಈ ಪರಿಸ್ಥಿತಿಯನ್ನು ಹರಿ ತನ್ನ ಪ್ರಯೋಜನಕ್ಕೆ ಬಳಸಿಕೊಳ್ಳುತ್ತಾನೆ ಮತ್ತು ಹೇಗೆ ಅವರ ಮದುವೆ ನಡೆಯುತ್ತದೆ ಎಂಬುದು ಅತ್ಯಂತ ಆಸಕ್ತಿಕರ. ಈ ಕುತೂಹಲಕರ ರೋಮಾಂಚಕ ಎಪಿಸೋಡ್ ಗಳನ್ನು ತಪ್ಪದೇ ನೋಡಿ ಕಲರ್ಸ್ ಕನ್ನಡದಲ್ಲಿ. ವಾರದ ಏಳೂ ದಿನ ಪ್ರತಿ ರಾತ್ರಿ 8 ಕ್ಕೆ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ