ನೂರು ಜನ್ಮಕು..... ನೂರಾರು ಜನ್ಮಕೂ' `ಗರನೆ ಗರಗರನೆ.......' `ಮಿಂಚಾಗಿ ನೀನು ಇರಲು.......' ಮೇಲಿನ ಮಾಧುರ್ಯ ತುಂಬಿದ ಹಾಡುಗಳನ್ನು ನೀವು ಟಿ.ವಿಯಲ್ಲಿ ನೋಡುತ್ತಿದ್ದಾಗ, ಅದೆಷ್ಟು ಚೆನ್ನಾಗಿ ನೃತ್ಯ ನಿರ್ದೇಶನ ಮಾಡಿದ್ದಾರೆ. ಯಾರಿರಬಹುದು ಆ ಕೊರಿೂಗ್ರಾಫರ್‌ ಎಂದು ನಿಮ್ಮ ಮನಸ್ಸಿನಲ್ಲಿ ಪ್ರಶ್ನೆ ಮೂಡದೇ ಇರದು.

ಇಂತಹ ಅದೆಷ್ಟೋ ಹಾಡುಗಳನ್ನು ನೃತ್ಯ ನಿರ್ದೇಶನ ಮಾಡಿದ ಕೀರ್ತಿ ಮದನ್‌ ಹರಿಣಿ ದಂಪತಿಗಳಿಗೆ ಸಲ್ಲುತ್ತದೆ.ಹರಿಣಿ ಹೆಜ್ಜೆ ಗುರುತು......

ಹರಿಣಿ ಮೂಲತಃ ಪುತ್ತೂರಿನವರು. ಬಾಲ್ಯದಿಂದಲೇ ಸಂಗೀತಾಸಕ್ತಿ. ಎರಡು ವರ್ಷದಲ್ಲಿಯೇ ಅವರಮ್ಮ ಸಂಗೀತದ ಮೇಷ್ಟ್ರು ಬಳಿ ಕರೆದುಕೊಂಡು ಹೋಗಿ, ನನ್ನ ಮಗಳಿಗೆ ಸಂಗೀತ ಕಲಿಸಿ ಎಂದಿದ್ದರಂತೆ. ಇಷ್ಟು ಚಿಕ್ಕ ವಯಸ್ಸಿನ ಮಗುವಿಗೆ ಹೇಗೆ ಕಲಿಸುವುದು ಎಂದು ಸಂಗೀತ ಮೇಷ್ಟ್ರಿಗೆ ಗೊಂದಲವಾಗಿತ್ತಂತೆ. ಹೀಗೆ ಶುರುವಾದ ಸಂಗೀತದ ಕಲಿಕೆ ಕಾಲೇಜು ಕಟ್ಟೆ ಏರುವತನಕ ಮುಂದುವರಿಯಿತು. ಎರಡು ವರ್ಷ ಕಾಲೇಜು ಶಿಕ್ಷಣ ಮುಗಿಯುತ್ತಿದ್ದಂತೆ ನೃತ್ಯಪ್ರೇಮಿ ಮದನ್‌ ಜೊತೆ ಮದುವೆ. ಮದನ್‌ ಆ ಮುಂಚೆಯೇ ಮಲೆಯಾಳಂ ಚಿತ್ರರಂಗದಲ್ಲಿ ಕೊರಿಯೊಗ್ರಾಫರ್‌ ಆಗಿ ಛಾಪು ಮೂಡಿಸಿದ್ದರು.

20201202085652_0C0A1440 (1)

ಮದುವೆಯ ಬಳಿಕ ಮದನ್‌ ಹರಿಣಿ ಮದುವೆಯ ಬಳಿಕ ಬೆಂಗಳೂರಿಗೆ ಬರುತ್ತಾರೆ. ಆರೂರು ಪಟ್ಟಾಭಿಯವರ `ನಾದ ಸುರಭಿ' ಚಿತ್ರದ ತ್ಯಾಗರಾಜರ ಕೀರ್ತನೆಯೊಂದಕ್ಕೆ ಈ ಜೋಡಿಗೆ ಕೊರಿಯೊಗ್ರಾಫ್‌ ಮಾಡುವ ಅವಕಾಶ ಸಿಕ್ಕಿತು. ಬಳಿಕ `ಏಳು ಕೋಟಿ ಮಾರ್ತಾಂಡ, ಗೆಜ್ಜೆನಾದ' ಚಿತ್ರಗಳಿಗೆ ನೃತ್ಯ ನಿರ್ದೇಶನದ ಅವಕಾಶ ಸಿಕ್ಕಿತು.

ಮೊದಲ ಚಿತ್ರದಲ್ಲಿನ ನೃತ್ಯ ನಿರ್ದೇಶನದಿಂದ ಮದನ್‌ ಹರಿಣಿ ಜೋಡಿಗೆ ಸಾಕಷ್ಟು ಆತ್ಮವಿಶ್ವಾಸ ಮೂಡಿತು. ಅದಾದ ಬಳಿಕ ನಾಗತಿಹಳ್ಳಿಯವರ `ಅಮೆರಿಕ ಅಮೆರಿಕ' ಚಿತ್ರದ `ನೂರು ಜನ್ಮಕು, ನೂರಾರು ಜನ್ಮಕೂ...' ಹಾಡುವ ಅವರಿಗೆ ಹೊಸದೊಂದು ಛಾಪು ಮೂಡಿಸಿತು. ಅಲ್ಲಿಂದ ಮುಂದೆ ಅವರ ಸಿನಿಪಯಣ ಹೇಗೆ ಸಾಗಿತೆಂದರೆ, ಹಿಂದೆ ನೋಡದಂತೆ ಮಾಡಿತು. ಒಂದಾದ ನಂತರ ಒಂದು ಚಿತ್ರಗಳು ಸಿಗುತ್ತಾ ಹೋದವು.

ಕನ್ನಡಿಗರಿಗೆ ಆದ್ಯತೆ

ಮದನ್‌ ಹರಿಣಿ ಸಿನಿಮಾರಂಗದಲ್ಲಿ ಹೆಜ್ಜೆ ಹಾಕುತ್ತಿದ್ದಾಗ, ಸಮೂಹ ನೃತ್ಯಗಳಿಗಾಗಿ ಹುಡುಗಿಯರನ್ನು ಚೆನ್ನೈನಿಂದ ಕರೆಸಲಾಗುತ್ತಿತ್ತು. ನಾವೇಕೆ ನಮ್ಮ ನೆಲದ ಹುಡುಗಿಯರಿಗೆ ಅವಕಾಶ ಕೊಡಬಾರದು ಎಂದು ದಂಪತಿಗಳು ಯೋಚಿಸುತ್ತಿದ್ದರು. ಆದರೆ ಆಗ ಸಿನಿಮಾ ಇಂಡಸ್ಟ್ರೀಗೆ ಹುಡುಗಿಯರು ಬರಲು ಹಿಂದೇಟು ಹಾಕುತ್ತಿದ್ದರು. ಅಂತಹ ಸಂದರ್ಭದಲ್ಲಿ ಹಾಸನ, ಅರಸೀಕೆರೆ ಮುಂತಾದ ಕಡೆ ದಂಪತಿಗಳು ಸುತ್ತಾಡಿ ಆರ್ಕೆಸ್ಟ್ರಾದಲ್ಲಿ ನೃತ್ಯ ಮಾಡುತ್ತಾ ಹಾಡುತ್ತಿದ್ದ ಹುಡುಗಿಯರಿಗೆ ತಮ್ಮ ತಂಡ ಸೇರಲು ವಿನಂತಿಸಿಕೊಂಡರು. ``ನಾವು ಗಂಡ ಹೆಂಡತಿ ಎಂಬ ಕಾರಣಕ್ಕೆ ಬಹಳಷ್ಟು ಹುಡುಗಿಯರು ಬರಲು ಒಪ್ಪಿಕೊಂಡರು, ಎಂದು ಹರಿಣಿ ಹೇಳುತ್ತಾರೆ.

ಪತಿಯೇ ಗುರು ಮಾರ್ಗದರ್ಶಕ

ನಾನು ಸಿನಿಮಾ ಉದ್ಯಮಕ್ಕೆ ಬರಲು ಪತಿಯೇ ಮುಖ್ಯ ಪ್ರೇರಣೆ. ಅವರೇ ನನ್ನ ಗುರು, ಮಾರ್ಗದರ್ಶಕ ಎಲ್ಲ ಆಗಿದ್ದಾರೆ. ಅವರಿಂದಲೇ ನಾನು ನೃತ್ಯ ನಿರ್ದೇಶನದ ಎಲ್ಲ ಪಟ್ಟಗಳನ್ನು ಕಲಿತುಕೊಂಡೆ, ಈಗಲೂ ಕಲಿಯುತ್ತಿದ್ದೇನೆ. ನಮ್ಮದು ಒಟ್ಟಾರೆ ಟೀಮ್ ವರ್ಕ್‌. ಎಲ್ಲರೂ ಸೇರಿಸಿ ಒಂದು ಹಾಡಿಗೆ ಸುಂದರ ರೂಪ ಕೊಡಲು ಪ್ರಯತ್ನ ಮಾಡುತ್ತೇವೆ, ಎಂದು ಹರಿಣಿ ಹೇಳುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ