ರಾಘವೇಂದ್ರ ಅಡಿಗ ಎಚ್ಚೆನ್.

ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಸೆಟ್ಟೇರಿದ್ದ “ಗಾರ್ಡನ್” ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಮೊದಲ ಹಂತದ ಚಿತ್ರೀಕರಣ ಮುಗಿಸಿದೆ.
ಪೌರಕಾರ್ಮಿಕರ ಬದುಕು ಬವಣೆ ಹೇಳೋ ಸಿನಿಮಾ ಗಾರ್ಡನ್. ಆರ್ಯ ಮಹೇಶ್ ನಿರ್ದೇಶನದಲ್ಲಿ, ಟಕ್ಕರ್ ಮನೋಜ್ ನಟನೆಯಲ್ಲಿ ಗಾರ್ಡನ್ ಮೂಡಿಬರ್ತಿದೆ.
ಮುಹೂರ್ತದ ದಿನವೇ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡಿದ್ದ ಚಿತ್ರತಂಡ ಇದೀಗ ಒಂದಷ್ಟು ಮೇಕಿಂಗ್ ವಿಡಿಯೋ ತುಣುಕು ಹಾಗೂ ವರ್ಕಿಂಗ್ ಸ್ಟಿಲ್ ರಿವೀಲ್ ಮಾಡಿದೆ.

gardens

ಬೆಂಗಳೂರಿನ ಕಸ ವಿಲೇವಾರಿ ಮತ್ತು ಅದರ ಸುತ್ತಲಿನ ಮಾಫಿಯಾದ ಸುತ್ತ ಇರುವ ಕಥಾಹಂದರ ಈ ಮೇಕಿಂಗ್ ವಿಡಿಯೋದಲ್ಲಿ ಕಾಣ್ತಿದೆ. ತೂಗುದೀಪ ಮನೆಯ ಕುಡಿ ಮನೋಜ್ ನಾಯಕ. ಚಿತ್ರದಲ್ಲಿಅನು ಪ್ರೇಮಾ ಮತ್ತು ಸೋನಮ್ ರೈ ಇಬ್ಬರೂ ಮನೋಜ್ ನಾಯಕಿಯತು
ಜಿ ಮುನಿರಾಜು ನಿರ್ಮಿಸುತ್ತಿರುವ ಗಾರ್ಡನ್ ಚಿತ್ರಕ್ಕೆ ಮುಂಜಾನೆ ಮಂಜು ಛಾಯಾಗ್ರಹಣ, ವೈಲೆಂಟ್ ವೇಲು ಸಾಹಸ, ಟಗರು ರಾಜು ನೃತ್ಯ, ಜಿ.ಗಿರೀಶ್ ಕುಮಾರ್ ಸಂಕಲ ಚಿತ್ರಕ್ಕಿದೆ.

gardens4

ಮೊದಲ ಚಿತ್ರೀಕರಣ ಮುಗಿಸಿ ಎರಡನೇ ಹಂತದ ಚಿತ್ರೀಕರಣಕ್ಕೆ ಸಜ್ಜಾಗ್ತಿರೋ ಗಾರ್ಡನ್ ಚಿತ್ರತಂಡ ಹೊಸ ವರ್ಷದ ಪ್ರಯುಕ್ತ ಇಷ್ಟು ಮಾಹಿತಿ ನೀಡಿದೆ.

 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ