ಶರತ್ ಚಂದ್ರ

ಈ ಬಾರಿ ಕೂಡ ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಜನ್ಮದಿನವನ್ನು ಅಭಿಮಾನಿಗಳ ಜೊತೆ ಸೆಲೆಬ್ರೇಟ್ ಮಾಡಲಾಗಲಿಲ್ಲ. ಬರ್ತಡೆಗೆ ಮುಂಚೇನೇ ನಾನು ಶೂಟಿಂಗ್ ನಲ್ಲಿ  ನಿರತರಾಗಿರುವುದರಿಂದ ನನ್ನ ಮನೆ ಬಳಿ ಬರಬೇಡಿ, ತಾವು ಇರುವ ಜಾಗದಲ್ಲೆ ಒಳ್ಳೆ ಕೆಲಸ ಮಾಡಿ ಬರ್ತಡೇ ಆಚರಿಸಿ ಎಂದು ಪೋಸ್ಟ್ ಹಾಕಿದ್ದರು.

1000587729

ಆದರೆ ನಿನ್ನೆ ಅವರ ಜನ್ಮದಿನದಂದು ಕೆಲವು ನಿರ್ಮಾಪಕರು ಹೊಸ ಚಿತ್ರಗಳ ಅನೌನ್ಸ್ಮೆಂಟ್ ಮಾಡುವುದರ ಮೂಲಕ ಅಭಿಮಾನಿಗಳಿಗೆ ಖುಷಿ ಕೊಟ್ಟಿದ್ದಾರೆ.

ಈಗಾಗಲೇ ಪಿನಾಕ, Yours sincerely ರಾಮ್ ಚಿತ್ರಗಳ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ಗಣೇಶ್ ಅವರ ಮುಂದಿನ ಚಿತ್ರಗಳು ನಿಜಕ್ಕೂ ಭರವಸೆ ಮೂಡಿಸುತ್ತದೆ.

1000587733

ನಿಮಗೆ ಗೊತ್ತಿರುವ ಹಾಗೆ ಗಣೇಶ್ ಅವರು ಲವ್ ಇನ್ ಮಂಡ್ಯ ಖ್ಯಾತಿಯ ಸಾಹಿತಿ ಅರಸು ಅಂತಾರೆ ಅವರ ನಿರ್ದೇಶನದಲ್ಲಿ ಹೊಸ ಚಿತ್ರ ಒಪ್ಪಿಕೊಂಡಿದ್ದರು. ಆ ಚಿತ್ರಕ್ಕೆ ಈಗ DJango ಕೃಷ್ಣಮೂರ್ತಿ ಎಂದು ಹೆಸರಿಡಲಾಗಿದೆ.

ಕಳೆದ ವರ್ಷ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಿದಂತಹ ವರ್ಷದ ಅತಿ ದೊಡ್ಡ ಚಿತ್ರವಾಗಿ ಹೊರಹೊಮ್ಮಿದ್ದ ‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ನಿರ್ದೇಶಕ ಶ್ರೀನಿವಾಸರಾಜು ಮತ್ತು ಗಣೇಶ್ ಕಾಂಬಿನೇಷನ್ ಮತ್ತೆ ಒಂದಾಗಲಿದೆ. ಜನಪ್ರಿಯ ರಾಜಕಾರಣಿ ಹಾಗೂ ಉದ್ಯಮಿ ಸಮೃದ್ಧಿ ವಿ ಮಂಜುನಾಥ್ ನಿರ್ಮಿಸಲಿರುವ ಹೊಸ ಚಿತ್ರಕ್ಕೆ ಗಣೇಶ್ ಅಸ್ತು ಅಂದಿದ್ದಾರೆ.

1000587735

‘ಬಹದ್ದೂರ್, ‘ಭರ್ಜರಿ ‘ಜೇಮ್ಸ್ ‘ಭರಾಟೆ’ಯಂತಹ ಯಶಸ್ವೀ ಚಿತ್ರಗಳನ್ನು ಕೊಟ್ಟಂತಹ ಚೇತನ್ ಕುಮಾರ್ ಕೂಡ ಗಣೇಶ್ ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.  ಈ ಹಿಂದೆ ‘ಭುವನ ಗಗನಂ’ ಹಾಗೂ ನಿರ್ಮಾಣ ಹಂತದಲ್ಲಿರುವ ‘ಅಯೋಗ್ಯ 2 ‘ಚಿತ್ರದ ನಿರ್ಮಾಪಕರದ ಶ್ರೀ ಮುನೇ ಗೌಡ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.

ಆದರೆ ಈ ಹಿಂದೆ ಶಿವರಾಜ್ ಕುಮಾರ್ ಅವರ ಕಾಂಬಿನೇಷನ್ ಜೊತೆ ‘ಶಿವ ಗಣ ‘ಎಂಬ ಚಿತ್ರ ಲಾಂಚ್ ಆಗಲಿದೆ ಎಂಬ ಸುದ್ದಿ ಹರಡಿತ್ತು. ಬಹುಶಃ ಗಣೇಶ್ ಬರ್ತಡೆ ದಿನ ಈ ಚಿತ್ರದ ಬಗ್ಗೆ ಅಪ್ಡೇಟ್ ಸಿಗಬಹುದೆಂದು ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ ಈ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ.

ಒಟ್ಟಿನಲ್ಲಿ ಕೃಷ್ಣಂ ಪ್ರಣಯ ಸಖಿ’ ಚಿತ್ರದ ಅಭೂತ ಪೂರ್ವ ಯಶಸ್ಸಿನ ನಂತರ ಗಣೇಶ್ ಕೆರಿಯರ್ ಗ್ರಾಫ್ ದಿನದಿಂದ ದಿನಕ್ಕೆ ಮೇಲೇರುತ್ತಿರುವುದಂತೂ ಸತ್ಯ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ