ಗುಂಡ(ನಾಯಿ) ಮತ್ತು ಅದರ ಮಾಲೀಕ ಶಂಕರನ ನಡುವಿನ ಅವಿನಾಭಾವ ಸಂಬಂಧದ ಕಥೆಯಿದ್ದ ಚಿತ್ರ 'ನಾನು ಮತ್ತು ಗುಂಡ'  ಈಗಾಗಲೇ ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದೆ ನಿಂತಿದೆ. ಹಾಸ್ಯನಟ ಶಿವರಾಜ್ ಕೆ.ಆರ್.ಪೇಟೆ  ನಾಯಕನಾಗಿ ನಟಿಸಿದ ಆ ಚಿತ್ರಕ್ಕೆ ರಘುಹಾಸನ್ ಆಕ್ಷನ್ ಕಟ್ ಹೇಳಿದ್ದರು. ಈಗ ಅದರ ಮುಂದುವರೆದ ಭಾಗವಾದ 'ನಾನು ಮತ್ತು ಗುಂಡ-2' ಚಿತ್ರ ನಿರ್ಮಿಸಿ, ನಿರ್ದೇಶಿಸಿದ್ದು ,ಆ ಚಿತ್ರವೀಗ  ತೆರೆಗೆ ಬರಲು ಸಿದ್ದವಾಗಿದೆ. ಸೆಪ್ಟೆಂಬರ್ 5ರಂದು ಈ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು, ಚಿತ್ರದಲ್ಲಿ ಡಾ.ವಿ.ನಾಗೇಂದ್ರಪ್ರಸಾದ್ ಶಿವನ ಮೇಲೆ ರಚಿಸಿರುವ ಹಾಗೂ ವಿಜಯಪ್ರಕಾಶ್ ದನಿಯಾಗಿರುವ  'ಓಂ ಶಿವಾಯ, ನಮೋ ಶಿವಾಯ' ಹಾಡಿನ ಬಿಡುಗಡೆ ಕಾರ್ಯಕ್ರಮ ನಡೆಯಿತು,

1000653692

ನಾನು ಮತ್ತು ಗುಂಡ ಭಾವನಾತ್ಮಕವಾಗಿ ಪ್ರೇಕ್ಷಕರನ್ನು ಸೆಳೆದಿತ್ತು. ಅದರ ಮುಂದುವರಿದ ಭಾಗಕ್ಕೆ  ರಘುಹಾಸನ್  ನಿರ್ದೇಶನದ ಜತೆ ನಿರ್ಮಾಣದ ಜವಾಬ್ದಾರಿ ಸಹ ಹೊತ್ತಿದ್ದಾರೆ. ಈ ಚಿತ್ರದಲ್ಲಿ ರಾಕೇಶ್ ಆಡಿಗ, ರಚನಾ ಇಂದರ್ ನಾಯಕ ನಾಯಕಿಯಾಗ ನಟಿಸಿದ್ದಾರೆ.

1000653699

ಬಹಳ ದಿನಗಳ ನಂತರ ಆರ್‌ಪಿ ಪಟ್ನಾಯಕ್ ಅ ವರ ಸಂಗೀತದಲ್ಲಿ ಹಾಡಿರುವುದು ಖುಷಿಯಾಗಿದೆ, ಚಿತ್ರ ಪ್ರೇಕ್ಷಕರ ಮನ ಗೆಲ್ಲಲಿ ಎಂದು ಗಾಯಕ ವಿಜಯ ಪ್ರಕಾಶ್ ವಿಡಿಯೋ ಮೂಲಕ ಶುಭ ಹಾರೈಸಿದರು.

1000653701

ನಂತರ ವೇದಿಕೆಯಲ್ಲಿ ಸಾಹಿತಿ ನಾಗೇಂದ್ರ ಪ್ರಸಾದ್ ಮಾತನಾಡುತ್ತ ರಘುಹಾಸನ್ ಈ ಸಾಂಗ್ ಬಗ್ಗೆ ಹೇಳಿದಾಗ ತುಂಬಾ ವಿಷಯಗಳು ಇದರಲ್ಲಿವೆ ಎನಿಸಿತು, ಕಥೆ ಹೇಳಿದ ಹಾಗಿರಬಾರದು, ಆದರೆ ಲೈನ್ಸ್ ಕಥೆ ಹೇಳುವಂತಿರಬೇಕು, ಮನಸಿಗೆ ಇಳಿಯುವಂಥ ಕಂಟೆಂಟ್ ಈ ಹಾಡಲ್ಲಿದೆ, ಇದು ಪಕ್ಕಾ ಚಿತ್ರಗೀತೆ, ಸಿನಿಮಾದಲ್ಲಿ ನೋಡಿದಾಗ ತುಂಬಾ ಇಂಪ್ಯಾಕ್ಟ್ ಆಗುತ್ತೆ ಟ್ರೈಲರ್‌ನಲ್ಲಿ ಎಲ್ಲಾ ಎಮೋಷನ್ ಹೇಳುವ ಪ್ರಯತ್ನ ಮಾಡಿದ್ದಾರೆ ಎಂದು ಹೇಳಿದರು.

1000653703

ಈ ಸಂದರ್ಭದಲ್ಲಿ ಚಿತ್ರದ  ನಿರ್ದೇಶಕ ರಘುಹಾಸನ್, ಮಾತನಾಡುತ್ತ ನಮ್ಮ ಚಿತ್ರ 2022ರಲ್ಲಿ  ಪ್ರಾರಂಭವಾಗಿತ್ತು, ಇದೀಗ ಬಿಡುಗಡೆಯಾಗುತ್ತಿದೆ, ಸಂಗೀತ ನಿರ್ದೇಶನ ಪಟ್ನಾಯಕ್ ಅವರು ಈ ಹಾಡಿನ ಟ್ಯೂನ್ ಕೊಟ್ಟಾಗ ತಕ್ಷಣ ನೆನಪಾಗಿದ್ದೇ ನಾಗೇಂದ್ರ ಪ್ರಸಾದ್, ಲಿರಿಕ್ ಇಷ್ಟಪಟ್ಟು ವಿಜಯ ಪ್ರಕಾಶ್ ಸೊಗಸಾಗಿ ಹಾಡಿಕೊಟ್ಟರು, ಹೊಡಿಬಡಿ ಕಥೆಗಳನ್ನು ಬಿಟ್ಟು ಭಾವನಾತ್ಮಕವಾಗಿ ಏನಾದರೂ ಮಾಡಬೇಕೆಂದಾಗ ಹುಟ್ಟಿದ್ದೇ ಗುಂಡನ ಕಥೆ, ಸೆನ್ಸಾರ್‌ ಮಂಡಳಿ ಚಿತ್ರಕ್ಕೆ ಯಾವುದೇ ಕಟ್ ಸೂಚಿಸದೆ 'ಯು/ಎ' ಕೊಟ್ಟಿದೆ,

ಶಂಕರ ನಿಧನನಾದ ಮೇಲೆ ಆತನ ಮಗನಿಂದ ಕಥೆ ಕಂಟಿನ್ಯೂ ಆಗುತ್ತದೆ. ರಾಕೇಶ್ ಅಡಿಗ ಶಂಕರನ ಮಗನಾಗಿ ನಟಿಸಿದ್ದು, ಆತನಿಗೆ ನಾಯಿಯೇ ಪ್ರಪಂಚ. ಸೋಷಿಯಲ್ ಕನ್‌ಸರ್ನ್ ಜೊತೆಗೆ ಡಿವೈನ್ ಕಂಟೆಂಟ್ ಕೂಡ ಈ ಚಿತ್ರದಲ್ಲಿದೆ.

1000653705

ಊಟಿ, ಶಿವಮೊಗ್ಗ, ತೀರ್ಥಹಳ್ಳಿ, ಬಾಳೆಹೊನ್ನೂರು, ಬೆಂಗಳುರು ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಸಲಾಗಿದ್ದು, ಚಿತ್ರದಲ್ಲಿ 6 ಹಾಡುಗಳನ್ನು ಆರ್.ಪಿ. ಪಟ್ನಾಯಕ್  ಅವರು ಕಂಪೋಜ್ ಮಾಡಿಕೊಟ್ಟಿದ್ದಾರೆ.

ತನ್ವಿಕ್ ಅದ್ಭುತವಾಗಿ ಚಿತ್ರವನ್ನು ಸೆರೆ ಹಿಡಿದಿದ್ದಾರೆ ಎಂದು ಹೇಳಿದರು. ಉಳಿದಂತೆ ನಾಯಕ ರಾಕೇಶ್ ಅಡಿಗ, ನಾಯಕಿ ರಚನಾ ಇಂದರ್, ಛಾಯಾಗ್ರಾಹಕ ತನ್ವಿಕ್, ಬಾಲನಟ ಜೀವನ್ ಚಿತ್ರದ ವಿಶೇಷತೆಗಳ ಕುರಿತಂತೆ ಮಾತನಾಡಿದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ